alex Certify ಈ ರಾಶಿಯ ಉದ್ಯೋಗಾಕಾಂಕ್ಷಿಗಳಿಗೆ ಕಾದಿದೆ ಇಂದು ಶುಭ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಉದ್ಯೋಗಾಕಾಂಕ್ಷಿಗಳಿಗೆ ಕಾದಿದೆ ಇಂದು ಶುಭ ಸುದ್ದಿ

ಮೇಷ : ನಿಮ್ಮ ಅತಿಯಾದ ಕೋಪ ನಿಮ್ಮ ಆತ್ಮೀಯರ ಬೇಸರಕ್ಕೆ ಕಾರಣವಾಗಲಿದೆ. ಸಂಗಾತಿಯ ಮೇಲೂ ಅತಿಯಾದ ಕೋಪ ಬೇಡ. ಇಂದು ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ಉದ್ಯಮದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನೂರು ಬಾರಿ ಯೋಚನೆ ಮಾಡಿ.

ವೃಷಭ: ಯಾರದ್ದೋ ಮೇಲಿನ ಕೋಪ ಮಕ್ಕಳ ಮೇಲೆ ತೆಗೆಯುತ್ತಿದ್ದೀರಿ. ಇದು ನಿಜಕ್ಕೂ ಒಳ್ಳೆಯದಲ್ಲ. ಸಂಗಾತಿಯೊಂದಿಗಿನ ವೈಮನಸ್ಯ ಮುಂದುವರಿಯಲಿದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ: ಹಿತಶತ್ರುಗಳು ನಿಮ್ಮ ಹೆಸರಿಗೆ ಮಸಿ ಬಳಿಯುವಂತಹ ಕೆಲಸ ಮಾಡುವ ಸಾಧ್ಯತೆ ಇದೆ. ಎಲ್ಲಾ ಪಿತೂರಿಗಳಿಂದ ತಪ್ಪಿಸಿಕೊಳ್ಳುವ ಬಗ್ಗೆ ಯೋಚಿಸಿ. ಕಲಾವಿದರಿಗೆ ಇಂದು ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಕೋರ್ಟ್​ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಾ.

ಕಟಕ : ನಿಮ್ಮ ಕೌಟುಂಬಿಕ ಜೀವನವು ನೆಮ್ಮದಿಯಿಂದ ಇರಲಿದೆ. ಪ್ರೀತಿ ಪಾತ್ರರ ಖುಷಿಗಾಗಿ ಇನ್ನಿಲ್ಲದ ಪ್ರಯತ್ನ ಮಾಡುವ ನಿಮ್ಮ ಈ ಗುಣದಿಂದಲೇ ಕುಟುಂಬ ಸಂತಸದಿಂದ ಇರಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ಕಚೇರಿ ಕೆಲಸದಲ್ಲಿ ಇನ್ನಷ್ಟು ಆತ್ಮವಿಶ್ವಾಸ ಬೇಕು.

ಸಿಂಹ: ಕೆಲಸದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪದೇ ಪದೇ ಕಾರಣಗಳನ್ನು ನೀಡಬೇಡಿ. ಇದರಿಂದ ಮೇಲಾಧಿಕಾರಿಗಳಿಗೆ ನಿಮ್ಮ ಮೇಲಿನ ಒಳ್ಳೆಯ ಅಭಿಪ್ರಾಯ ಬದಲಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ಲಾಭಕ್ಕಿಂತ ತೊಂದರೆಗಳೇ ಹೆಚ್ಚಾಗಬಹುದು. ಹಣಕಾಸಿನ ಸಮಸ್ಯೆ ನಿಮ್ಮನ್ನು ಕಾಡಲಿದೆ.

ಕನ್ಯಾ : ಸ್ನೇಹಿತರ ನಡುವೆ ಉಂಟಾಗಿರುವ ಮನಸ್ತಾಪಗಳನ್ನು ಬಗೆಹರಿಸಲು ಇನ್ನಿಲ್ಲದ ಹರಸಾಹಸ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಅವಕಾಶಗಳು ಹುಡುಕಿಕೊಂಡು ಬರಲಿದೆ. ಉದ್ಯೋಗಾಕಾಂಕ್ಷಿಗಳಿಗೂ ಇಂದು ಶುಭ ಸುದ್ದಿ ಕಾದಿದೆ.

ತುಲಾ : ವ್ಯಾಪಾರದಲ್ಲಿ ಲಾಭ ಸಿಗುತ್ತಿಲ್ಲ ಎಂಬ ಹತಾಶೆ ಬೇಡ. ತಾಳ್ಮೆಯಿಂದಿರಿ. ಇದರಿಂದ ಮುಂದಿನ ದಿನಗಳಲ್ಲಿ ಲಾಭ ನಿಮ್ಮದಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಕಚೇರಿ ಕೆಲಸದಲ್ಲಿ ಅನಿರೀಕ್ಷಿತ ಜವಾಬ್ದಾರಿ ನಿಮ್ಮ ಹೆಗಲೇರಲಿದೆ.

ವೃಶ್ಚಿಕ : ವ್ಯಾಪಾರ ವ್ಯವಹಾರದಲ್ಲಿ ನಿಮಗೆ ದೊಡ್ಡ ಗ್ರಾಹಕರ ಪರಿಚಯವಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನೆರವೇರಲಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮಗೆ ಒತ್ತಡ ಹೆಚ್ಚಲಿದೆ. ಹಿತಶತ್ರುಗಳ ಕಾಟವಿದೆ.

ಧನು : ಸ್ನೇಹದ ಪಾಶಕ್ಕೆ ಬಿದ್ದು ಲಾಭವಿಲ್ಲದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹೋಗಬೇಡಿ. ಜಾಣ್ಮೆಯಿಂದ ತಪ್ಪಿಸಿಕೊಳ್ಳಿ. ಮೋಸದ ಹಾದಿಯಿಂದ ಲಾಭ ಗಳಿಸುವ ಕೆಲಸ ಬೇಡ. ತಾಯಿಯ ಆರೋಗ್ಯ ಹದಗೆಡಲಿದೆ. ಸ್ತ್ರೀಯರಿಗೆ ಇಂದು ಆರ್ಥಿಕ ಲಾಭವಿದೆ.

ಮಕರ : ಸಂಗಾತಿಯ ಜೊತೆ ಹೆಚ್ಚು ಕಾಲ ಕಳೆಯಲಿದ್ದೀರಿ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಇಂದು ತಕ್ಕ ಫಲಿತಾಂಶ ಸಿಗಲಿದೆ. ವ್ಯಾಪಾರಿಗಳಿಗೆ ಆರ್ಥಿಕ ಲಾಭವಿದೆ. ಖರ್ಚಿನಲ್ಲಿ ಹಿಡಿತ ಸಾಧಿಸಿದಷ್ಟು ಉಳಿತಾಯ ಹೆಚ್ಚಲಿದೆ. ಕೃಷಿಕರು, ಎಲೆಕ್ಟ್ರಾನಿಕ್ಸ್​, ಜವಳಿ ಉದ್ಯಮಿಗಳಿಗೆ ಇಂದು ಲಾಭದ ದಿನವಾಗಿದೆ.

ಕುಂಭ: ಇಂದು ಕಚೇರಿ ಕೆಲಸದಲ್ಲಿ ಒತ್ತಡ ಕಡಿಮೆ ಇರಲಿದೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೀವು ಆರೋಗ್ಯದಿಂದ ಇರಲಿದ್ದೀರಿ. ಸಾಲದ ಸುಳಿಗೆ ಸಿಲುಕಲು ಹೋಗಬೇಡಿ. ಆರ್ಥಿಕ ದೃಷ್ಟಿಯಿಂದ ನಿಮಗಿದು ದುಬಾರಿ ದಿನವಾಗಿದೆ.

ಮೀನ : ಸಾಲದ ಸುಳಿಯಿಂದ ಬಚಾವಾಗಬೇಕು ಅಂದರೆ ಹಣ ಉಳಿತಾಯ ಮಾಡಲೇಬೇಕು. ಆರೋಗ್ಯ ಸುಧಾರಿಸಬೇಕು ಅಂದರೆ ಹೊರಗಿನ ತಿನಿಸುಗಳ ಸೇವನೆಯನ್ನು ಬಿಟ್ಟುಬಿಡಿ. ನಿಮ್ಮೆಲ್ಲ ಕೆಲಸಗಳಿಗೆ ಕುಟುಂಬಸ್ಥರ ಬೆಂಬಲ ಇರಲಿದೆ. ಸಂಗಾತಿ ಕೂಡ ನಿಮ್ಮ ಹೊಸ ಪ್ರಯತ್ನಕ್ಕೆ ಹೆಗಲು ನೀಡಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...