ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡುಬಂತು ಅಳಿವಿನಂಚಿನಲ್ಲಿರುವ ಪಕ್ಷಿ..! 15-02-2022 8:59AM IST / No Comments / Posted In: Latest News, India, Live News ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯ ಕಮ್ಲಾಂಗ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಕೊಕ್ಕರೆ (ಉದ್ದ ಕಾಲಿನ ಬಿಳಿ ಬಣ್ಣದ ನೀರು ಹಕ್ಕಿ, ಬಕ) ಇತ್ತೀಚೆಗೆ ಕಂಡುಬಂದಿದೆ. ಅಪರೂಪದ ಕೊಕ್ಕರೆ (ಆರ್ಡಿಯಾ ಇನ್ಸಿಗ್ನಿಸ್) ಅನ್ನು ಸಾಮ್ರಾಜ್ಯಶಾಹಿ ಬಕ ಎಂದು ಕೂಡ ಕರೆಯಲಾಗುತ್ತದೆ. ಈ ಅಪರೂಪದ ಪಕ್ಷಿಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಜಲರಾಶಿಯ ನಡುವೆ ಬಂಡೆಯ ಮೇಲೆ ಹಕ್ಕಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಳಿವಿನಂಚಿನಲ್ಲಿರುವ ಪಕ್ಷಿಯು ಅರಣ್ಯಕ್ಕೆ ಹಾರಿಹೋಗುವ ಕೆಲವೇ ಸೆಕೆಂಡುಗಳಷ್ಟು ಮಾತ್ರ ದೃಶ್ಯ ಸೆರೆಹಿಡಿಯಲಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ…! ಕೊನೆಯಾಗುತ್ತಾ ವರ್ಕ್ ಫ್ರಮ್ ಹೋಂ…? ಸಾಮಾನ್ಯವಾಗಿ ಈ ಪಕ್ಷಿಗಳು ಅಡೆತಡೆಯಿಲ್ಲದ ಆವಾಸಸ್ಥಾನಗಳಿಗೆ ಹೆಚ್ಚಾಗಿ ಆದ್ಯತೆ ನೀಡುತ್ತದೆ. ಐಯುಸಿಎನ್ ಇದನ್ನು ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಹಕ್ಕಿ ಎಂದು ವರ್ಗೀಕರಿಸಿದೆ. ಕಮಲಾಂಗ್ ಹುಲಿ ಸಂರಕ್ಷಿತ ಪ್ರದೇಶವು, ಕಮ್ಲಾಂಗ್ ನದಿಯ ಹೆಸರನ್ನು ಹೊಂದಿದೆ. ಅಧಿಕೃತ ದಾಖಲೆಗಳ ಪ್ರಕಾರ, ಅಭಯಾರಣ್ಯವು 60ಕ್ಕೂ ಹೆಚ್ಚು ಜಾತಿಯ ಸಸ್ತನಿಗಳು, 105 ಪಕ್ಷಿ ಪ್ರಭೇದಗಳು ಮತ್ತು 20 ಜಾತಿಯ ಸರೀಸೃಪಗಳಿಗೆ ನೆಲೆಯಾಗಿದೆ. ಅಲ್ಲದೆ, ರಾಯಲ್ ಬೆಂಗಾಲ್ ಟೈಗರ್, ಚಿರತೆ, ಮೋಡದ ಪಟ್ಟಿಯುಳ್ಳ ಚಿರತೆ, ಹಿಮ ಚಿರತೆ, ಏಷ್ಯನ್ ಆನೆಗಳು, ಕಾಡುಹಂದಿ, ಕೃಷ್ಣಮೃಗ, ಜಿಂಕೆ, ಕಪ್ಪು ದೈತ್ಯ ಅಳಿಲುಗಳು ಇತ್ಯಾದಿ ಇಲ್ಲಿನ ಪ್ರಾಣಿ ಪ್ರಭೇದಗಳಾಗಿವೆ. ಈ ಹಕ್ಕಿಯು ಬಿಳಿ ಗಂಟಲು ಮತ್ತು ಸಾದಾ ಕಡು ಬೂದು ಬಣ್ಣದ್ದಾಗಿದೆ. ಬೂದು ಬಕದಲ್ಲಿರುವಂತೆ ಕುತ್ತಿಗೆಯ ಮೇಲೆ ಯಾವುದೇ ಕಪ್ಪು ಪಟ್ಟೆಗಳು ಇದರಲಿಲ್ಲ. ಇವುಗಳು ಹೆಚ್ಚಾಗಿ ಭಾರತ ಮತ್ತು ಮ್ಯಾನ್ಮಾರ್‌ನ ಪೂರ್ವ ಹಿಮಾಲಯದ ತಪ್ಪಲಿನಲ್ಲಿರುವ ಉಷ್ಣವಲಯದ ಮತ್ತು ಉಪೋಷ್ಣವಲಯದ ಕಾಡುಗಳಲ್ಲಿ ಕಂಡುಬರುತ್ತವೆ. ಕೆಲವು ಪಕ್ಷಿಗಳು ಭೂತಾನ್‌ನ ಉಪ-ಉಷ್ಣವಲಯದ ಪ್ರದೇಶಗಳಲ್ಲಿಯೂ ಕಂಡುಬರುತ್ತವೆ. ಈ ಹಕ್ಕಿಯ ಕ್ಷೀಣಿಸುತ್ತಿರುವ ಸಂಖ್ಯೆಯು ವ್ಯಾಪಕವಾದ ನಷ್ಟ, ಅವನತಿ ಮತ್ತು ಅರಣ್ಯ ಮತ್ತು ಜೌಗು ಪ್ರದೇಶಗಳ ಅಡಚಣೆಗೆ ಇಷ್ಟವಾಗಿದೆ. White bellied Heron (Ardea insignis) sighted during the AITE 2021-22.Prefers undisturbed habitats. IUCN has categorized it under CRITICALLY ENDANGERED species list,with an estimated 250 individuals in the world.@ntca_india @ArunForests @MyGovArunachal @ParveenKaswan pic.twitter.com/pc2IFV0D65 — Kamlang Tiger Reserve (@KamlangTiger) February 12, 2022