ಸಾಮಾನ್ಯವಾಗಿ ನಾವು ಖರೀದಿ ಮಾಡುವ ವಾಹನದ ರೀಸೇಲ್ ಮೌಲ್ಯವು ಅದರ ಅಸಲಿ ಮೌಲ್ಯದ ಅರ್ಧದಷ್ಟಕ್ಕಿಂತ ಕಡಿಮೆ ಆಗುತ್ತದೆ. ಆದರೆ ಇಲ್ಲೊಬ್ಬರು ಏಳು ವರ್ಷಗಳ ಹಿಂದೆ ಖರೀದಿ ಮಾಡಿದ ಹೋಂಡಾ ಕಾರೊಂದನ್ನು ಮರು ಮಾರಾಟ ಮಾಡಿದಾಗ ಖರೀದಿ ಮಾಡಿದ್ದಕ್ಕಿಂತ ಹೆಚ್ಚಿನ ಬೆಲೆಗೇ ಮಾರಿದ್ದಾರೆ.
ಸೀನ್ ಹೊಲಿಸ್ಟರ್ ಹಸರಿನ ಈತ ತನ್ನ ಕಾರನ್ನು ಏಳು ವರ್ಷಗಳಾದರೂ ಬಹಳ ಒಳ್ಳೆಯ ಕಂಡಿಷನ್‌ನಲ್ಲಿ ಇಟ್ಟುಕೊಂಡಿದ್ದರು. ಯಾವುದೇ ಅಪಘಾತಗಳಿಗೆ ಒಳಗಾಗದ ಈ ಕಾರಿನ ಅತ್ಯುತ್ತಮ ಕಂಡೀಷನ್ ಕಾರಣದಿಂದ ಕಾರಿಗೆ ಈ ಮಟ್ಟದ ರೀಸೇಲ್ ಮೌಲ್ಯ ಬಂದಿದೆ.
ಆಯೋಧ್ಯೆ ರಾಮಮಂದಿರ ಸಮೀಪ ಭೂಮಿ ಖರೀದಿಸಲು ಪ್ರಭಾವಿಗಳ ಪೈಪೋಟಿ
ಹೋಂಡಾ ಫಿಟ್ ಕಾರನ್ನು ಡಿಸೆಂಬರ್ 2014ರಲ್ಲಿ $20,814.80 (15.74 ಲಕ್ಷ ರೂ.) ಕೊಟ್ಟು ಖರೀದಿ ಮಾಡಿದ ಈತ ಅದನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ $20,905ಗೆ (15.81 ಲಕ್ಷ ರೂ.) ಕಾರ್ವಾನಾ ಎಂಬ ಸ್ಟಾರ್ಟ್‌ಅಪ್ ಕಂಪನಿಗೆ ಮಾರಾಟ ಮಾಡಿದ್ದಾರೆ.
“ಕಾರ್ವಾನಾರ ಅಲ್ಗರಿದಂ ಈ ಕಾರಿಗೆ $20,000 ತೆತ್ತು ಇನ್ನೂ ನೋಡದೇ ಇರುವ ನನ್ನ ಕಾರಿಗೆ, ಪರಿಶೀಲನೆ ಇಲ್ಲದೆಯೇ ಪ್ರೀ-ಪ್ರಿಂಟೆಡ್ ಚೆಕ್ ಒಂದನ್ನು ಮನೆಬಾಗಿಲಿಗೆ ತಂದಿದ್ದಾರೆ. ಆನ್ಲೈನ್ ಕೋಟ್ ಬಲು ಬೇಗ ಬಂದಿದೆ. ಇದರಲ್ಲಿ ಮಾನವರ ಭಾಗಿಯಾಗುವಿಕೆ ಇಲ್ಲ ಎಂದು ನನಗೆ ಗೊತ್ತಿತ್ತು,” ಎಂದು ಸೀನ್ ತಿಳಿಸಿದ್ದಾರೆ.
“ಡಿಸೆಂಬರ್ 14ರಂದು ಸಂಜೆ 4:46ಕ್ಕೆ ಕಾರ್ವಾನಾ ಏಜೆಂಟ್ ಒಬ್ಬರು ನನಗೆ ಕರೆ ಮಾಡಿ, ಹೊರಗೆ ಕಾಯುತ್ತಿರುವುದಾಗಿ ಹೇಳಿ, ನನ್ನ ಕಾರನ್ನು ಖರೀದಿ ಮಾಡಲು ಕಾಯುತ್ತಿರುವುದಾಗಿ ತಿಳಿಸಿದ್ದರು” ಎಂದು ಸೀನ್ ಸೇರಿಸಿದ್ದಾರೆ.
“ನನ್ನ ಕಾರಿನ ಕೀಲಿಗಳನ್ನು ಅವರ ಕೈಗೆ ಕೊಟ್ಟು, ಓಡೋಮೀಟರ್ ಚೆಕ್ ಮಾಡುತ್ತಾ ಆಕೆ ಕೆಲಸಕ್ಕೆ ಮುಂದಾಗಿ ತನ್ನ ಟ್ಯಾಬ್ಲೆಟ್‌ನಲ್ಲಿ ಮಾಹಿತಿ ಭರಿಸಿಕೊಂಡು, ಕೆಲವೊಂದು ಚಿತ್ರಗಳನ್ನು ಸೆರೆ ಹಿಡಿಯಲು ಆರಂಭಿಸಿದರು. ಆದರೆ ಆಕೆ ಮೆಕ್ಯಾನಿಕಲ್ ಪರಿಶೀಲನೆ ಮಾಡಲಿಲ್ಲ ಹಾಗೂ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಬರೀ ಟೈಟಲ್‌ಗೆ ಸೈನ್ ಮಾಡಿದ್ದು, ಮಾಲೀಕತ್ವ ಬಿಟ್ಟುಕೊಡಲು ಸೈನ್ ಮಾಡಿದ್ದು ಹಾಗೂ ಚೆಕ್ ನೀಡಿದ್ದಾರೆ” ಎಂದಿದ್ದಾರೆ.