ಜೀವ ವಿಮಾ ನಿಗಮ (LIC) ಕಳೆದ ವಾರ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿಗೆ, ಸರ್ಕಾರದಿಂದ ಶೇಕಡಾ 5 ರಷ್ಟು ಷೇರುಗಳನ್ನು ಮಾರಾಟ ಮಾಡಲು ಕರಡು ಪತ್ರಗಳನ್ನು ಸಲ್ಲಿಸಿದೆ. ಇದರ ಒಟ್ಟು ಮೊತ್ತವನ್ನು 63,000 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
LIC ಈ ಹಿಂದೆ LIC ಆಫ್ ಇಂಡಿಯಾದ ಎಲ್ಲಾ ಪಾಲಿಸಿದಾರರಿಗೆ, ಕಂಪನಿಯ ಮುಂಬರುವ IPO ದ ಚಂದಾದಾರಿಕೆಯ ಬಗ್ಗೆ ಸಾರ್ವಜನಿಕ ಸೂಚನೆಯನ್ನು ನೀಡಿತ್ತು. ಕಂಪನಿಯ ದಾಖಲೆಗಳಲ್ಲಿ ತಮ್ಮ PAN ಕಾರ್ಡ್ ಅನ್ನು ನವೀಕರಿಸಿದರೆ ಅಥವಾ ಲಿಂಕ್ ಮಾಡಿದರೆ ಮಾತ್ರ, ಪಾಲಿಸಿದಾರರು IPOಗೆ ಚಂದಾದಾರರಾಗಬಹುದು ಎಂದು ತಿಳಿಸಿತ್ತು. ಅಷ್ಟೇ ಅಲ್ಲಾ ಎಲ್ಐಸಿಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕಂಪನಿಯು, ಫೆಬ್ರವರಿ 28, 2022ರ ವರೆಗೆ ಗಡುವು ನೀಡಿದೆ.
ನಾನೇನು ಭಯೋತ್ಪಾದಕನೇ…..? ಅವರೇಕೆ ನನ್ನನ್ನು ಕಂಡರೆ ಹೆದರುತ್ತಾರೆ…..? ಬಿಜೆಪಿ ವಿರುದ್ಧ ಕಿಡಿಕಾರಿದ ಚರಂಜಿತ್ ಸಿಂಗ್ ಚನ್ನಿ…..!
ನೀವು ಎಲ್ಐಸಿ ಪಾಲಿಸಿದಾರರಿಗಿದ್ದು, ಎಲ್ಐಸಿಯೊಂದಿಗೆ ನಿಮ್ಮ ಪ್ಯಾನ್ ಲಿಂಕ್ ಆಗಿರದಿದ್ದರೆ ಚಿಂತೆ ಬೇಡ. ಆನ್‌ಲೈನ್‌ನಲ್ಲಿ ನಿಮ್ಮ ಪ್ಯಾನ್ ವಿವರಗಳನ್ನು ನವೀಕರಿಸುವ ಹಂತಹಂತದ ಪ್ರಕ್ರಿಯೆ ಬಗ್ಗೆ ನಾವು ಮಾಹಿತಿ ನೀಡುತ್ತೇವೆ.
1. ನಿಗಮದ ವೆಬ್‌ಸೈಟ್ www.licindia.in ಅಥವಾ https://licindia.in/Home/Online-PAN-Registration ಗೆ ಭೇಟಿ ನೀಡಿ.
2. ನಿಮ್ಮ ಪಾಲಿಸಿ ಸಂಖ್ಯೆ, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಇಮೇಲ್ ಐಡಿಯನ್ನು ಸಿದ್ಧವಾಗಿಡಿ, ನಿಮ್ಮ ಪ್ಯಾನ್ ಅನ್ನು ನವೀಕರಿಸುವಾಗ ಅದನ್ನು ಭರ್ತಿ ಮಾಡಬೇಕಾಗುತ್ತದೆ.
3. ಮೇಲಿನ ಲಿಂಕ್ ಅನ್ನು ಬಳಸಿಕೊಂಡು ನಿಮ್ಮ ಎಲ್ಲಾ LIC ಪಾಲಿಸಿಗಳಿಗೆ ನೀವು ದಾಖಲೆಗಳನ್ನು ನವೀಕರಿಸಬಹುದು.
4. ನಿಗಮದ ವೆಬ್‌ಸೈಟ್ www.licindia.in ಅಥವಾ https://linkpan.licindia.in/UIDSeedingWebApp/getPolicyPANStatus ಗೆ ಭೇಟಿ ನೀಡುವ ಮೂಲಕ ನಿಮ್ಮ ಪ್ಯಾನ್ ಅನ್ನು ನಿಮ್ಮ ಪಾಲಿಸಿಯಲ್ಲಿ ನೋಂದಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬಹುದು.
ನಿಮಗೆ ಆನ್‌ಲೈನ್ ಪ್ರಕ್ರಿಯೆ ಕಷ್ಟ ಎನಿಸಿದರೆ, ನೀವು ಸಹಾಯಕ್ಕಾಗಿ ನಿಮ್ಮ LIC ಏಜೆಂಟ್ ಅನ್ನು ಸಹ ಸಂಪರ್ಕಿಸಬಹುದು.