ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ, ಇಡೀ ಕರ್ನಾಟಕಕ್ಕೆ ಹಬ್ಬಿತು. ನಂತರ ಇಡೀ ದೇಶದಲ್ಲಿ ಚರ್ಚೆಯಾಗತೊಡಗಿತು. ಈಗ ಈ ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರೀ ಚರ್ಚೆಯಾಗುತ್ತಿದೆ.
ಈ ವೇಳೆ ಅರಬ್ ದೇಶಗಳಿಗೂ ಈ ಹಿಜಾಬ್ ವಿವಾದ ಕಾಲಿಟ್ಟಿದ್ದು, ಅಲ್ಲಿನವರು ಭಾರತೀಯರ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯರ ವಿರುದ್ಧ ಪೋಸ್ಟ್ ಹಾಕುತ್ತಿದ್ದಾರೆ.
ಭಾರತದಲ್ಲಿ ನಮ್ಮ ಅಕ್ಕ ತಂಗಿಯರಿಗೆ ಅನ್ಯಾಯವಾಗುತ್ತಿದ್ರು ಭಾರತ ಸರ್ಕಾರ ಯಾಕೆ ಸುಮ್ಮನಿದೆ. ಮುಸ್ಲಿಂ ಅಲ್ಲದ ಎರಡು ಕೋಟಿಗೂ ಅಧಿಕ ಭಾರತೀಯರು ನಮ್ಮಲ್ಲಿ ವಾಸವಾಗಿದ್ದಾರೆ. ಈ ಹಿಜಾಬ್ ವಿವಾದವನ್ನ ಇಲ್ಲಿಗೆ ನಿಲ್ಲಿಸದಿದ್ದರೆ 2 ಕೋಟಿ ಭಾರತೀಯರಿಗೆ ಬುದ್ದಿ ಕಲಿಸಬೇಕಾಗುತ್ತದೆ. ಇಲ್ಲಿ ನೆಲೆಗೊಂಡಿರುವ ಭಾರತೀಯ ಹೆಣ್ಣುಮಕ್ಕಳ ಮೇಲೆ ನಮ್ಮ ಕಾನೂನುಗಳನ್ನು ಹೇರಲೂಬಹುದು, ಹೊಸ ಕಾನೂನುಗಳನ್ನು ಸೃಷ್ಟಿಸಲೂಬಹುದು ಎಂದು ಟ್ವೀಟ್ ಮಾಡುತ್ತಿದ್ದಾರೆ.