ಕ್ಯಾಲಿಫೋರ್ನಿಯಾ: ಸಾಮಾನ್ಯವಾಗಿ ಕೆಲವರು ತಮ್ಮ ಕಾರಿನಲ್ಲಿ ಎಲ್ಲಾದರೂ ಹೋಗುತ್ತಿದ್ರೆ, ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳನ್ನ ಜೊತೆಗೆ ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಭೂಪ ಜೀವಂತ ಮೊಸಳೆಯ ಜೊತೆ ತನ್ನ ಕಾರಿನಲ್ಲಿ ಸುತ್ತಾಡಿರುವ ಆಘಾತಕಾರಿ ಘಟನೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಪರೀಕ್ಷಾ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಕಾರಿನ ಚಾಲಕ 29 ವರ್ಷದ ಟೈಲರ್ ವ್ಯಾಟ್ಸನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ತನ್ನ ಕಾರಿನಲ್ಲಿ ಮೊಸಳೆಯಿದೆ ಎಂದು ಪೊಲೀಸರಿಗೆ ತಿಳಿಸಿದಾಗ ಪರಿಸ್ಥಿತಿ ವಿಲಕ್ಷಣ ತಿರುವು ಪಡೆದುಕೊಂಡಿದೆ.
ಫೇಸ್‌ಬುಕ್‌ನಲ್ಲಿ ಆರೋಪಿ ಬಂಧನದ ಬಗ್ಗೆ ವಿವರಿಸಿದ ಆಂಡರ್ಸನ್ ಪೊಲೀಸ್ ಇಲಾಖೆ ಅಧಿಕಾರಿಗಳು, ವ್ಯಾಟ್ಸನ್‌ನ ಕಾರಿನಲ್ಲಿ ಜೀವಂತ ಮೊಸಳೆ ಇರುವುದನ್ನು ಕಂಡುಕೊಂಡಿರುವುದಾಗಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಕ್ಯಾಲಿಫೋರ್ನಿಯಾದ ಮೀನು ಮತ್ತು ವನ್ಯಜೀವಿ ಇಲಾಖೆಯ ಅನಿಮಲ್ ಕಂಟ್ರೋಲ್ ಅಧಿಕಾರಿಗಳು ಮತ್ತು ಗೇಮ್ ವಾರ್ಡನ್ ರನ್ನು ಕರೆಸಿದ್ದು, ಅವರು ಮೊಸಳೆಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ರೋಡ್ ಶೋ ವೇಳೆ ಬಾಲಕಿಯತ್ತ ಹಾರ ಎಸೆದ ಕೇಂದ್ರ ಸಚಿವ ಅನುರಾಗ್ ಠಾಕೂರ್: ವಿಡಿಯೋ ವೈರಲ್
ಸರೀಸೃಪವು ಕಾರಿನ ಹಿಂಬದಿಯ ಆಸನದ ಕೆಳಗೆ ಕುಳಿತಿರುವ ಫೋಟೋವನ್ನು ಪೊಲೀಸರು ಹಂಚಿಕೊಂಡಿದ್ದಾರೆ. ಅದರ ಮೂತಿಯನ್ನು ಕಪ್ಪು ಟೇಪ್‌ನಿಂದ ಬಂಧಿಸಲಾಗಿತ್ತು. ಮತ್ತು ಸುತ್ತಲೂ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಆಹಾರದ ಹೊದಿಕೆಗಳು ಇರುವುದನ್ನು ಫೋಟೋದಲ್ಲಿ ಕಾಣಬಹುದು.
ಅದೃಷ್ಟವಶಾತ್, ಮೊಸಳೆಯು ಮರಿಯಾಗಿದ್ದುದರಿಂದ ಯಾರಿಗೂ ಅಪಾಯವನ್ನುಂಟು ಮಾಡಿಲ್ಲ. ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಕೆಲವು ಫೋಟೋಗಳಲ್ಲಿ, ಅಧಿಕಾರಿಗಳು ನಿರ್ಭಯವಾಗಿ ಮೊಸಳೆಯನ್ನು ತಮ್ಮ ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. ಮೊಸಳೆಯು ತನ್ನ ಸ್ನೇಹಿತನಿಗೆ ಸೇರಿದ್ದೆಂದು ವ್ಯಾಟ್ಸನ್ ಹೇಳಿದ್ದು, ಕೂಡಲೇ ಆತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.