ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಹೆಸರು ಪಡೆದುಕೊಂಡಿರುವ ಕಿಯಾ, ತನ್ನ ನಾಲ್ಕನೇ ಕಾರ್ ಅನ್ನು ಭಾರತದಲ್ಲಿ ಲೋಕಾರ್ಪಣೆ ಮಾಡಿದೆ. ಬಹು ನಿರೀಕ್ಷಿತ ಕಿಯಾ ಕಾರೆನ್ಸ್ ಅಧಿಕೃತವಾಗಿ ಇಂದು, ಅಂದರೆ ಫೆಬ್ರವರಿ15 ರಂದು ಭಾರತದಲ್ಲಿ ಲಾಂಚ್ ಆಗಿದೆ. ಕಿಯಾ ಮೋಟಾರ್ಸ್ ಈ ವೇರಿಯಂಟ್ ಅನ್ನು ಎಸ್ಯುವಿ, ಎಂಪಿವಿ ವರ್ಗಕ್ಕೆ ಸೇರಿಸದೆ ರಿಕ್ರಿಯೇಷನಲ್ ವಾಹನ ಎಂದು ಪರಿಚಯಿಸಿದೆ.
ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಷುರಿ ಮತ್ತು ಲಕ್ಷುರಿ ಪ್ಲಸ್ ಎಂಬ ಐದು ವೇರಿಯಂಟ್ ಗಳಲ್ಲಿ ಲಭ್ಯವಿರುವ, ಈ ಕಾರಿನ ಆರಂಭಿಕ ದರ (ಎಕ್ಸ್ ಶೋರೂಂ) 8.99 ಲಕ್ಷ ರೂ. ಆಗಿದ್ದು, ಟಾಪ್ ಎಂಡ್ 16.99 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದೆ. ಈಗಾಗ್ಲೇ ಕಿಯಾ ಕಾರೆನ್ಸ್ ಕಾರಿನ ಬುಕಿಂಗ್ ಜನವರಿ 14 ರಿಂದ ಆರಂಭಗೊಂಡಿದೆ. ಕಿಯಾ ಕಾರೆನ್ಸ್ ಕಾರನ್ನು 25,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು.
ಕಿಯಾ ಕಾರೆನ್ಸ್ ಕಾರು ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್, 1.4 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ 113 bhp ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಆಯ್ಕೆಯಲ್ಲಿ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್ಮಿಶನ್ ಹೊಂದಿದೆ.
ಇನ್ನು 1.4 ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಕಾರು 138 bhp ಪವರ್ ಹಾಗೂ 242 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಆಯ್ಕೆಯಲ್ಲಿ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್ಮಿಶನ್ ಹಾಗೂ 7 ಸ್ಪೀಡ್ DCT ಟ್ರಾನ್ಸ್ಮಿಶನ್ ಆಯ್ಕೆ ಹೊಂದಿದೆ. ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ ಕಾರು 113 bhp ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್ಮಿಶನ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಹೊಂದಿದೆ.
BIG NEWS: ಹಿಜಾಬ್ ವಿವಾದ; ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಆರಂಭ
ಕಿಯಾ ಕಾರೆನ್ಸ್ ಅತ್ಯಾಧುನಿಕ ಫೀಚರ್ಸ್ ಹೊಂದಿದೆ. 10.25 ಟಚ್ಸ್ಕ್ರೀನ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಎಸಿ, ಫ್ರಂಟ್ ವೆಂಟಿಲೇಟೆಡ್ ಸೀಟ್ಸ್ ಸನ್ರೂಫ್, ಹಲವು ಡ್ರೈವಿಂಗ್ ಮೋಡ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
ಕಿಯಾ ಕಾರೆನ್ಸ್ ಕಾರಿನ ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಕೂಡ ಲಭ್ಯವಿದೆ. 5 ಏರ್ಬ್ಯಾಗ್ಸ್, ABS, EBD, ಹಿಲ್ಸ್ಟಾರ್ಟ್ ಕಂಟ್ರೋಲ್, ಡೌನ್ಹಿಲ್ ಬ್ರೇಕ್ ಕಂಟ್ರೋಲ್, ವಾಹನ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್, ಹೈಲೈನ್ ಟೈಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ನಾಲ್ಕು ಡಿಸ್ಕ್ ಬ್ರೇಕ್, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಇನ್ನು ಟಾಪ್ ವೇರಿಯೆಂಟ್ ಕಾರು ರೈನ್ ಸೆನ್ಸಿಂಗ್ ವೈಪರ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಹಾಗೂ ರಿವರ್ಸ್ ಕ್ಯಾಮರಾ ಹೊಂದಿದೆ.