alex Certify BIG NEWS: ಮಾಸ್ಕ್​ ಮುಕ್ತ ಮಹಾರಾಷ್ಟ್ರ ನಿರ್ಮಾಣಕ್ಕೆ ಸರ್ಕಾರದ ಚಿಂತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾಸ್ಕ್​ ಮುಕ್ತ ಮಹಾರಾಷ್ಟ್ರ ನಿರ್ಮಾಣಕ್ಕೆ ಸರ್ಕಾರದ ಚಿಂತನೆ

ಮಹಾರಾಷ್ಟ್ರವನ್ನು ಮಾಸ್ಕ್​ ಮುಕ್ತ ರಾಜ್ಯವನ್ನಾಗಿ ಮಾಡಲು ಉದ್ಧವ್​ ಠಾಕ್ರೆ ನೇತೃತ್ವದ ಸರ್ಕಾರವು ಕೇಂದ್ರ ಹಾಗೂ ರಾಜ್ಯದ ಟಾಸ್ಕ್​ ಫೋರ್ಸ್​ಗಳ ಸಲಹೆ ಮತ್ತು ಮಾಹಿತಿಯನ್ನು ಕೇಳಿದೆ ಎಂದು ಆರೋಗ್ಯ ಸಚಿವ ರಾಜೇಶ್​​ ಟೋಪೆ ಹೇಳಿದ್ದಾರೆ. ಮಾಸ್ಕ್​ ಕಡ್ಡಾಯ ಎಂಬ ನಿಯಮವನ್ನು ತೆಗೆದು ಹಾಕುವ ಬಗ್ಗೆ ರಾಜ್ಯ ಸರ್ಕಾರವು ಮಾಹಿತಿಯನ್ನು ಕೇಳುತ್ತಿದೆ ಎಂದು ಟೋಪೆ ಹೇಳಿದ್ದಾರೆ.

ಇತ್ತೀಚಿನ ಕ್ಯಾಬಿನೆಟ್​ ಸಭೆಯಲ್ಲಿ ನಾವು ಮಹಾರಾಷ್ಟ್ರವನ್ನು ಮಾಸ್ಕ್​ ಮುಕ್ತ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಬ್ರಿಟನ್​ ಸೇರಿದಂತೆ ವಿವಿಧ ದೇಶಗಳು ತಮ್ಮ ರಾಷ್ಟ್ರದ ನಾಗರಿಕರಿಗೆ ಮಾಸ್ಕ್​ ಧರಿಸುವುದನ್ನು ನಿಲ್ಲಿಸುವಂತೆ ಹೇಳಿವೆ. ಇದನ್ನು ಅವರು ಹೇಗೆ ಸಾಧಿಸಿದರು ಎಂಬುದರ ಕುರಿತು ನಮಗೂ ಮಾಹಿತಿ ನೀಡುವಂತೆ ನಾವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಟಾಸ್ಕ್​ಫೋರ್ಸ್​ನ್ನು ವಿನಂತಿಸಿದ್ದೇವೆ ಎಂದು ಟೋಪೆ ಹೇಳಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಮಹಾರಾಷ್ಟ್ರವು ಕೋವಿಡ್​ ಮಾರ್ಗಸೂಚಿಯಲ್ಲಿ ಬಹುತೇಕ ಸಡಿಲಿಕೆಗಳನ್ನು ಮಾಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಡಿಲಿಕೆಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಟೋಪೆ ಹೇಳಿದರು. ಇದರ ಅರ್ಥ ಮುಂದಿನ ದಿನಗಳಲ್ಲಿ ಮಾಸ್ಕ್​​ ಇಲ್ಲದೇ ಜನರು ಓಡಾಡಬಹುದು ಎಂದರ್ಥವಲ್ಲ ಎಂದು ಟೋಪೆ ಹೇಳಿದ್ದಾರೆ.

ಮಾಸ್ಕ್​ ಕಡ್ಡಾಯದ ರೂಲ್ಸ್​ನ್ನು ಸಡಿಲಿಸುವ ಬಗ್ಗೆ ಸರ್ಕಾರ ಇನ್ನೂ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ಟೋಪೆ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...