ಕೋಲಾರ: ವೈವಾಹಿಕ ಜೀವನಕ್ಕೆ ಸಿದ್ಧಳಾಗಿ ಆರತಕ್ಷತೆಯ ಸಂಭ್ರಮದಲ್ಲಿದ್ದ ವಧು ಕುಸಿದು ಬಿದ್ದು ಬ್ರೇನ್ ಡೆಡ್ ಆಗಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.
ಆರತಕ್ಷತೆಯ ಸಂದರ್ಭದಲ್ಲಿ ಕುಸಿದು ಬಿದ್ದ ಮದುಮಗಳು 26 ವರ್ಷದ ಚೈತ್ರಾ, ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಆಕೆಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಬ್ರೇನ್ ಡೆಡ್ ಎಂದು ಘೋಷಿಸಿದ್ದಾರೆ.
ಉ.ಪ್ರ.ದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಬಸ್ ಅಪಘಾತ
ವೈದ್ಯರು ಹೇಳಿದ ಸುದ್ದಿಕೇಳಿ ಪೋಷಕರು ಆಘಾತಕ್ಕಿಡಾಗಿದ್ದಾರೆ, ಮಗಳ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ. ದುಃಖದ ನಡುವೆಯೂ ಸಮಯಪ್ರಜ್ಞೆ ಮೆರೆದ ಪೋಷಕರು ಮಗಳ ಅಂಗಾಂಗ ದಾನ ಮಾಡಿದ್ದಾರೆ. ಈ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.