alex Certify EPFO: ಉದ್ಯೋಗಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ, PPF ಬಡ್ಡಿದರ ಹೆಚ್ಚಳ ಶೀಘ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

EPFO: ಉದ್ಯೋಗಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ, PPF ಬಡ್ಡಿದರ ಹೆಚ್ಚಳ ಶೀಘ್ರ

ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ಉದ್ಯೋಗಿಗಳಿಗೆ ಪರಿಹಾರ ನೀಡಲು ಸರ್ಕಾರವು ಪಿಎಫ್ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ(ಇಪಿಎಫ್‌ಒ) ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು(ಸಿಬಿಟಿ) ಮುಂದಿನ ತಿಂಗಳು ಮಾರ್ಚ್‌ನಲ್ಲಿ ನಡೆಯಲಿರುವ ಸಭೆಯಲ್ಲಿ 2021-22ರ ಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ನಿರ್ಧರಿಸಬಹುದು. ಸಭೆಯಲ್ಲಿ 2021-22ಕ್ಕೆ ಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಬಹುದು ಎಂದು ಮೂಲಗಳು ಹೇಳಿವೆ.

ಮಾರ್ಚ್‌ ನಲ್ಲಿ ಗುವಾಹಟಿಯಲ್ಲಿ ಇಪಿಎಫ್‌ಒ ಸಿಬಿಟಿ ಸಭೆ ನಡೆಯಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ. ಇದು 2021-22 ಕ್ಕೆ ಬಡ್ಡಿದರಗಳನ್ನು ನಿಗದಿಪಡಿಸುವ ಪ್ರಸ್ತಾಪವನ್ನು ಪಟ್ಟಿ ಮಾಡುತ್ತದೆ. EPFO 2021-22 ಮತ್ತು 2020-21 ಕ್ಕೆ 8.5 ಶೇಕಡಾ ಬಡ್ಡಿದರವನ್ನು ನಿರ್ವಹಿಸುತ್ತದೆಯೇ ಎಂದು ಕೇಳಿದಾಗ, CBT ಮುಖ್ಯಸ್ಥ ಯಾದವ್, ಮುಂದಿನ ಹಣಕಾಸು ವರ್ಷದ ಗಳಿಕೆಯ ಅಂದಾಜಿನ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಈಗ ಶೇ. 8.5 ರಷ್ಟು ಬಡ್ಡಿ

ಮಾರ್ಚ್ 2021 ರಲ್ಲಿ CBT 2020-21 ಕ್ಕೆ EPF ಠೇವಣಿಗಳ ಮೇಲೆ ಶೇ. 8.5 ರಷ್ಟು ಬಡ್ಡಿ ದರವನ್ನು ನಿಗದಿಪಡಿಸಿದೆ. ಇದನ್ನು ಅಕ್ಟೋಬರ್ 2021 ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನುಮೋದಿಸಿದರು. ಅದರ ನಂತರ EPFO ​​ತನ್ನ ಕ್ಷೇತ್ರ ಕಚೇರಿಗಳಿಗೆ 2020-21 ರ ಚಂದಾದಾರರ ಖಾತೆಗಳಲ್ಲಿ ಶೇ. 8.5 ರಷ್ಟು ಬಡ್ಡಿಯನ್ನು ಠೇವಣಿ ಮಾಡುವಂತೆ ನಿರ್ದೇಶಿಸಿತ್ತು.

ಬೇಕಿದೆ ಹಣಕಾಸು ಸಚಿವಾಲಯದ ಅನುಮತಿ

CBT ಯಿಂದ ಬಡ್ಡಿದರದ ನಿರ್ಧಾರ ತೆಗೆದುಕೊಂಡ ನಂತರ, ಅದನ್ನು ಹಣಕಾಸು ಸಚಿವಾಲಯದ ಅನುಮೋದನೆಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಅನುಮೋದನೆಯ ನಂತರ ಬಡ್ಡಿದರ ನಿಗದಿಪಡಿಸಲಾಗುತ್ತದೆ. ಮಾರ್ಚ್ 2020 ರಲ್ಲಿ, EPFO ​​ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರ 2019-20 ಕ್ಕೆ 7 ವರ್ಷಗಳ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಿತು. 2015-16ರಲ್ಲಿ ಗರಿಷ್ಠ ದರ(ಶೇ. 8.80) ಇತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...