ಮಹತ್ವದ ನಡೆಯೊಂದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆ ಮುಸ್ಲಿಂ ಮಂಚ್ ಹಿಜಾಬ್ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಾಮುಖ್ಯತೆ ಮೆರೆದ ಮಂಡ್ಯದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ಳ ಬೆಂಬಲಕ್ಕೆ ನಿಂತಿದೆ.
ಹಿಜಬ್ ಅಥವಾ ಪರದೆಯು ಭಾರತೀಯ ಸಂಸ್ಕೃತಿಯದ್ದೇ ಒಂದು ಭಾಗವಾಗಿದೆ ಎಂದು ಹೇಳಿದೆ.
ಆರ್.ಎಸ್.ಎಸ್. ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಹಿಜಾಬ್ ಧರಿಸಲು ಬೀಬಿ ಮುಸ್ಕಾನ್ ನಡೆಯನ್ನು ಬೆಂಬಲಿಸಿದೆ ಹಾಗೂ ಕೇಸರಿ ಶಾಲು ಹಿಡಿದ ಯುವಕರ ನಡೆಯನ್ನು ಖಂಡಿಸಿದೆ.
ಮುಸ್ಲಿಂ ರಾಷ್ಟ್ರೀಯ ಮಂಚ್ನ ಅವಧ್ ಪ್ರಾಂತ್ ಸಂಚಾಲಕ ಅನಿಲ್ ಸಿಂಗ್ ಈ ವಿಚಾರವಾಗಿ ಮಾತನಾಡಿದ್ದು, ಈಕೆ ನಮ್ಮದೇ ಸಮುದಾಯದ ಸಹೋದರಿ ಹಾಗೂ ಮಗಳಾಗಿದ್ದಾಳೆ. ಈ ವಿವಾದದಲ್ಲಿ ನಾವು ಆಕೆಯ ಪರವಾಗಿದ್ದೇವೆ ಎಂದು ಹೇಳಿದ್ದಾರೆ.
ಹಿಂದೂ ಸಂಸ್ಕೃತಿಯು ಮಹಿಳೆಯರಿಗೆ ಗೌರವ ನೀಡುವಂತೆ ಹೇಳುತ್ತದೆ. ಹೀಗಿರುವಾಗ ಜೈ ಶ್ರೀರಾಮ್ ಎಂದು ಕೂಗುತ್ತಿದ್ದ ವಿದ್ಯಾರ್ಥಿಗಳು ಯುವತಿಯನ್ನು ಅಡ್ಡಗಟ್ಟಲು ಯತ್ನಿಸಿದ್ದು ನಿಜಕ್ಕೂ ತಪ್ಪು ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಹಿಜಾಬ್ ಧರಿಸಲು ಯುವತಿಗೆ ಸಾಂವಿಧಾನಿಕವಾದ ಹಕ್ಕಿದೆ. ಆಕೆ ಕ್ಯಾಂಪಸ್ನಲ್ಲಿ ಕಾಲೇಜಿನ ಡ್ರೆಸ್ಕೋಡ್ನ್ನು ಉಲ್ಲಂಘಿಸಿದ್ದಲ್ಲಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಕಾಲೇಜು ಆಡಳಿತ ಮಂಡಳಿಗೆ ಅಧಿಕಾರವಿದೆ. ಕೇಸರಿ ಶಾಲನ್ನು ಧರಿಸಿದ್ದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಕೂಗುತ್ತಾ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ್ದು ತಪ್ಪು ಎಂದು ಹೇಳಿದೆ.