ಎರಡು ಹೊಸ ಡಾರ್ಕ್ ಆವೃತ್ತಿಯ ರೂಪಾಂತರಗಳ ಪರಿಚಯದೊಂದಿಗೆ ತನ್ನ ಆಲ್ಟ್ರೋಜ಼್ನ ಎರಡನೇ ವಾರ್ಷಿಕೋತ್ಸವವನ್ನು ಟಾಟಾ ಮೋಟಾರ್ಸ್ ಆಚರಿಸುತ್ತಿದೆ.
ಕಳೆದ ವರ್ಷ ಜುಲೈನಲ್ಲಿ ಮೊದಲ ಆಲ್ಟ್ರೋಜ಼್ ಡಾರ್ಕ್ ಆವೃತ್ತಿಯನ್ನು ಪ್ರಾರಂಭಿಸಿಲಾಗಿ ಗ್ರಾಹಕರಿಂದ ಅದ್ಧೂರಿಯಾಗಿ ಸ್ವೀಕರಿಸಲ್ಪಟ್ಟಿತ್ತು. ಆದರೆ, ಇದು ಟಾಪ್-ಸ್ಪೆಕ್ XZ+ ಪೆಟ್ರೋಲ್ ರೂಪಾಂತರಗಳಲ್ಲಿ ಮಾತ್ರ ನೀಡಲಾಗಿತ್ತು. ಈಗ ಡಾರ್ಕ್ ಆವೃತ್ತಿ ಶ್ರೇಣಿಯನ್ನು ಮಿಡ್-ಸ್ಪೆಕ್ XT ಟ್ರಿಮ್ ಮತ್ತು ಟಾಪ್-ಸ್ಪೆಕ್ XZ+ ಡೀಸೆಲ್ ರೂಪಾಂತರಕ್ಕೆ ವಿಸ್ತರಿಸಲಾಗಿದೆ. ಹೊಸ ಟಾಟಾ ಆಲ್ಟ್ರೋಜ಼್ ಡಾರ್ಕ್ ಆವೃತ್ತಿಯ ಪರಿಚಯಾತ್ಮಕ ಬೆಲೆಗಳು ಭಾರತದಲ್ಲಿ 7.96 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ.
ಆಲ್ಟ್ರೋಜ಼್ ಡಾರ್ಕ್ ಆವೃತ್ತಿಯ XT ರೂಪಾಂತರವು ಕಾಸ್ಮೊ ಡಾರ್ಕ್ ಪೇಂಟ್ ಸ್ಕೀಮ್ನಲ್ಲಿ ಫಿನಿಶಿಂಗ್ ಹೊಂದಿದೆ ಮತ್ತು ಬ್ಲ್ಯಾಕ್ಡ್-ಔಟ್ ಅಂಶಗಳನ್ನು ಒಳಗೊಂಡಿದೆ. ಇದಲ್ಲದೆ, ಈ ಪ್ರೀಮಿಯಂ ಹ್ಯಾಚ್ಬ್ಯಾಕ್ ಡಾರ್ಕ್ ಟಿಂಟೆಡ್ ಹೈಪರ್-ಸ್ಟೈಲ್ ಚಕ್ರಗಳನ್ನು (ಮಿಶ್ರಲೋಹಗಳಲ್ಲ) ಮತ್ತು #ಡಾರ್ಕ್ ಬ್ಯಾಡ್ಜಿಂಗ್ ಅನ್ನು ಪಡೆದಿದೆ.
SHOCKING: HIV ಸೋಂಕಿತನಿಂದ ಪೈಶಾಚಿಕ ಕೃತ್ಯ, ಮನೆಯಲ್ಲೇ ಮಲಮಗಳ ಮೇಲೆ ಅತ್ಯಾಚಾರ
ಒಳಭಾಗಕ್ಕೆ ಬರುವುದಾದರೆ, ಆಲ್ಟ್ರೋಜ಼್ XT ಡಾರ್ಕ್ ಆವೃತ್ತಿಯು ಸಂಪೂರ್ಣ ಕಪ್ಪು ಕ್ಯಾಬಿನ್ ಹೊಂದಿದ್ದು, ರಂಧ್ರಭರಿತ ಲೆಥೆರೆಟ್ ಸೀಟುಗಳು, ಹಿಂಭಾಗದ ಆರ್ಮ್ರೆಸ್ಟ್, ಎತ್ತರ-ಹೊಂದಾಣಿಕೆ ಮಾಡಬಲ್ಲ ಚಾಲಕ ಸೀಟ್, ಹಿಂಭಾಗದ ಹೆಡ್ರೆಸ್ಟ್, ಮುಂಭಾಗದ ಹೊಂದಾಣಿಕೆಯ ಸೀಟ್ ಬೆಲ್ಟ್ಗಳು, ಚರ್ಮದಿಂದ ಸುತ್ತಲ್ಪಟ್ಟ ಸ್ಟೀರಿಂಗ್ ವೀಲ್ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಿದೆ.
ಟಾಟಾ ಮೋಟಾರ್ಸ್ ಆಲ್ಟ್ರೋಜ಼್ XZ+ ಡಾರ್ಕ್ ಆವೃತ್ತಿಯಲ್ಲಿ ಎರಡು ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸಿ ನವೀಕರಿಸಲಾಗಿದೆ. ಅವುಗಳೆಂದರೆ ಬ್ರೇಕ್ ಸ್ವೇ ಕಂಟ್ರೋಲ್ ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್). ಪವರ್ಟ್ರೇನ್ ಬಗ್ಗೆ ಹೇಳುವುದಾದರೆ, ಟಾಟಾ ಆಲ್ಟ್ರೋಜ಼್ ಅನ್ನು ಭಾರತದಲ್ಲಿ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. 1.2-ಲೀಟರ್ ನೈಸರ್ಗಿಕ-ಆಕಾಂಕ್ಷೆಯ ಪೆಟ್ರೋಲ್ ಮೋಟಾರ್, 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ಗಳ ಆಯ್ಕೆಯಲ್ಲಿ ಈ ಕಾರುಗಳು ಬರುತ್ತವೆ. ಟ್ರಾನ್ಸ್ಮಿಷನ್ ಆಯ್ಕೆಗಳು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಮಾತ್ರ ಒಳಗೊಂಡಿರುತ್ತವೆ.
ಟಾಟಾ ಆಲ್ಟ್ರೋಜ಼್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಜನವರಿ 2020ರಲ್ಲಿ ಪರಿಚಯಿಸಿದ್ದು, ಈ ಪ್ರೀಮಿಯಂ ಹ್ಯಾಚ್ಬ್ಯಾಕ್ನ 1.2 ಲಕ್ಷಕ್ಕೂ ಹೆಚ್ಚು ಘಟಕಗಳು ದೇಶದಲ್ಲಿ ಮಾರಾಟವಾಗಿವೆ.
ಆಲ್ಟ್ರೋಜ಼್ XT ಡಾರ್ಕ್ ಆವೃತ್ತಿಯನ್ನು ರೂ. 7.96 ಲಕ್ಷದ ಪರಿಚಯಾತ್ಮಕ ಬೆಲೆಯಲ್ಲಿ (ಎಕ್ಸ್ಶೋರೂಂ) ಬಿಡುಗಡೆ ಮಾಡಲಾಗಿದೆ. ಹೊಸ ಡಾರ್ಕ್ ಆವೃತ್ತಿ ಶ್ರೇಣಿಯ ವಿವರವಾದ ಬೆಲೆಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ. ದೇಶಾದ್ಯಂತ ಇರುವ ಟಾಟಾ ಮೋಟಾರ್ಸ್ನ ಎಲ್ಲಾ ಅಧಿಕೃತ ಡೀಲರ್ಶಿಪ್ಗಳಲ್ಲಿ ಈ ಕಾರುಗಳಿಗೆ ಬುಕ್ಕಿಂಗ್ಗಳನ್ನು ತೆರೆಯಲಾಗಿದೆ.