ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಮುಖವಾಗಿದ್ದು, ಇಂದು ಪಾಸಿಟಿವಿಟಿ ದರ ಶೇಕಡ 3 ಕ್ಕಿಂತ ಕಡಿಮೆಯಾಗಿದೆ.
ರಾಜ್ಯದಲ್ಲಿ 3202 ಹೊಸ ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವಿಟಿ ದರ ಶೇಕಡ 2.95 ರಷ್ಟು ಇದೆ. 38,747 ಸಕ್ರಿಯ ಪ್ರಕರಣಗಳಿವೆ. 38 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇವತ್ತು ಒಂದೇ ದಿನ 1,08,534 ಪರೀಕ್ಷೆ ನಡೆಸಲಾಗಿದೆ. 8988 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 1293 ಹೊಸ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರ ಶೇಕಡ 2.49 ರಷ್ಟು ಇದೆ. ಬೆಂಗಳೂರಿನಲ್ಲಿ ಇಂದು 10 ಜನ ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 15,679 ಸಕ್ರಿಯ ಪ್ರಕರಣಗಳಿವೆ. 3833 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 39,24,297 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 39,613 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 38,45,903 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬಳ್ಳಾರಿ 126, ಬೆಳಗಾವಿ 250, ಕೊಡಗು 99, ಚಿತ್ರದುರ್ಗ 91, ಮೈಸೂರು 197, ಶಿವಮೊಗ್ಗ 155, ತುಮಕೂರು 142 ಹೊಸ ಪ್ರಕರಣ ವರದಿಯಾಗಿವೆ.
ಬೆಂಗಳೂರು ನಗರ 10, ಬಳ್ಳಾರಿ 2, ಬೀದರ್ 2, ದಕ್ಷಿಣಕನ್ನಡ 4, ಧಾರವಾಡ 2, ಹಾವೇರಿ 3, ಮೈಸೂರು 2, ರಾಯಚೂರು 2, ತುಮಕೂರು 2 ಸೇರಿ ರಾಜ್ಯದಲ್ಲಿ 38 ಜನ ಸೋಂಕಿತರು ಮೃತಪಟ್ಟಿದ್ದಾರೆ.