alex Certify ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ದಾಂಧಲೆ; ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿದ ಪಾಗಲ್ ಪ್ರೇಮಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ದಾಂಧಲೆ; ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿದ ಪಾಗಲ್ ಪ್ರೇಮಿ..!

ಮದುವೆ ಅನ್ನೋ ಬಂಧ ಎರಡು ಕಡೆಯಿಂದಲೂ ಗಟ್ಟಿಯಾಗಿರಬೇಕು. ಹುಡುಗ-ಹುಡುಗಿ ಇಬ್ಬರ ಸಮ್ಮತಿಯು ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಜನರು ಸಮಾಜದ ಎಲ್ಲಾ ಕಟ್ಟಳೆಗಳನ್ನು ಮರೆತು ಅಕ್ಷರಶಃ ಅನಾಗರಿಕರಂತೆ ವರ್ತಿಸುತ್ತಾರೆ. ಇದಕ್ಕೆ ಪೂರಕ ಎನ್ನುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ನಗರದ ಕೆಆರ್ ಪುರಂನಲ್ಲಿ ಶಾರುಖ್ ಎಂಬ ಯುವಕ, ಮದುವೆಯಾಗುವಂತೆ ಒತ್ತಾಯಿಸಿ‌, ನಗ್ಮಾ ಎಂಬ ಯುವತಿಯ ಮನೆ ಮೇಲೆ ದಾಳಿ ನಡೆಸಿದ್ದಾನೆ.‌ ಲಾಂಗ್ ಹಿಡಿದು ಆಕೆಯ ಮನೆಗೆ ನುಗ್ಗಿ ಮೃಗದಂತೆ ದಾಂಧಲೆ ನಡೆಸಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ಕೆಆರ್ ಪುರಂನ ಮಸೀದಿ ರಸ್ತೆಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಲಾಂಗ್ ಹಿಡಿದು ಮನೆ ಬಳಿಗೆ ಬಂದಿದ್ದ ಪಾಗಲ್ ಪ್ರೇಮಿ ಶಾರುಖ್, ಯುವತಿ ಮೇಲೆ ಲಾಂಗ್ ಬೀಸಲು ಯತ್ನಿಸಿದ್ದಾನೆ. ಆದರೆ ಯುವತಿಯ ಸಮಯಪ್ರಜ್ಞೆಯಿಂದ ಆಕೆ ಬಚಾವಾಗಿದ್ದಾಳೆ. ಆತನನ್ನ ಕಂಡ ಯುವತಿ ತಕ್ಷಣ ಮನೆ ಗೇಟ್ ಲಾಕ್ ಮಾಡಿ, ಮುಖ್ಯದ್ವಾರವನ್ನು ಲಾಕ್ ಮಾಡಿಕೊಂಡಿದ್ದಾಳೆ.

ಮಸೀದಿಯಲ್ಲಿ ಸೇವೆ ಮಾಡಿ ಭ್ರಾತೃತ್ವ ಭಾವ ಸಾರಿದ ಸರ್ದಾರ್‌ಜೀ

ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಶಾರುಖ್, ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಟ ನಡೆಸಿದ್ದಾನೆ. ಅಷ್ಟೇ ಅಲ್ಲಾ ಇತರರ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್ ಗಳ ಮೇಲೂ ಮನಬಂದಂತೆ ಲಾಂಗ್ ಬೀಸಿದ್ದಾನೆ.‌ ಅದೃಷ್ಟವಶಾತ್ ಈ ಅಷ್ಟು ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಶಾರುಖ್ ವಿರುದ್ಧ ನಗ್ಮಾ ಕೆಆರ್ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಾದ ಬೆನ್ನಲ್ಲೆ ಆರೋಪಿ ಶಾರುಕ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಕೆಆರ್ ಪುರಂ ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...