ನೀವು ಹೊಸ ಆಂಡ್ರಾಯ್ಡ್ ಫೋನ್ನ್ನು ಖರೀದಿ ಮಾಡಬೇಕೆಂದುಕೊಂಡು ಅದಕ್ಕೂ ಮುನ್ನ ಪ್ರಸ್ತುತ ಇರುವ ಫೋನ್ನ್ನು ಮಾರಾಟ ಮಾಡಬೇಕೆಂದುಕೊಂಡಿದ್ದರೆ ಅದರಲ್ಲಿರುವ ಡೇಟಾಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡವುದು ಸಹಜ.ನೀವು ಆಂಡ್ರಾಯ್ಡ್ ಫೋನ್ ಮಾರಾಟ ಮಾಡುವ ಮುನ್ನ ನಿಮ್ಮ ಹಳೆಯ ಫೋನ್ನಲ್ಲಿರುವ ಎಲ್ಲಾ ಡೇಟಾಗಳನ್ನು ಪಡೆಯಲು ನೀವು ಈ ಮಾರ್ಗಗಳನ್ನು ಅನುಸರಿಸಬಹುದಾಗಿದೆ.
ನಿಮ್ಮ ಕಾಂಟ್ಯಾಕ್ಟ್ ಸಂಖ್ಯೆಗಳನ್ನು ಬ್ಯಾಕಪ್ ಮಾಡಿಕೊಳ್ಳಿ
ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದು ಗೂಗಲ್ ಅಪ್ಲಿಕೇಶನ್ಗಳನ್ನು ಹೆಚ್ಚಾಗಿ ಬಳಸುತ್ತಿದ್ದರೆ ನೀವು ನಿಮ್ಮ ಕಾಂಟ್ಯಾಕ್ಟ್ಗಳನ್ನು ಬಳಕೆ ಮಾಡುವುದನ್ನು ಮರೆಯುವಂತಿಲ್ಲ. ನಿಮ್ಮ ಕಾಂಟ್ಯಾಕ್ಟ್ ಜಿಮೇಲ್ ಜೊತೆಯಲ್ಲಿ ಸಿಂಕ್ ಆಗಿಲ್ಲ ಎಂದಾದಲ್ಲಿ ನೀವು https://contacts.google.com/. ಮೂಲಕ ಸಿಂಕ್ ಮಾಡಬಹುದಾಗಿದೆ.
ಫೋಟೋ, ವಿಡಿಯೋಗಳನ್ನು ಉಳಿಸಿಕೊಳ್ಳಲು ಹೀಗೆ ಮಾಡಿ
ಗೂಗಲ್ ಫೋಟೋಸ್, ಗೂಗಲ್ ಡ್ರೈವ್ ಹಾಗೂ ಮೈಕ್ರೋಸಾಫ್ಟ್ ವನ್ ಡ್ರೈವ್ ಬಳಕೆ ಮಾಡಿ ನೀವು ಕ್ಲೌಡ್ ಬ್ಯಾಕಪ್ ಮಾಡಬಹುದಾಗಿದೆ. ಡ್ರಾಪ್ಬಾಕ್ಸ್ ಅಥವಾ ಇತರೆ ಯಾವುದೇ ಕ್ಲೌಡ್ ಸರ್ವೀಸ್ ಮೂಲಕ ಅಥವಾ ನೀವು ಪೆನ್ಡ್ರೈವ್ಗಳಿಗೆ ಫೋಟೋ, ವಿಡಿಯೋಗಳನ್ನು ಮೊದಲೇ ಹಾಕಿಟ್ಟುಕೊಳ್ಳುವ ಮೂಲಕ ಫೋಟೋ, ವಿಡಿಯೋಗಳನ್ನು ಉಳಿಸಿಕೊಳ್ಳಬಹುದಾಗಿದೆ.
ಎಲ್ಲಾ ಅಪ್ಲಿಕೇಶನ್ಗಳಿಂದ ಲಾಗೌಟ್ ಆಗಿ
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀವು ಫ್ಯಾಕ್ಟರಿ ರಿಸೆಟ್ ಕೊಡುವ ಮೂಲಕ ಎಲ್ಲಾ ಡೇಟಾಗಳನ್ನು ನೀವು ಅಳಿಸಿಹಾಕಿಬಿಡಬಹುದು ಆದರೆ ನೀವು ಗೂಗಲ್ ಅಕೌಂಟ್ನಿಂದ ಲಾಗೌಟ್ ಆಗಿರುವುದಿಲ್ಲ. ಹೀಗಾಗಿ ಫ್ಯಾಕ್ಟರಿ ರಿಸೆಟ್ ಕೊಡುವ ಮುನ್ನ ಲಾಗೌಟ್ ಆಗಲು ಮರೆಯಬೇಡಿ.
ಮೈಕ್ರೋ ಎಸ್ಡಿ ಕಾರ್ಡ್ಗಳನ್ನು ತೆಗೆಯಲು ಮರೆಯಬೇಡಿ
ನಿಮ್ಮ ಫೋನ್ನಲ್ಲಿ ಮೈಕ್ರೋಎಸ್ಡಿ ಕಾರ್ಡ್ ಇದ್ದರೆ ಅದನ್ನು ತೆಗೆದು ಹಾಕಲು ಮರೆಯಬೇಡಿ.
ಸಿಮ್ ಕಾರ್ಡ್ ತೆಗೆಯಲು ಮರೆಯಬೇಡಿ
ಈ ವಿಚಾರವನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೂ ನಿಮ್ಮ ಸಿಮ್ ಕಾರ್ಡ್ನ್ನು ಮೊಬೈಲ್ ಫೋನ್ನಿಂದ ತೆಗೆಯಲು ನೀವು ಮರೆಯಬೇಡಿ.
ವಾಟ್ಸಾಪ್ ಬ್ಯಾಕಪ್
ಹೊಸ ಫೋನ್ಗೆ ಶಿಫ್ಟ್ ಆಗುವ ಮುನ್ನ ನಿಮ್ಮ ಎಲ್ಲಾ ವಾಟ್ಸಾಪ್ ಚಾಟ್ಗಳು ಅಳಿಸಿಹೋಗಬಾರದು ಎಂಬುದು ನಿಮ್ಮ ಉದ್ದೇಶವಾಗಿದ್ದರೆ ವಾಟ್ಸಾಪ್ ಸೆಟ್ಟಿಂಗ್ಸ್ಗೆ ಹೋಗಿ ಚಾಟ್ ಬ್ಯಾಕಪ್ ಕೊಡಿ. ಫೈಲ್ ಇಟ್ಟುಕೊಳ್ಳಬೇಕೆ ಬೇಡವೇ ಎಂಬುದರ ಬಗ್ಗೆ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದಾದ ಬಳಿಕ ನೀವು ಹೊಸ ಮೊಬೈಲ್ನಲ್ಲಿ ವಾಟ್ಸಾಪ್ ಅಳವಡಿಸಿದ ಬಳಿಕ ನಿಮ್ಮ ಚಾಟ್ ಯಾವುದೂ ಅಳಿಸಿ ಹೋಗಿರುವುದಿಲ್ಲ.