alex Certify ಬೊಮ್ಮಾಯಿ ಸರ್ಕಾರ ಪಂಕ್ಚರ್ ಆಗಿರುವ ಬಸ್; ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಸಿ.ಎಂ. ಇಬ್ರಾಹಿಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೊಮ್ಮಾಯಿ ಸರ್ಕಾರ ಪಂಕ್ಚರ್ ಆಗಿರುವ ಬಸ್; ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಸಿ.ಎಂ. ಇಬ್ರಾಹಿಂ

ದಾವಣಗೆರೆ: ಬಿಜೆಪಿ ನಾಯಕರಿಗೆ ರಾಮ ಮಂದಿರ ಆಯಿತು, ಗೋ ಹತ್ಯೆ ನಿಷೇಧ ಆಯಿತು ಈಗ ಹಿಜಾಬ್ ಹಿಡಿದುಕೊಂಡಿದ್ದಾರೆ. ಹಿಜಾಬ್ ಅಂದರೆ ಅವರಿಗೆ ಅರ್ಥವೂ ಗೊತ್ತಿಲ್ಲ ಅನಗತ್ಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ಎಂಎಲ್ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಇಬ್ರಾಹಿಂ, ರಾಜ್ಯದಲ್ಲಿ ಬಿಜೆಪಿ ನಾಯಕರ ಕಥೆ ಮುಗಿದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ಪಂಕ್ಚರ್ ಆದ ಬಸ್. ಯಾವಾಗ ಬೇಕಾದರೂ ನಿಲ್ಲಬಹುದು. ನನ್ನ ಪ್ರಕಾರ ಏಪ್ರಿಲ್, ಮೇ ವೇಳೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬಹುದು ಎಂದು ಭವಿಷ್ಯ ನುಡಿದರು.

ಗುಡ್ ನ್ಯೂಸ್: ಪಡಿತರ ಚೀಟಿ ಇಲ್ಲದವರಿಗೂ ಉಚಿತವಾಗಿ ಆಹಾರ ಧಾನ್ಯ ವಿತರಣೆ

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಇಬ್ರಾಹಿಂ, ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ನಿಶಕ್ತರಾಗಿದ್ದಾರೆ. ಡಿಕೆಶಿ ಕೇಳಿದರೆ ಮೇಲಿನವರತ್ತ ಕೈ ತೋರುತ್ತಾರೆ. ನಮ್ಮ ಶಕ್ತಿ ನಮ್ಮ ಶತ್ರುವಾಗಿದೆ. ಕಾಂಗ್ರೆಸ್ ನಿಂದ ಬಹಳಷ್ಟು ಜನರು ಪಕ್ಷ ತೊರೆಯಲಿದ್ದಾರೆ. ಡ್ಯಾಂ ಒಡೆದಾಗ ಹೇಗೆ ನೀರು ಹೊರಬರುತ್ತೋ ಅದೇ ರೀತಿ ಕಾಂಗ್ರೆಸ್ ನಲ್ಲಿದ್ದವರು ಆಚೆ ಬರುತ್ತಾರೆ ಎಂದು ಹೇಳಿದರು.

ಮನವೊಲಿಸುವುದರಿಂದ ಏನೂ ಆಗಲ್ಲ, ಹೈಕಮಾಂಡ್ ಸೂಕ್ತ ಪರಿಹಾರ ಕಂಡುಕೊಳ್ಳಬೇಕಷ್ಟೇ. ಇಂದು ಹುಬ್ಬಳ್ಳಿಯಲ್ಲಿ ಸಭೆ ನಡೆಯಲಿದೆ. ಬಳಿಕ ಬೆಳಗಾವಿಯಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಮಾಡುತ್ತೇನೆ. ಅಧಿವೇಶನದಲ್ಲಿ ಗೋ ಹತ್ಯೆ ಬಿಲ್ ಮಂಡನೆಯಿದೆ. ಈಗ ನಾನು ರಾಜೀನಾಮೆ ನೀಡಿದ್ರೆ ನನ್ನ ಮೇಲೆ ಗೂಬೆ ಕೂರಿಸ್ತಾರೆ. ಹಾಗಾಗಿ ಸೆಷನ್ ಮುಗಿದ ನಂತರ ರಾಜೀನಾಮೆ ಬಗ್ಗೆ ನಿರ್ಧರಿಸುತ್ತೇನೆ ಎಂದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...