ಕಳೆದ ವರ್ಷ ನಡೆದ ಲಖಿಂಪುರಿ ಖೇರಿ ಹಿಂಸಾಚಾರ ಪ್ರಕರಣದಲ್ಲಿ ನಾಲ್ವರು ಪ್ರತಿಭಟನಾ ನಿರತ ರೈತರು ಸೇರಿ ಎಂಟು ಜನರ ಸಾವನ್ನಪ್ಪಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು.
ಕಳೆದ ಹಲವು ದಿನಗಳಿಂದ ಆಶಿಶ್ ಮಿಶ್ರಾ ತಮ್ಮ ಜಾಮೀನಿಗಾಗಿ ಕಾಯುತ್ತಿದ್ದರು. ಹಲವು ಪ್ರಯತ್ನಗಳ ನಂತರವು ಆಶಿಶ್ ಮಿಶ್ರಾಗೆ ಬೇಲ್ ಭಾಗ್ಯ ದೊರೆತಿರಲಿಲ್ಲ. ಇಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ, ಆಶಿಶ್ ಮಿಶ್ರಾಗೆ ಜಾಮೀನು ಮಂಜೂರು ಮಾಡಿದೆ.