alex Certify 6 ವರ್ಷದ ಬಾಲಕನ ಜೀವ ಉಳಿಸಲು 60 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದ ಯುವಕ ಕ್ಯಾನ್ಸರ್​ನಿಂದ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ವರ್ಷದ ಬಾಲಕನ ಜೀವ ಉಳಿಸಲು 60 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದ ಯುವಕ ಕ್ಯಾನ್ಸರ್​ನಿಂದ ಸಾವು

ತಾನು ಜೀವಮಾನದಲ್ಲಿ ಭೇಟಿಯಾಗದ ಆರು ವರ್ಷದ ಬಾಲಕನ ಜೀವ ಉಳಿಸಲು 61 ಲಕ್ಷ ರೂಪಾಯಿ ದೇಣಿಗೆ ನೀಡಿದ 19 ವರ್ಷದ ಯುವಕ ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದಾನೆ. 19 ವರ್ಷದ ರೈಸ್​ ಲ್ಯಾಂಗ್​ಫೋರ್ಡ್​ ಅಮೆರಿಕಾದಲ್ಲಿ ನ್ಯುರೋಬ್ಲಾಸ್ಟೋಮಾದಿಂದ ಬಳಲುತ್ತಿದ್ದ ಆರು ವರ್ಷದ ಜಾಕೋಬ್​ ಜಾನ್ಸ್​​ ಚಿಕಿತ್ಸೆಗಾಗಿ ನಿಧಿಯನ್ನು ಸಂಗ್ರಹಿಸಿದ್ದ ಎನ್ನಲಾಗಿದೆ.

ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದ ರೈಸ್​ ಸ್ನೇಹಿತರೊಂದಿಗೆ ಸೇರಿ ರೇಸ್​ನಲ್ಲಿ ಭಾಗಿಯಾಗಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದನು. ಇದೇ ಮೊದಲ ಬಾರಿಗೆ ರೈಸ್​ಗೆ ಅನಾರೋಗ್ಯದ ಮೊದಲ ಚಿಹ್ನೆ ಕಾಣಿಸಿಕೊಂಡಿತ್ತು.

ಅಕ್ಟೋಬರ್ 2020 ರಲ್ಲಿ, ವಿವಿಧ ಪರೀಕ್ಷೆಗಳ ನಂತರ, ರೈಸ್‌ಗೆ ಆಸ್ಟಿಯೊಸಾರ್ಕೊಮಾ ರೋಗ ಇರುವುದು ಧೃಡಪಟ್ಟಿತ್ತು. ಈತನ ಬಲ ಸೊಂಟದಲ್ಲಿ ಗಡ್ಡೆ ಇತ್ತು. ಕ್ಯಾನ್ಸರ್​ ಇರುವುದು ಧೃಡಪಟ್ಟ ಬಳಿಕ ಕಿಮೋಥೆರಪಿ ಚಿಕಿತ್ಸೆಗೆ ಒಳಗಾದನು.

ರೈಸ್​ ತನ್ನ ಮೊಣಕಾಲು ಚಿಪ್ಪಿನಿಂದ ಬಲ ಸೊಂಟದವರೆಗಿನ ಎಲ್ಲಾ ಮೂಳೆಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾದರು. ಇದರರ್ಥ ರೈಸ್‌ಗೆ ನಡೆಯಲು ಯಾವಾಗಲೂ ಎರಡು ಕೋಲುಗಳು ಅವಶ್ಯಕತೆ ಇತ್ತು.

ಇದಾದ ಬಳಿಕ ರೈಸ್​ 2021ರ ಆಗಸ್ಟ್​ ತಿಂಗಳಲ್ಲಿ ಮತ್ತೆ ಕಿಮೋಥೆರಪಿ ಚಿಕಿತ್ಸೆಗೆ ಒಳಗಾದರು. ಇದಾದ ಬಳಿಕ ರೈಸ್ ಕ್ಯಾನ್ಸರ್​ನಿಂದ ಬಚಾವಾಗಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದರು. ರೈಸ್​ಗೆ ಪುರ್ನಜನ್ಮ ದೊರಕಿದೆ ಎಂದು ಭಾವಿಸಿದ್ದರು. ಆದರೆ ಅಕ್ಟೋಬರ್​ನಲ್ಲಿ ರೈಸ್​ ಬಲಗಾಲು ಊದಿಕೊಳ್ಳಲು ಆರಂಭಿಸಿತು. ಬಲಗಾಲು ಸಾಮಾನ್ಯ ಗಾತ್ರಕ್ಕಿಂತ ಮೂರು ಪಟ್ಟು ದೊಡ್ಡದಾಯಿತು. ಡಿಸೆಂಬರ್​​ನಲ್ಲಿ ರೈಸ್​ಗೆ ಮಾರಣಾಂತಿಕ ಕಾಯಿಲೆ ಇರುವುದು ಧೃಡಪಟ್ಟಿತ್ತು.

ರೈಸ್ ಅದೇ ಊರಿನ ಹುಡುಗನಾದ ಜಾಕೋಬ್ ಜೋನ್ಸ್‌ನ ಕಥೆಯನ್ನು ಓದಿದಾಗ, ಅವನು ಆರು ವರ್ಷದ ಮಗುವಿಗೆ ಮತ್ತು ಅವನ ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದನು. ಇದಾದ ಬಳಿಕ ನಿಧಿ ಸಂಗ್ರಹ ಕಾರ್ಯ ಆರಂಭಿಸಿದ ರೈಸ್​ ಜಾಕೋಬ್​ಗೆ 60 ಲಕ್ಷ ರೂಪಾಯಿ ಹಣ ಕೊಡಿಸಿದ್ದನು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...