ಕೇಪ್ ಟೌನ್: ಕೊರೋನಾ ವೈರಸ್ ಅಂತ್ಯವಾಗಿಲ್ಲ, ಇನ್ನಷ್ಟು ರೂಪಾಂತರಗಳು ಬರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವೈರಸ್ ಅಂತ್ಯವಾಗಲಿದೆ ಎನ್ನುವ ಊಹೆಯೇ ಅಸಾಧ್ಯವೆಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಕೊರೋನಾ ಸಾಂಕ್ರಾಮಿಕ ಇನ್ನು ಕೊನೆಯಾಗಿಲ್ಲ. ಕೋವಿಡ್ -19 ಇನ್ನು ಹೆಚ್ಚಿನ ರೂಪಾಂತರವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ವಿಶ್ವ ಕೊರೋನಾ ವೈರಸ್ ವಿಕಾಸ, ಬೆಳವಣಿಗೆ ಕಂಡಿದ್ದು, ಇನ್ನು ಹೆಚ್ಚಿನ ರೂಪಾಂತರಗಳು, ಅಪಾಯಕಾರಿ ರೂಪಾಂತರಗಳು ರೂಪುಗೊಳ್ಳಬಹುದಾದ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಸಾಂಕ್ರಾಮಿಕದ ಅಂತ್ಯ ಊಹಿಸಲು ಸಾಧ್ಯವಿಲ್ಲ. ಕೊರೋನಾ ಕಡಿಮೆಯಾಗಿಲ್ಲ, ಇನ್ನಷ್ಟು ರೂಪಾಂತರಗಳ ಸಾಧ್ಯತೆ ಇದೆ. ಮಾರ್ಗಸೂಚಿ ಅನುಸರಿಸದಿರುವುದು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದಿರುವುದು ಮೂರ್ಖತನವಾಗುತ್ತದೆ. 2022ರ ಅಂತ್ಯದವರೆಗೂ ಮಾರ್ಗಸೂಚಿ ಪಾಲಿಸಬೇಕು. ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಮುಂದುವರೆಸಬೇಕು. ಇದರಿಂದ ಕೊರೋನಾ ನಿರ್ಮೂಲನೆಯಲ್ಲಿ ಯಶಸ್ವಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.