ಬೆಂಗಳೂರು: ರಾಜ್ಯದಲ್ಲಿನ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಏನು ಹೇಳುತ್ತದೆ ಅದನ್ನು ಪಾಲಿಸಲು ಸರ್ಕಾರ ಸಿದ್ಧ. ಯಾವುದೇ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕು ಗೊಳಿಸುವುದಿಲ್ಲ ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸದಾನಂದಗೌಡ, ಹಿಜಾಬ್ ವಿಚಾರದಲ್ಲಿ ಪಕ್ಷದ ನಿಲುವು ಸ್ಪಷ್ಟವಾಗಿದೆ. ಯಾವುದೇ ಶಾಲಾ ಆವರಣದಲ್ಲಿ ಧಾರ್ಮಿಕ ಚಟುವಟಿಕೆಗಳ ವ್ಯವಸ್ಥೆಗೆ ಅವಕಾಶವಿಲ್ಲ. ಸಮವಸ್ತ್ರ ಕಡ್ಡಾಯ ಎಂದು ಹೇಳಿದರು.
ಹಿಜಾಬ್ ಸ್ಪರ್ಶಿಸುವವರ ಕೈಗಳನ್ನು ಕತ್ತರಿಸುತ್ತೇವೆ; ವಿವಾದಾತ್ಮಕ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ನಾಯಕಿ..!
ಹಿಜಾಬ್ ವಿಚಾರ ಅಂತರಾಷ್ಟ್ರೀಯ ವಿವಾದವಾಗಿ ಪರಿವರ್ತನೆಯಾಗಿರುವ ವಿಚಾರವಾಗಿದೆ. ಯಾವ ವಿವಾದವನ್ನು ಭಾರತದ ವಿರುದ್ಧ ಪ್ರಯೋಗ ಮಾಡಬೇಕು ಎಂದು ತಾಲಿಬಾನ್ ನವರು ಇದ್ದಾರೋ ಅವರ ಪ್ರವೇಶ ಆಶ್ಚರ್ಯ ಅಲ್ಲ. ಭಾರತ ಸಂವಿಧಾನ ತಾಲಿಬಾನ್ ಗೆ ಅನ್ವಯವಾಗಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಬದಲು ಭಗವಾಧ್ವಜ ಹಾರಿಸುವುದಾಗಿ ನೀಡಿದ್ದ ಸಚಿವ ಈಶ್ವರಪ್ಪ ಹೇಳಿಕೆಗೆ, ರಾಷ್ಟ್ರಧ್ವಜದ ಬಗ್ಗೆ ಮಾತನಾಡಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಹೀಗಾಗಿ ಅವರ ಹೇಳಿಕೆ ಬಗ್ಗೆ ನಾನು ಏನೂ ಹೇಳಲ್ಲ ಎಂದರು.