ಮೆಟಾವರ್ಸ್, ಸೂಪರ್ ಹೀರೊ, ಮೂವೀ ಥೀಮ್, ಹೆಲಿಕಾಪ್ಟರ್ ನಲ್ಲಿ ಗ್ರ್ಯಾಂಡ್ ಎಂಟ್ರಿ ಪಡೆಯೋ ವಧು ವರರ ನಡುವೆ ಇಲ್ಲೊಂದು ಜೋಡಿ ಬೃಂದಾವನದ ಥೀಮ್ ನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಅಂದು ರಾಧಾಕೃಷ್ಣ ಮದುವೆಯಾಗದೆ ಪ್ರೇಮಿಗಳಾಗಿಯೆ ಉಳಿದಿದ್ದರು, ಆದರೆ ಈ ಜೋಡಿ ರಾಧಾಕೃಷ್ಣರಂತೆ ಶೃಂಗಾರಗೊಂಡು ಆರತಕ್ಷತೆಯಲ್ಲಿ ಭಾಗವಹಿಸಿದ್ದಾರೆ.
ಮದುವೆ ಎನ್ನುವುದು ಎಲ್ಲರ ಜೀವನದ ಅತಿದೊಡ್ಡ ಘಟ್ಟ. ಇದನ್ನು ಸ್ಮರಣೀಯವಾಗಿಸೋಕೆ ವಿಭಿನ್ನ ಪ್ರಯತ್ನಗಳನ್ನ ಮಾಡುವ ಈ ಕಾಲದಲ್ಲಿ ಬೃಂದಾವನವನ್ನೆ ಧರೆಗಿಳಿಸಿದ ಈ ಜೋಡಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ವಧು ವರರು ಮಾತ್ರವಲ್ಲ ಮದುವೆಗೆ ಹಾಜರಾಗಿದ್ದ ಎಲ್ಲಾ ಸಂಬಂಧಿಕರು ಭಾರತದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಮೈಥಾಲಾಜಿ ಥೀಮ್ ಮದುವೆಯಲ್ಲಿ ಸಂಭ್ರಮ ಪಟ್ಟರು.
ಮಾಡೆಲ್ ಬಲೋಚ್ ಹತ್ಯೆ ಪ್ರಕರಣ: ಸಹೋದರನನ್ನು ಖುಲಾಸೆಗೊಳಿಸಿದ ಪಾಕಿಸ್ತಾನಿ ಕೋರ್ಟ್..!
ಮುಂಬೈನಲ್ಲಿ ಐಟಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿರುವ ವಧು-ವರರು ತಮ್ಮ ರಿಸೆಪ್ಷನ್ ಉಡುಗೆಗಳನ್ನ ಅವರೇ ಡಿಸೈನ್ ಮಾಡಿದ್ದರು. ಇಂಟ್ರೆಸ್ಟಿಂಗ್ ವಿಷಯವೆಂದರೆ ವರ ಕೃಷ್ಣ ಜನ್ಮಾಷ್ಟಮಿಯಂದು ಜನಿಸಿದ್ದರಿಂದ ಆತನಿಗೆ ಕೃಷ್ಣನ ಮೇಲೆ ಪ್ರೀತಿ ಭಕ್ತಿ ಎರಡು ಹೆಚ್ಚು. ಹೀಗಾಗಿ ಅವರಿಗೆ ಬೃಂದಾವನದ ಐತಿಹಾಸಿಕ ಥೀಮ್ನಲ್ಲಿ ಮದುವೆಯಾಗುವ ಆಸೆ ಇತ್ತು. ಕುಂಟುಂಬದವರ ಮುಂದೆ ಅವರ ಕನಸನ್ನು ಹೇಳೊಕೊಂಡಾಗ ಎಲ್ಲರೂ ಸೇರಿ, ಅವರ ಕನಸನ್ನ ನನಸಾಗಿಸಿದ್ದಾರೆ.