alex Certify ಕೋಮು ಸಾಮರಸ್ಯಕ್ಕೆ ಇಲ್ಲಿದೆ ಅತ್ಯುತ್ತಮ ಉದಾಹರಣೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಮು ಸಾಮರಸ್ಯಕ್ಕೆ ಇಲ್ಲಿದೆ ಅತ್ಯುತ್ತಮ ಉದಾಹರಣೆ…!

ಹಿಜಾಬ್‌-ಕೇಸರಿ ಶಾಲು ಬಿಕ್ಕಟ್ಟು ಶಾಲಾ-ಕಾಲೇಜುಗಳ ಅಂಗಳದಲ್ಲಿ ಧೂಳೆಬ್ಬಿಸಿ ಹಲವು ರಾಜ್ಯಗಳಿಗೂ ಹಬ್ಬಿಕೊಂಡು ಇನ್ನೇನು ಸಮಾಜದಲ್ಲಿ ಕೋಮುಸೌಹಾರ್ದತೆ ಹಾಳು ಮಾಡಲಿದೆ ಎನ್ನುವ ಆತಂಕ ನಿರ್ಮಾಣವಾಗಿದೆ.

ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಧರ್ಮಾಚರಣೆಗಳ ಭಿನ್ನತೆಯನ್ನೇ ಮೂಲಭೂತವಾದಿ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಬಂಡವಾಳ ಆಗಿಸಿಕೊಂಡು ಗಲಾಟೆಗೆ ತುಪ್ಪ ಸುರಿಯುತ್ತಿದ್ದಾರೆ. ಹೈಕೋರ್ಟ್‌ ಮಾತ್ರ ಆದಷ್ಟು ಸಂಯಮದಿಂದ ವಿಚಾರವನ್ನು ಶಾಂತಿಯುತವಾಗಿ ಬಗೆಹರಿಸುವ ಯತ್ನದಲ್ಲಿದೆ.

ಇದರ ನಡುವೆ ಕೋಮುಸಾಮರಸ್ಯಕ್ಕೆ ಉತ್ತೇಜನ ನೀಡುವ, ಮಾದರಿಯಂತೆ ಬದುಕುತ್ತಿರುವವರ ಸುದ್ದಿಯೊಂದು ಬಹಿರಂಗವಾಗಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಒಂದು ದೇವಸ್ಥಾನವಿದೆ. ಇದರ ಹೆಸರು ಗೋಪಿ ತೀರ್ಥ ಮಂದಿರ. ಜತೆಗೆ ಜಬಾರ್‌ವಾನ್‌ ಬೆಟ್ಟದಲ್ಲಿ ಶಿವನ ಮಂದಿರ ಕೂಡ ಇದೆ.

ಇವುಗಳನ್ನು ನಿರ್ವಹಣೆ ಮಾಡುತ್ತಿರುವುದು ಮುಸ್ಲಿಂ ಸಮುದಾಯದ ತಂದೆ ಹಾಗೂ ಮಗ. ಇಬ್ಬರು ವಿಶೇಷಚೇತನರು. ಕಿವಿ ಕೇಳಿಸದು, ಮಾತು ಬಾರದು.
ಮಗನ ಹೆಸರು ನಿಸಾರ್‌ ಅಹ್ಮದ್‌ ಅಲೈ, ತಂದೆಯ ಹೆಸರು ಅಹ್ಮದ್‌ ಅಲೈ.

ಬೆಳಗ್ಗೆ ಎದ್ದಕೂಡಲೇ ಮಗ ನಿಸಾರ್‌ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುತ್ತಾನೆ. ನಂತರ ಆವರಣದಲ್ಲಿ ಸಾಧ್ಯವಾದಷ್ಟು ತರಕಾರಿಗಳನ್ನು ಬೆಳೆಯಲು ಮುಂದಾಗುತ್ತಾನೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ನೀರು ಮತ್ತು ಆಸನ ವ್ಯವಸ್ಥೆಯನ್ನು ಕೂಡ ಕಲ್ಪಿಸುವ ಜವಾಬ್ದಾರಿಯನ್ನು ತಾನಾಗಿಯೇ ನಿರ್ವಹಿಸುತ್ತಿದ್ದಾನೆ.

ಕಾಶ್ಮೀರದಲ್ಲಿ ಈ ತರಹದ ಅನೇಕ ಪ್ರಕರಣಗಳು ನಿಮಗೆ ಸಿಗಲಿವೆ. ಕಣಿವೆಯಲ್ಲಿ ಕೋಮುಸೌಹಾರ್ದತೆ ಕಾಪಾಡಿಕೊಳ್ಳುವುದು ಇದು ಪ್ರತಿ ಕಾಶ್ಮೀರಿ ನಾಗರಿಕನ ನೈತಿಕ ಜವಾಬ್ದಾರಿ ಎನ್ನುತ್ತಾರೆ ಸ್ಥಳೀಯ ನಿವಾಸಿ ಫಿರ್ದೌಸ್‌.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...