ಕ್ಷುಲ್ಲಕ ಕಾರಣಕ್ಕೆ ಬೇಸರಗೊಂಡ 12 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಎಂಪಿಯ ರಾಜಧಾನಿ ಭೋಪಾಲ್ನ ಗೋವಿಂದಪುರ ನಿವಾಸದಲ್ಲಿ ಬಾಲಕ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
6 ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಅನ್ನು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಶನಿವಾರ ಆತನ ಪೋಷಕರು, ಆರ್ಯನ್ ಒಬ್ಬನನ್ನೇ ಮನೆಯಲ್ಲಿ ಬಿಟ್ಟು ಮದುವೆಗೆ ಹೋಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ, ಆರ್ಯನ್ ಪೋಷಕರು ಅವನನ್ನು ಮನೆಯಲ್ಲಿಯೇ ಬಿಟ್ಟು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಆರ್ಯನ್ ಗೆ ಆತನ ಹಿರಿಯ ಸಹೋದರ ಮನೆಗೆ ಬಂದ ಮೇಲೆ ಇಬ್ಬರು ಮದುವೆ ಪಾರ್ಟಿಗೆ ಬರುವಂತೆ ತಿಳಿಸಿದ್ದರು. ಆದರೆ ಆರ್ಯನ್ ಅವರ ಅಣ್ಣ ಸ್ಥಳೀಯ ಕ್ಲಬ್ನಿಂದ ಮನೆಗೆ ಬರಲು ಸ್ವಲ್ಪ ತಡವಾಯಿತು, ಇದರಿಂದ ದೊಡ್ಡ ಅನಾಹುತವೇ ನಡೆದು ಹೋಗಿದೆ.
ಈ ಜಿಲ್ಲೆಯಲ್ಲಿ ಗ್ರಾಮಗಳಿಗೂ ಮಾಡಲಾಗುತ್ತದೆ ವಿವಾಹ…..! ಇದರ ಹಿಂದೆ ಇದೆ ಈ ವಿಶೇಷ ಕಾರಣ
ಆರ್ಯನ್ ಹಿರಿಯ ಸಹೋದರ ಮನೆಗೆ ಬಂದಾಗ, ಆತ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಆರ್ಯನ್ ನನ್ನು ಆ ಸ್ಥಿತಿಯಲ್ಲಿ ಕಂಡ ಅಣ್ಣ ಜೋರಾಗಿ ಕಿರುಚಿಕೊಂಡಿದ್ದಾನೆ. ಅವನ ಕೂಗು ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಪೊಲೀಸರು ಮತ್ತು ಪೋಷಕರಿಗೆ ಕರೆ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ, ಪೋಷಕರು ಮನೆಗೆ ಧಾವಿಸಿದ್ದಾರೆ. ಹುಡುಗನನ್ನು ಬದುಕಿಸುವ ಆಸೆಯೊಂದಿಗೆ ಮೂರು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಆದರೆ, ಮೂರೂ ಆಸ್ಪತ್ರೆಗಳ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತ ಆರ್ಯನ್ ಹಠಮಾರಿಯಾಗಿದ್ದ ಎಂದು ಆತನ ಪೋಷಕರು, ಸಂಬಂಧಿಕರು ತಿಳಿಸಿದ್ದಾರೆ. ಅವನನ್ನು ಆತನ ಪೋಷಕರೆ ಪಾರ್ಟಿಗೆ ಕರೆದುಕೊಂಡು ಹೋಗಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಈ ರೀತಿಯಾಗಿ ಮಾಡಿಕೊಂಡಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ.