ಇ-ರುಪಿ ಪೂರ್ವಪಾವತಿ ಡಿಜಿಟಲ್ ವೌಚರ್‌ಗಳ ಗರಿಷ್ಠ ಮಿತಿಯನ್ನು 10,000 ರೂ.ಗಳಿಂದ ಒಂದು ಲಕ್ಷ ರೂಪಾಯಿಗೆ ಏರಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಇದೇ ವ್ಯವಸ್ಥೆಯಲ್ಲಿ ಬಹು ವ್ಯವಹಾರಗಳನ್ನು ಮಾಡಲು ಅವಕಾಶ ಕೊಟ್ಟಿದೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಕಳೆದ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ್ದ ಇ-ರುಪಿಯನ್ನು ನಿರ್ದಿಷ್ಟ ಔಟ್‌ಲೆಟ್‌ಗಳಲ್ಲಿ ಸದ್ಯದ ಮಟ್ಟಿಗೆ ಬಳಸಬಹುದಾಗಿದ್ದು, ಮೊಬೈಲ್ ಫೋನ್‌ಗಳಿಗೆ ಎಲೆಕ್ಟ್ರಾನಿಕ್ ಆಗಿ ಡೆಲಿವರಿ ಮಾಡಲಾಗುವುದು. ಯುಪಿಐ ಪ್ಲಾಟ್‌ಫಾರಂ ಮೇಲೆ ಚಲಿಸುವ ಇ-ರುಪಿ ಈ ಹಿಂದೆ ವೌಚರ್ ಒಂದಕ್ಕೆ ಗರಿಷ್ಠ 10,000 ರೂಪಾಯಿಗಳ ಮಿತಿ ಹೊಂದಿದ್ದು, ಎಲ್ಲಾದರೂ ಒಮ್ಮೆ ಬಳಸಬಹುದಾಗಿತ್ತು.
ಇ-ರುಪಿ ವೌಚರ್‌ಗಳನ್ನು ಸದ್ಯಕ್ಕೆ ಕೋವಿಡ್-19 ಲಸಿಕಾಕರಣದ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವೌಚರ್ ಅನ್ನು ಇನ್ನಷ್ಟು ಉದ್ದೇಶಗಳಿಗೆ ಬಳಸುವುದನ್ನು ಪರಿಗಣಿಸಲು ಚಿಂತನೆ ನಡೆಸಿವೆ. ಈ ಮೂಲಕ ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲುಪುವಂತೆ ಮಾಡುವುದು ಇನ್ನಷ್ಟು ಸರಳವಾಗಲಿದೆ ಎನ್ನಲಾಗಿದೆ.
ಚರ್ಮದಿಂದ ಚರ್ಮಕ್ಕೆ ಸಂಪರ್ಕವಿಲ್ಲದಿದ್ರೆ ಲೈಂಗಿಕ ದೌರ್ಜನ್ಯವಲ್ಲ ಎಂದು ಆದೇಶ ನೀಡಿದ್ದ ನ್ಯಾಯಾಧೀಶೆ ಅಚ್ಚರಿ ನಿರ್ಧಾರ: ಅಧಿಕಾರಾವಧಿ ಮುಗಿವ ಮೊದಲೇ ರಾಜೀನಾಮೆ
ಸಾಂಕ್ರಾಮಿಕದ ನಡವೆ ಸರ್ಕಾರವು ಇಂಥ ವರ್ಗಾವಣೆಗಳನ್ನು ಜನ್-ಧನ್ ಖಾತೆಗಳ ಮೂಲಕ ಫಲಾನುಭವಿಗಳಿಗೆ ನೆರವಿನ ಪ್ಯಾಕೇಜ್‌ಗಳ ಭಾಗವಾಗಿ ಮಾಡಿದೆ. ಈ ನಡೆಯಿಂದ ದೊಡ್ಡ ರಿಲೀಫ್ ಸಿಕ್ಕಿದ್ದು ನಿಜವಾದರೂ ಬ್ಯಾಂಕುಗಳ ಗ್ರಾಮೀಣ ಶಾಖೆಗಳಲ್ಲಿ ದೊಡ್ಡ ಸರತಿ ಸಾಲುಗಳು ನಿಲ್ಲುವಂತೆ ಆಗಿಬಿಟ್ಟಿದೆ. ಇ-ರುಪಿಯೊಂದಿಗೆ ಸರ್ಕಾರವು ದುಡ್ಡನ್ನು ಬಳಸುವ ಕಡೆಯ ವಿಧವನ್ನು ನಿಯಂತ್ರಿಸಬಹುದಾಗಿದೆ.