ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ತಾರಕಕ್ಕೇರಿರುವ ಮಧ್ಯೆ ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದ್ದು, ಇದರ ಮಧ್ಯೆ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಫಾತೀಮಾ ಅವರು ಬುರ್ಖಾ ಮತ್ತು ಹಿಜಾಬ್ ಧರಿಸಿ ಸದನಕ್ಕೆ ಬಂದಿದ್ದಾರೆ.
ಇಂದಿನಿಂದ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು, ಹೀಗಾಗಿ ಈ ಹಿಂದೆ ತಾವು ಹೇಳಿದಂತೆಯೇ ಶಾಸಕಿ ಖನೀಜ್ ಫಾತೀಮಾ, ಬುರ್ಖಾ ಹಾಗೂ ಹಿಜಾಬ್ ಧರಿಸಿ ಸದನಕ್ಕೆ ಬಂದಿದ್ದಾರೆ.
ಹಿಜಾಬ್ – ಕೇಸರಿ ಶಾಲು ತೀವ್ರ ಸ್ವರೂಪ ಪಡೆದುಕೊಂಡಿದ್ದ ಸಂದರ್ಭದಲ್ಲಿ ಶಾಸಕಿ ಖನೀಜ್ ಫಾತೀಮಾ ಅವರು, ತಾವು ಸದನಕ್ಕೆ ಹಿಜಾಬ್ ಧರಿಸಿ ಬರುತ್ತೇನೆ ತಾಕತ್ತಿದ್ದರೆ ತಮ್ಮನ್ನು ತಡೆಯಲಿ ಎಂದು ಸವಾಲು ಹಾಕಿದ್ದರು.