92 ವರ್ಷದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ಇತ್ತೀಚೆಗೆ ಕೊರೊನಾ ಸೋಂಕಿನ ಚೇತರಿಕೆ ಬಳಿಕ ಕಾಣಿಸಿಕೊಂಡ ತೀವ್ರ ಅನಾರೋಗ್ಯದಿಂದ ಮೃತರಾದರು. ಅವರ ಅಗಲಿಕೆಯ ನೋವು ಇನ್ನೂ ಕೂಡ ಹಲವು ಗಾನಪ್ರಿಯರು, ಬಾಲಿವುಡ್ ಹಿರಿಯ ನಟರನ್ನು ಕಾಡುತ್ತಿದೆ. ಅಂಥ ಕಂಠ ಸಿರಿ ಅವರದ್ದಾಗಿತ್ತು.
ಭಾರತ ರತ್ನ ಪುರಸ್ಕೃತ ಲತಾ ಮಂಗೇಶ್ಕರ್ ಹಾಡಿದ ಪ್ರತಿ ಹಾಡು ಕೂಡ ಇಂದಿಗೂ ಅತ್ಯಂತ ತಾಜಾತನ ಮತ್ತು ಸ್ವರ ಮಾಧುರ್ಯಗಳಿಂದ ಹೊಸದಾಗಿ ಕೇಳುವವರನ್ನು ಕೂಡ ಮಂತ್ರಮುಗ್ಧಗೊಳಿಸುತ್ತದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಲತಾ ಅವರನ್ನು ನೆನೆಸಿಕೊಂಡು ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಾಕಿದ್ದಾರೆ. 1964ರಲ್ಲಿ ತೆರೆಕಂಡ ಹಿಂದಿ ಸಿನಿಮಾ ’ವೋ ಕೌನ್ ಥೀ’ ಯಲ್ಲಿ ಲತಾಜೀ ಅವರು ಹಾಡಿರುವ ʼಲಗ್ ಜಾ ಗಲೇʼ ಎಂಬ ಜನಪ್ರಿಯ ಹಾಡನ್ನು ಸಲ್ಮಾನ್ ಗುನುಗಿದ್ದಾರೆ.
ಸಿನಿಮಾ ತಾರೆ ಸಾಧನ ಅವರು ಚಿತ್ರದಲ್ಲಿ ಈ ಹಾಡನ್ನು ಹಾಡುತ್ತಾ ನಟಿಸಿದ್ದಾರೆ. ತಮ್ಮದೇ ದೊಡ್ಡ ಭಾವಚಿತ್ರದ ಮುಂದೆ ನಿಂತು ಹಾಡಿನ ವಿಡಿಯೊ ಪೋಸ್ಟ್ ಮಾಡಿರುವ ಸಲ್ಮಾನ್, ʼಹಿಂದೆಯೂ ಯಾರೂ ಇರಲಿಲ್ಲ. ಮುಂದೆಯೂ ನಿಮ್ಮಂತಹವರು ಇರಲು ಸಾಧ್ಯವಿಲ್ಲ ಲತಾಜೀʼ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಬೇರೆ ಬಟ್ಟೆ ಹಾಕಿದ್ರೆ ರೇಪ್ ಆಗುತ್ತಾ…? ಜಮೀರ್ ಅಹ್ಮದ್ ಅವರದ್ದು ಕೆಟ್ಟ ಸ್ಟೇಟ್ಮೆಂಟ್ ಎಂದ ಗೃಹ ಸಚಿವ
ಫೆ.6ರ ಭಾನುವಾರ ಲತಾ ಅವರನ್ನು ಶಿವಾಜಿ ಪಾರ್ಕ್ನಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮೂಲಕ ಬೀಳ್ಕೊಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಜನವರಿ 8ರಂದು ಕೋವಿಡ್ ಸೋಂಕಿಗೆ ಚಿಕಿತ್ಸೆಗಾಗಿ ಲತಾಜೀ ಅವರನ್ನು ಬ್ರೀಚ್ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ನ್ಯುಮೊನಿಯಾ ಸಮಸ್ಯೆ ಕೂಡ ಇತ್ತು.
https://youtu.be/vbpsOyqkAmU