ಡ್ರಾಮಿನ್ ನುಡಿಸುತ್ತಾ ಸಾಂಪ್ರದಾಯಿಕ ಮೊನ್ಪಾ ಹಾಡನ್ನು ಹಾಡಿದ ಕಲಾವಿದ: ವಿಡಿಯೋ ಹಂಚಿಕೊಂಡ ಅರುಣಾಚಲ ಸಿಎಂ 11-02-2022 7:33AM IST / No Comments / Posted In: Featured News, Live News, Entertainment ಅರುಣಾಚಲ ಪ್ರದೇಶ ಸಿಎಂ ಪೇಮಾ ಖಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ನಿಮ್ಮನ್ನು ಮಂತ್ರಮುಗ್ಧಗೊಳಿಸಬಹುದು. ವ್ಯಕ್ತಿಯೊಬ್ಬ ಸಾಂಪ್ರದಾಯಿಕ ಹಾಡನ್ನು ನುಡಿಸುತ್ತಿರುವ ಸುಂದರವಾದ ವಿಡಿಯೋವನ್ನು ಮುಖ್ಯಮಂತ್ರಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಮೊನ್ಪಾ ಹಾಡನ್ನು ಹಾಡಿರುವ ವ್ಯಕ್ತಿ ಡ್ರಾಮಿನ್ ಸಾಧನವನ್ನು ನುಡಿಸಿದ್ದಾರೆ. ವ್ಯಕ್ತಿಯ ಹಿಂದೆ ಸುಂದರವಾದ ಗುಡ್ಡಗಾಡು ಪ್ರದೇಶವಿದ್ದು, ಅದರ ಮುಂದೆ ನಿಂತ ವ್ಯಕ್ತಿಯು ಸಾಂಪ್ರದಾಯಿಕ ಉಡುಪು ಧರಿಸಿದ್ದಾರೆ. ಈ ಅದ್ಭುತ ವಿಡಿಯೋವನ್ನು ಅರುಣಾಚಲ ಪ್ರದೇಶದ ಸಿಎಂ ಹಂಚಿಕೊಂಡಿದ್ದಾರೆ. ರೋಡ್ ಶೋ ವೇಳೆ ಬಾಲಕಿಯತ್ತ ಹಾರ ಎಸೆದ ಕೇಂದ್ರ ಸಚಿವ ಅನುರಾಗ್ ಠಾಕೂರ್: ವಿಡಿಯೋ ವೈರಲ್ ಇಂದು ತವಾಂಗ್ ಜಿಲ್ಲೆಯ ಬೊಂಗ್ಲೆಂಗ್ ಹಳ್ಳಿಯಲ್ಲಿ ಭೂತಾನ್ ಗಡಿಯ ಬಳಿಯ ಮೊನ್ಪಾ ಇನ್ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನ ಕಲಾವಿದರೊಬ್ಬರು, ಸಾಂಪ್ರದಾಯಿಕ ಸಂಗೀತ ವಾದ್ಯವಾದ ಡ್ರಾಮೈನ್ ಅನ್ನು ನುಡಿಸುತ್ತಾ ಸುಮಧುರವಾದ ಮೊನ್ಪಾ ಹಾಡನ್ನು ಪ್ರಸ್ತುತಪಡಿಸುತ್ತಾರೆ ಎಂದು ಶೀರ್ಷಿಕೆ ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸಾವಿರಾರು ಮಂದಿ ಈ ವಿಡಿಯೋ ವೀಕ್ಷಿಸಿದ್ದು, ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ. ಕಲಾವಿದನ ಸುಂದರವಾದ ಟ್ಯೂನ್‌ಗೆ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ. Today near the Bhutan border at Bongleng village in Tawang district. An artiste from Monpa Institute of Performing Arts (MIPA) presents a melodious Monpa song, playing the ‘dramyin’, a traditional musical instrument. @incredibleindia @MDoNER_India @MinOfCultureGoI @tourismgoi pic.twitter.com/cbFHKfU7rr — Pema Khandu པདྨ་མཁའ་འགྲོ་། (Modi Ka Parivar) (@PemaKhanduBJP) February 10, 2022