alex Certify ಶಿಕ್ಷಕರೇ ಗಮನಿಸಿ: ವರ್ಗಾವಣೆಗೆ ಫೆ.14, 16 ರಂದು ಕೌನ್ಸೆಲಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕರೇ ಗಮನಿಸಿ: ವರ್ಗಾವಣೆಗೆ ಫೆ.14, 16 ರಂದು ಕೌನ್ಸೆಲಿಂಗ್

ರಾಯಚೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2020-21ನೇ ಸಾಲಿನ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಕೋರಿಕೆ ಅಥವಾ ಪರಸ್ಪರ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ಹಮ್ಮಿಕೊಳ್ಳಲು ವೇಳಾಪಟ್ಟಿಯನ್ನು ಹೊರಡಿಸಿರುತ್ತಾರೆ.

ಇದೇ ಫೆ. 14 ಮತ್ತು 16 ರಂದು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಎಸ್.ಎಸ್.ಎ ಸಭಾಂಗಣ, ಕೌನ್ಸಿಲಿಂಗ್ ಹಮ್ಮಿಕೊಳ್ಳಲಾಗಿದ್ದು, ಸಂಬಂಧಪಟ್ಟ ಶಿಕ್ಷಕರು ದಾಖಲೆಗಳೊಂದಿಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ತಿಳಿಸಿದೆ.

ಫೆ.14ರ ಬೆಳಿಗ್ಗೆ 10ಗಂಟೆಗೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವೃಂದದ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ದೈಹಿಕ  ಹಾಗೂ ವಿಶೇಷ ಶಿಕ್ಷಕರು ಮತ್ತು ಫೆ.16 ರ ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಅಥವಾ ಪ್ರೌಢ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕುರಿತು ಕೌನ್ಸೆಲಿಂಗ್ ನಡೆಯಲಿದೆ.

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವೃಂದದ ಮುಖ್ಯಗುರುಗಳು, ಸಹಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರು ಕೌನ್ಸೆಲಿಂಗ್ ನಡೆಸಲಾಗುತ್ತಿದೆ.

 ವಿಶೇಷ ಸೂಚನೆಗಳು:

ಕೌನ್ಸೆಲಿಂಗ್ ಅರ್ಹತಾ ಪಟ್ಟಿಯಲ್ಲಿರುವ ಶಿಕ್ಷಕರು ಮಾತ್ರ ನಿಗದಿಪಡಿಸಿದ ದಿನಾಂಕಗಳAದು ಸಮಯಕ್ಕೆ ಈ ಕಚೇರಿಯ ಎಸ್.ಎಸ್.ಎ ಸಭಾಂಗಣದಲ್ಲಿ ಹಾಜರಾಗತಕ್ಕದ್ದು, ಶಿಕ್ಷಕರು ಕೌನ್ಸೆಲಿಂಗ್ ಗೆ ಹಾಜರಾಗುವಾಗ ತಮ್ಮ ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಹಾಜರಾಗುವುದು, ವರ್ಗಾವಣೆ ಅರ್ಜಿಯಲ್ಲಿ ಕೋರಿರುವ ಆದ್ಯತೆಗೆ ಸಂಬಂಧಿಸಿದಂತೆ ಪೂರಕ ಮೂಲ ದಾಖಲೆಗಳೊಂದಿಗೆ  ಹಾಜರಾಗುವುದು, ಪರಸ್ಪರ ವರ್ಗಾವಣೆಯ ಪೂರಕ ದಾಖಲೆಗಳು ಪೂರಕ ಮೂಲ ದಾಖಲೆಗಳೊಂದಿಗೆ ಹಾಜರಾಗುವುದು, ಈಗಾಗಲೇ ಅಂತಿಮ ಆದ್ಯತಾ ಕೌನ್ಸೆಲಿಂಗ್ ಪಟ್ಟಿಯನ್ನು ಹಾಗೂ ಖಾಲಿ ಹುದ್ದೆಗಳ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸ್ಥಳ ಆಯ್ಕೆ ಮೊದಲೇ ಸ್ಥಳಗಳ ಬಗ್ಗೆ ಪರಿಶೀಲಿಸಿಕೊಂಡು ಆಯ್ಕೆ ಮಾಡಿಕೊಳ್ಳಲು  ಸೂಚಿಸಿದೆ, ಒಂದು ಬಾರಿ ಸ್ಥಳ ಆಯ್ಕೆ ಮಾಡಿಕೊಂಡಲ್ಲಿ ಬದಲಾವಣೆಗೆ ಅವಕಾಶವಿರುವುದಿಲ್ಲ ಕೋವಿಡ್-19ರ ನಿಯಮಗಳನ್ನು ಪಾಲಿಸಿ ಕಡ್ಡಾಯವಾಗಿ  ಮಾಸ್ಕ್ ಧರಿಸಿ ಕೌನ್ಸಿಲಿಂಗ್‌ಗೆ ಹಾಜರಾಗಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...