alex Certify ಈ ಪ್ರಕ್ರಿಯೆಗಳನ್ನು ಹಿಂದಕ್ಕೆ ಪಡೆಯಿರಿ, ಇಲ್ಲಾಂದ್ರೇ ನಾವೇ ವಜಾ ಮಾಡಬೇಕಾಗುತ್ತೆ: ಉ.ಪ್ರ. ಸರ್ಕಾರಕ್ಕೆ ಸುಪ್ರೀಂ ವಾರ್ನಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪ್ರಕ್ರಿಯೆಗಳನ್ನು ಹಿಂದಕ್ಕೆ ಪಡೆಯಿರಿ, ಇಲ್ಲಾಂದ್ರೇ ನಾವೇ ವಜಾ ಮಾಡಬೇಕಾಗುತ್ತೆ: ಉ.ಪ್ರ. ಸರ್ಕಾರಕ್ಕೆ ಸುಪ್ರೀಂ ವಾರ್ನಿಂಗ್

ಪೌರತ್ವದ ಕಾಯಿದೆ ತಿದ್ದುಪಡಿ ವಿರೋಧಿ ಪ್ರತಿಭಟನಾಕಾರರಿಂದ ಹಾನಿಯಾದ ಸಾರ್ವಜನಿಕ ಆಸ್ತಿಯನ್ನು ಅವರಿಂದಲೇ ಭರಿಸುವ ಉತ್ತರ ಪ್ರದೇಶ ಸರ್ಕಾರದ ನಡೆಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಈ ನಡೆಯು ತನ್ನದೇ ಎರಡು ಆದೇಶಗಳ ಉಲ್ಲಂಘನೆಯಾಗಿದೆ ಎಂದಿದೆ.

ಈ ಸಂಬಂಧ ಉತ್ತರ ಪ್ರದೇಶ ಸರ್ಕಾರ ಜಾರಿ ಮಾಡಿರುವ ನೋಟಿಸ್‌ಗಳು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಅಂತಹ ಪ್ರಕ್ರಿಯೆಗಳನ್ನು ನಿರ್ಣಯಿಸಲು ನಿರ್ಬಂಧಿಸಿದ ಎರಡು ತೀರ್ಪುಗಳನ್ನು ಉಲ್ಲಂಘಿಸಿವೆ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿದೆ.

ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ನ್ಯಾಯಮೂರ್ತಿಗಳ ಪೀಠವು ಉತ್ರ ಪ್ರದೇಶ ಸರ್ಕಾರದ ವಕೀಲರಾದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪರ್ಷದ್ ಅವರನ್ನು ನೋಟಿಸ್ ಹಿಂಪಡೆಯುವಂತೆ ಕೇಳಿಕೊಂಡಿದ್ದು, ಇದಕ್ಕೆ ತಪ್ಪಿದಲ್ಲಿ ಕಾನೂನು ಉಲ್ಲಂಘನೆಯಾಗಿ ನ್ಯಾಯಾಲಯವೇ ಅವುಗಳನ್ನು ರದ್ದುಗೊಳಿಸಬೇಕಾಗುತ್ತದೆ ಎಂದಿದೆ.

ನೋಡುಗರ ಎದೆ ನಡುಗಿಸುತ್ತೆ ತನ್ನ ಪ್ರಾಣ ಒತ್ತೆ ಇಟ್ಟು ಪುಟ್ಟ ಹುಡುಗಿಯ ರಕ್ಷಣೆ ಮಾಡಿದ ವ್ಯಕ್ತಿ ವಿಡಿಯೋ

ಪರ್ಷದ್ ಪ್ರಕಾರ, ಸಿಎಎ ವಿರೋಧಿ ಪ್ರತಿಭಟನೆಗಳ ನಂತರ ರಾಜ್ಯದಲ್ಲಿ 833 ಗಲಭೆಕೋರರ ವಿರುದ್ಧ 106 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, ಘರ್ಷಣೆಯಲ್ಲಿ ಭಾಗಿಯಾದ ಗುಂಪಿನ ಭಾಗವೆಂದು ಹೇಳಲಾದವರ ವಿರುದ್ಧ ವಸೂಲಾತಿಗೆ ಆಗ್ರಹಿಸಿ 274 ನೋಟಿಸ್‌ಗಳನ್ನು ಕಳುಹಿಸಲಾಗಿತ್ತು. ಆಂದೋಲನದ ವೇಳೆ 400 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪರ್ಷದ್ ತಿಳಿಸಿದ್ದಾರೆ.

ವಿತರಿಸಲಾದ 274 ನೋಟಿಸ್‌ಗಳ ಪೈಕಿ 236 ಅನ್ನು ವಸೂಲಾತಿಗಾಗಿ ಹೊರಡಿಸಲಾಗಿದ್ದು, ಇವುಗಳ ಪೈಕಿ 38 ಪ್ರಕರಣಗಳನ್ನು ಮುಚ್ಚಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಆಯೋಜಿಸಿದ್ದ ನ್ಯಾಯಮಂಡಳಿಯಲ್ಲಿ ನಿರ್ಣಯವಾಗಿದ್ದವು. ಉತ್ತರ ಪ್ರದೇಶ ಈಗ ಹೊಸ ಕಾನೂನನ್ನು ಹೊಂದಿದೆ ಎಂದು ಪರ್ಶದ್ ನ್ಯಾಯಾಲಯಕ್ಕೆ ತಿಳಿಸಿದ್ದು, 2020ರಲ್ಲಿ ಜಾರಿಗೆ ತರಲಾದ ಈ ಕಾನೂನಿನ ಪ್ರಕಾರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಅಂತಹ ನ್ಯಾಯಮಂಡಳಿಗಳ ಮುಖ್ಯಸ್ಥರಾಗಿರುತ್ತಾರೆ ಎಂದು ವಿವರಿಸಿದ್ದಾರೆ. ಆದರೆ ಇಂಥ ನ್ಯಾಯಮಂಡಳಿಗಳಿಗೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಬೇಕೆಂದು ನ್ಯಾಯಾಲಯ ಇದೇ ವೇಳೆ ತಿಳಿಸಿದೆ.

ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಅನುಸರಿಸದಿರುವ ಮೂಲಕ, ಆರೋಪಿಗಳ ಆಸ್ತಿಯನ್ನು ಲಗತ್ತಿಸುವ ಪ್ರಕ್ರಿಯೆಯಲ್ಲಿ ರಾಜ್ಯವು ತಾನೇ ”ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಟರ್‌ನಂತೆ” ವರ್ತಿಸಿದೆ ಎಂದ ಪರಮೋಚ್ಛ ನ್ಯಾಯಾಲಯ, “ಈ ಪ್ರಕ್ರಿಯೆಗಳನ್ನು ಹಿಂಪಡೆಯಿರಿ, ಇಲ್ಲವಾದಲ್ಲಿ ಕಾನೂನಿನ ಉಲ್ಲಂಘನೆ ಎಂದು ಈ ನ್ಯಾಯಾಲಯವೇ ಅವುಗಳನ್ನು ವಜಾಗೊಳಿಸಬೇಕಾಗುತ್ತದೆ,” ಎಂದು ಆದೇಶಿಸಿದೆ.

ಗಲಭೆಕೋರರ ಆಸ್ತಿ ಲಗತ್ತಿಸಿಕೊಂಡು ಮುಟ್ಟಗೋಲು ಹಾಕಲು ಕಳುಹಿಸಬೇಕಾದ ನೋಟಿಸ್‌ಗಳನ್ನು ಬೇಕಾಬಿಟ್ಟಿ ಕಳುಹಿಸಲಾಗಿದ್ದು, ಒಂದು ಪ್ರಕರಣವೊಂದರಲ್ಲಿ ಆರು ವರ್ಷಗಳ ಹಿಂದೆಯೇ ತೀರಿಕೊಂಡ 94 ವರ್ಷದ ವ್ಯಕ್ತಿ ಹಾಗೂ 90 ವರ್ಷ ವಯಸ್ಸು ದಾಟಿದ ಇಬ್ಬರಿಗೂ ತಲುಪಿವೆ ಎಂದು ಆರೋಪಿಸಿದ ಪರ್ವೈಜ಼್ ಆರೀಫ್ ಹೆಸರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ಆಲಿಕೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...