ದೆವ್ವಗಳು ಇವೆಯೇ ಎನ್ನುವುದು ಎಂದಿಗೂ ಅಂತ್ಯ ಕಾಣದ ವಾದ. ಆದರೆ, ಹಲವರು ದೆವ್ವ ಕಂಡಿದ್ದೇನೆ, ಮಾತಾಡಿದ್ದೇನೆ ಎಂಬ ಅನುಭವಗಳ ಸರಮಾಲೆಯನ್ನೇ ಬಿಚ್ಚಿಡುತ್ತಾರೆ. ಅದೇ ರೀತಿಯ ಒಂದು ಘಟನೆ ಬ್ರಿಟನ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೊವೆಂಟ್ರಿಯಲ್ಲಿ ‘ಪರ್ಡೀಸ್ ಪೆಟ್ ಶಾಪ್’ ಹೊಂದಿರುವ ರೆಬೆಕ್ಕಾ ಹ್ಯಾರ್ರಿಂಗ್ಟನ್ ಅವರು ಅಂಗಡಿಯಲ್ಲೇ ದೆವ್ವದ ಕಾಟ ಎದುರಿಸುತ್ತಿರುವ ಕಥೆ ಇದು.
ಮಾಡೆಲ್ ಬಲೋಚ್ ಹತ್ಯೆ ಪ್ರಕರಣ: ಸಹೋದರನನ್ನು ಖುಲಾಸೆಗೊಳಿಸಿದ ಪಾಕಿಸ್ತಾನಿ ಕೋರ್ಟ್..!
ಸಿಸಿ ಟಿವಿಯಲ್ಲಿ ಕೂಡ ಪೆಟ್ ಶಾಪ್ನಲ್ಲಿ ದೆವ್ವಗಳ ದಾಂಧಲೆ ದೃಶ್ಯಗಳು ಸೆರೆಯಾಗಿವೆಯಂತೆ. ಅಂಗಡಿಯಲ್ಲಿನ ಕೆಲಸಗಾರರು ಅನೇಕರು ರಾಜೀನಾಮೆ ಬಿಸಾಡಿ ಜೀವ ಉಳಿಸಿಕೊಳ್ಳಲು ಓಡಿದ್ದಾರಂತೆ. ಸಿಸಿ ಟಿವಿಯಲ್ಲಿ ದೆವ್ವಗಳು ಅಂಗಡಿಯ ಬಾಕ್ಸ್ಗಳನ್ನು ಎಸೆಯುತ್ತಿರುವುದು, ಆಟಿಕೆಗಳು ತಾವೇ ತಾವಾಗಿ ವರ್ತಿಸುತ್ತಿರುವುದು, ಗ್ರಾಹಕರು ಬೆದರುತ್ತಿರುವ ಅನೇಕ ದೃಶ್ಯಗಳು ಸೆರೆಯಾಗಿದ್ದು, ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ದೆವ್ವಗಳ ಹತ್ತಿಕ್ಕುವವರು ಅನೇಕ ಮಂದಿ ಅಮೆರಿಕ ಮತ್ತು ಬ್ರಿಟನ್ಗಳಲ್ಲಿ ಇದ್ದಾರೆ. ಅವರನ್ನು ‘ಘೋಸ್ಟ್ ಹಂಟರ್ಸ್’ ಎಂದು ಕರೆಯಲಾಗುತ್ತದೆ. ಅಂಥದ್ದೇ ಒಬ್ಬ ಹಂಟರ್ನನ್ನು ಪರ್ಡೀಸ್ ಪೆಟ್ ಶಾಪ್ಗೆ ಕರೆದೊಯ್ದಾಗ ಆತ ಕೂಲಂಕುಷ ತಪಾಸಣೆ ನಡೆಸಿದ ಬಳಿಕ ಅಂಗಡಿಯಲ್ಲಿ ಪುರುಷ ದೆವ್ವವೊಂದು ಇದೆ ಎಂದು ವರದಿ ಕೊಟ್ಟಿದ್ದಾನೆ.
ಸ್ಥಳೀಯವಾಗಿ ನಡೆದ ಯುದ್ಧವೊಂದರಲ್ಲಿ ಮೃತನಾದ ವ್ಯಕ್ತಿಯ ಆತ್ಮವು ದೆವ್ವದಂತೆ 40 ರಿಂದ 50 ವರ್ಷಗಳಿಂದ ಅಂಗಡಿ ಸ್ಥಳದಲ್ಲೇ ವಾಸಿಸುತ್ತಿದೆಯಂತೆ. ಇದು ವಿಚಿತ್ರವಾದರೂ, ಸ್ಥಳೀಯ ಮಾಧ್ಯಮಗಳೇ ಇದನ್ನು ವರದಿ ಮಾಡುವ ಮೂಲಕ ಕುತೂಹಲ ಹೆಚ್ಚಿಸಿವೆ.
https://www.youtube.com/watch?v=awEFPoDihVM&feature=youtu.be