
ಬೆಲೆ ಹೆಚ್ಚಳಗಳಿಂದ ಈಗಾಗಲೇ ಬೇಸತ್ತಿರುವ ಸಾಮಾನ್ಯ ಜನರಿಗೆ ಎಸ್ಕಾಂ ವಿದ್ಯುತ್ ಶಾಕ್ ನೀಡಲು ಸಿದ್ಧವಾಗಿದೆ. ಬೆಲೆ ಹೆಚ್ಚಳಕ್ಕೆ ನಷ್ಟದ ಕಾರಣ ನೀಡಿರುವ ಎಸ್ಕಾಂ, ಪ್ರತಿ ಯೂನಿಟ್ ಗೆ ಇಂತಿಷ್ಟು ದರ ಹೆಚ್ಚಿಸುವಂತೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC)ಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಇನ್ನು ಎಸ್ಕಾಂ ಪ್ರಸ್ತಾವನೆ ಸ್ವೀಕರಿಸಿರುವ KERC, ನಾಳೆಯಿಂದ ಈ ಬಗ್ಗೆ ಗ್ರಾಹಕರ ಅಹವಾಲುಗಳನ್ನ ಸ್ವೀಕರಿಸಲಿದೆ. ನಾಳೆಯಿಂದ ಬೆಸ್ಕಾಂ ವಿದ್ಯುತ್ ದರ ಪರಿಷ್ಕರಣೆ ಪರಿಶೀಲನೆಯಾಗಲಿದೆ. ಇದರ ಜೊತೆಗೆ, ನಾಳೆಯಿಂದಲೇ 3 ದಿನ ಎಲ್ಲಾ ಎಸ್ಕಾಂಗಳ ದರ ಪರಿಷ್ಕರಣೆ ಪರಿಶೀಲನಾ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಕಳೆದ ಬಾರಿಯ ಲೆಕ್ಕಾಚಾರ ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಈ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ದರ ಪರಿಷ್ಕರಣೆ ಸಾಧ್ಯತೆಯಿದೆ. ಕಳೆದ ಬಾರಿ ಎಸ್ಕಾಂ ಒಂದು ಯೂನಿಟ್ ಗೆ 1.39 ಪೈಸೆಗೆ ದರ ಪರಿಷ್ಕರಣೆಗೆ ಪ್ರಸ್ತಾಪಿಸಿತ್ತು. ಆದರೆ KERC ಕೇವಲ 30 ಪೈಸೆ ಪರಿಷ್ಕರಣೆ ಮಾಡಿತ್ತು. ಈ ವರ್ಷ ಎಸ್ಕಾಂ 1.50 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಎಷ್ಟು ಪರಿಷ್ಕರಣೆಯಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ದಾಂಧಲೆ; ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿದ ಪಾಗಲ್ ಪ್ರೇಮಿ..!
ಯಾವೆಲ್ಲಾ ವರ್ಷದಲ್ಲಿ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು ಅಥವಾ ಹೆಚ್ಚಳವಾಗಿತ್ತು..?
– 2009 ರಲ್ಲಿ ಪ್ರತಿ ಯೂನಿಟ್ ಗೆ 34 ಪೈಸೆ
– 2010 ಪ್ರತಿ ಯೂನಿಟ್ ಗೆ 30 ಪೈಸೆ
– 2011 ಪ್ರತಿ ಯೂನಿಟ್ ಗೆ 28 ಪೈಸೆ
– 2012 ಪ್ರತಿ ಯೂನಿಟ್ ಗೆ 13 ಪೈಸೆ
– 2013 ಪ್ರತಿ ಯೂನಿಟ್ ಗೆ 13 ಪೈಸೆ
– 2017 ಪ್ರತಿ ಯೂನಿಟ್ ಗೆ 48 ಪೈಸೆ
– 2019 ರಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ
– 2020 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ