alex Certify 60 ವರ್ಷದ ದಿನಗೂಲಿ ನೌಕರನೀಗ ಸೂಪರ್‌ ಮಾಡೆಲ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

60 ವರ್ಷದ ದಿನಗೂಲಿ ನೌಕರನೀಗ ಸೂಪರ್‌ ಮಾಡೆಲ್‌….!

ಬಣ್ಣ ಮಾಸಿದ ಪಟಾಪಟಿ ಲುಂಗಿ, ಅದರ ಕೆಳಗೆ ಪಂಚೆಯಿಂದ ಇಣುಕುವ ಚಡ್ಡಿ. ಮೇಲೆ ಗುಂಡಿಗಳು ಕಿತ್ತುಹೋಗಿರುವ ಶರ್ಟ್‌, ತಲೆಗೊಂದು ಟವೆಲ್‌ ಸುತ್ತಿಕೊಂಡು ಗಡ್ಡ ಬಿಟ್ಟುಕೊಂಡು ನಿಂತ 60 ವರ್ಷದ ಬಾಗಿದ ತೆಳುವಾದ ಶರೀರ.

ಇದು ಒಂದು ಕಡೆಯಾದರೆ, ಮತ್ತೊಂದು ಕಡೆಯಲ್ಲಿ ಬಿಸ್ಕೆಟ್‌ ಬಣ್ಣದ ಸೂಟ್‌, ಕೈನಲ್ಲಿ ಟ್ಯಾಬ್‌, ಕಣ್ಣಿಗೆ ಕೂಲಿಂಗ್‌ ಗ್ಲಾಸ್‌, ಟ್ರಿಮ್‌ ಮಾಡಿದ ಗಡ್ಡಕ್ಕೆ ಅಂದವಾಗಿ ಹರಡಿಕೊಂಡ ಮೀಸೆ, ಹೆಬ್ಬುಲಿ ಸಿನಿಮಾದಲ್ಲಿ ಹೀರೋ ಮಾಡಿಕೊಂಡಿರುವ ತಲೆಕೂದಲ ಸ್ಟೈಲ್‌.

ಏನಿದು, ಎಂದು ಅಚ್ಚರಿಪಡಬೇಡಿ, 60 ವರ್ಷದ ಮಮ್ಮಕ್ಕಿ ಎಂಬ ಕೇರಳದ ದಿನಗೂಲಿ ನೌಕರನನ್ನು ಫೋಟೊಗ್ರಾಫರ್‌ ಒಬ್ಬರು ಎರಡು ಬಗೆಯಲ್ಲಿ ತೋರಿಸಿದ್ದಾರೆ.

ಮೊದಲ ಫೋಟೊದಲ್ಲಿ ಅವರು ನಿತ್ಯ ಕೆಲಸಕ್ಕೆ ತೆರಳುವ ಮಾದರಿ. ಮತ್ತೊಂದರಲ್ಲಿ ಸೂಟು, ಬೂಟು ತೊಟ್ಟ ಉದ್ಯಮಿಯ ಅವತಾರ. ಅಂದಹಾಗೇ ಈ ಸೂಪರ್‌ ಮಾಡೆಲ್‌ ಸ್ಟೈಲ್‌ ರಚನೆ ಹಿಂದಿನ ಫೋಟೊಗ್ರಾಫರ್‌ ಹೆಸರು ಶರೀಕ್‌ ವಯಾಳಿಲ್‌. ಮೇಕಪ್‌ ಮಾಡಿದ್ದು ಆರ್ಟಿಸ್ಟ್‌ ಮಜ್ನಾಸ್‌. ಕೋಯಿಕ್ಕೋಡ್‌ ಕೊಡಿವಳ್ಳಿ ಮೂಲದ ಮಮ್ಮಿಕ್ಕ ಈಗ ಇನ್‌ಸ್ಟಾಗ್ರಾಂನಲ್ಲಿ ಸೂಪರ್‌ ಮಾಡೆಲ್‌ ಆಗಿಬಿಟ್ಟಿದ್ದಾರೆ.

ಅವರ ಫೋಟೊಗಳು ಸಖತ್‌ ವೈರಲ್‌ ಆಗಿವೆ. ಸ್ಥಳೀಯ ಗ್ರಾಮದಲ್ಲಿ ಕೂಡ ಮಮ್ಮಿಕ್ಕಗೆ ಭಾರಿ ಫ್ಯಾನ್ಸ್‌ ಇದ್ದಾರೆ. ಸಿನಿಮಾದಲ್ಲಿ ಯಾಕೆ ಒಂದು ಅವಕಾಶ ಸಿಗಬಾರದು ಎಂದು ಸ್ಥಳೀಯರೇ ಅನೇಕ ನಿರ್ದೇಶಕರಿಗೆ ಪತ್ರ ಕೂಡ ಬರೆದಿದ್ದಾರಂತೆ. ನೋಡಿ ಇಳಿವಯಸ್ಸಿಗೆ ಹತ್ತಿರವಾಗುತ್ತಿರುವ ಮಮ್ಮಿಕ್ಕಗೆ ಹೇಗೆ ಒಲಿದಿದೆ ಅದೃಷ್ಟ.

https://youtu.be/PtswR_UrR1w

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...