ಮೇಷ : ಜವಳಿ ಅಂಗಡಿ ಮಾಲೀಕರಿಗೆ ಅನಿರೀಕ್ಷಿತ ಲಾಭ ಕಂಡು ಬರಲಿದೆ. ಯಾವುದೇ ಆಸ್ತಿ ಪತ್ರಗಳಿಗೆ ಸಹಿ ಹಾಕುವ ಮುನ್ನ ನೂರು ಬಾರಿ ಯೋಚನೆ ಮಾಡಿ. ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವಾಹನ ಕೊಂಡುಕೊಳ್ಳುವ ಅವಕಾಶವಿದೆ.
ವೃಷಭ : ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇರೋದಿಲ್ಲ. ಆಗಾಗ ಹಣಕಾಸಿನ ಸಮಸ್ಯೆ ನಿಮ್ಮ ಬಾಧಿಸಲಿದೆ. ಶತ್ರುಗಳ ಉಪಟಳದಿಂದ ಕೊಂಚ ನೆಮ್ಮದಿ ಕಾಣಲಿದ್ದೀರಿ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೆಚ್ಚಿನ ಒತ್ತಡ ಇರಲಿದೆ. ಪರಿಸ್ಥಿತಿ ನಿಮ್ಮ ವಿರುದ್ಧವಾಗುವಂತಹ ಸಂದರ್ಭಗಳನ್ನ ಎದುರಿಸಬೇಕಾದೀತು.
ಮಿಥುನ : ಅನಗತ್ಯವಾಗಿ ನಕಾರಾತ್ಮಕ ಯೋಚನೆ ಮಾಡೋದನ್ನ ನಿಲ್ಲಿಸಿ. ಮಾನಸಿಕ ನೋವನ್ನ ಮರೆಯಲು ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತೀರಿ. ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬರಲಿದೆ. ನಿಮ್ಮ ಕೆಲಸಗಳಿಗೆ ಮೊದಲ ಆದ್ಯತೆಯನ್ನ ನೀಡಿ.
ಕಟಕ : ಸಹೋದ್ಯೋಗಿಗಳ ಜೊತೆ ಅನಗತ್ಯ ವಾದ ಬೇಡ. ಕುಟುಂಬದಲ್ಲಿ ಶಾಂತಿ ಕದಡಲು ನೀವೇ ಕಾರಣರಾಗಬೇಡಿ. ಪ್ರೀತಿ ಪಾತ್ರರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಬೇಸರ ಕಾಡಲಿದೆ. ಸುಬ್ರಹ್ಮಣ್ಯನನ್ನ ಆರಾಧಿಸಿ.
ಸಿಂಹ : ಸಾಂಸಾರಿಕ ಜೀವನದಲ್ಲಿ ಅನಗತ್ಯ ಖರ್ಚು ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಆಭರಣ ಕೊಳ್ಳುವಾಗ ಎಚ್ಚರ ವಹಿಸಿ. ಮನೆಯಲ್ಲಿ ಶುಭ ಕಾರ್ಯದ ಮುನ್ಸೂಚನೆ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
ಕನ್ಯಾ : ನಾನು ಅಂದುಕೊಂಡಿರೋದೇ ಸರಿ ಎಂಬ ಅಹಂಕಾರ ಬೇಡ. ಜಗತ್ತು ವಿಶಾಲವಾಗಿದೆ ಎನ್ನೋದು ತಲೆಯಲ್ಲಿರಲಿ. ಕೆಲಸದ ವಿಚಾರವಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ವಾಹನ ಖರೀದಿ ಯೋಗವಿದೆ. ಸಮಸ್ಯೆಗಳನ್ನ ತಾಳ್ಮೆಯಿಂದ ಎದುರಿಸಿ.
ತುಲಾ : ಮದುವೆಗಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ಕಚೇರಿಯಲ್ಲಿ ಸಂಬಳ ಏರಿಕೆ ಇಲ್ಲವೇ ಬಡ್ತಿ ಸುದ್ದಿ ಕೇಳಲಿದ್ದೀರಿ. ಹಿರಿಯರೊಂದಿಗೆ ವಾದಕ್ಕೆ ಇಳಿಯಬೇಕಾದ ಪರಿಸ್ಥಿತಿ ಎದುರಾಗಬಹುದು. ತಾಳ್ಮೆಯಿಂದ ವರ್ತಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ವೃಶ್ಚಿಕ : ನಿಮ್ಮ ವಿವೇಕಯುತ ನಡವಳಿಕೆ ಖಂಡಿತ ನಿಮಗೆ ವರದಾನವಾಗಿ ಬದಲಾಗಲಿದೆ. ನಿಮ್ಮಂದಲೇ ಸಹಾಯ ಪಡೆದ ಜನರು ಬೆನ್ನ ಹಿಂದೆ ಚೂರಿ ಹಾಕುವ ಸಾಧ್ಯತೆ ಇದೆ. ಆರೋಗ್ಯದತ್ತ ಹೆಚ್ಚಿನ ಗಮನ ಹರಿಸೋದು ಒಳ್ಳೆಯದು.
ಧನು : ಅಸಹಾಯಕರಿಗೆ ನೆರವಾದ ಪುಣ್ಯ ನಿಮ್ಮನ್ನ ಕಾಪಾಡಲಿದೆ. ಅವಿವೇಕಿಗಳ ಜೊತೆ ವಾದ ಬೇಡ. ವಾಹನ ಚಾಲನೆ ವೇಳೆ ಎಚ್ಚರ ವಹಿಸಿ. ವಿರೋಧಿಗಳು ನಿಮ್ಮನ್ನ ಮಣಿಸಲು ಇನ್ನಿಲ್ಲದ ಪ್ರಯತ್ನ ಮಾಡಲಿದ್ದಾರೆ. ಹೀಗಾಗಿ ಆದಷ್ಟು ಎಚ್ಚರದಿಂದಿರಿ. ಕುಲದೇವರ ಧ್ಯಾನ ಮಾಡಿ.
ಮಕರ : ದೈವಿಕ ಕಾರ್ಯಗಳ ಬಗ್ಗೆ ಒಲವು ಹೆಚ್ಚಲಿದೆ. ಯಾವುದೇ ಕೆಲಸಗಳನ್ನ ಅರ್ಧಕ್ಕೆ ನಿಲ್ಲಿಸಬೇಡಿ. ಜನರೊಂದಿಗೆ ಸಂಪರ್ಕ ಬೆಳೆಸೋದನ್ನ ರೂಢಿ ಮಾಡಿಕೊಳ್ಳಿ. ಪ್ರತಿ ಸಂದರ್ಭದಲ್ಲೂ ಜಾಗೃತವಾಗಿ ಮುನ್ನಡೆಯಿರಿ. ಕುಲದೇವತೆಯನ್ನ ಆರಾಧಿಸಿ ಹೊಸ ಕೆಲಸಕ್ಕೆ ಕೈ ಹಾಕಿದಲ್ಲಿ ಯಶಸ್ಸು ಶತಸಿದ್ಧ
ಕುಂಭ : ದಾಯಾದಿ ಕಲಹ ಆರಂಭವಾಗಲಿದೆ. ಕುಟುಂಬದಲ್ಲಿ ನೆಮ್ಮದಿ ಇರೋದಿಲ್ಲ. ಹೂಡಿಕೆ ಮಾಡುವವರಿಗೆ ಇದು ಶುಭ ಸಂದರ್ಭವಲ್ಲ. ಇಂಜಿನಿಯರ್, ವೈದ್ಯಕೀಯ ಹಾಗೂ ವಕೀಲ ವೃತ್ತಿಯವರಿಗೆ ಹೊಸ ಅವಕಾಶಗಳು ಹುಡುಕಿ ಬರಲಿದೆ. ಸಂಸಾರದಲ್ಲಿನ ಏರಿಳಿತಗಳು ಸಮತೋಲನಕ್ಕೆ ಬರಲಿದೆ.
ಮೀನ : ನಿಮ್ಮ ದ್ವಂದ್ವ ಚಿಂತನೆಯೇ ನಿಮ್ಮನ್ನ ಕಷ್ಟಕ್ಕೆ ದೂಡಲಿದೆ. ವ್ಯಾಪಾರಿಗಳಿಗೆ ಲಾಭವಿದೆ. ಆಸ್ತಿ ಖರೀದಿ ಮಾಡುವ ಯೋಗವಿದೆ. ರಾಜಕೀಯ ವ್ಯಕ್ತಿಗಳಿಗೆ ಇದು ಒಳ್ಳೆಯ ದಿನವಲ್ಲ. ನಿಮ್ಮ ತಪ್ಪಿಲ್ಲದೇ ಹೋದರೂ ಅಪಮಾನಗಳನ್ನ ಅನುಭವಿಸಬೇಕಾದ ಸಂದರ್ಭ ಎದುರಾಗಬಹುದು.