alex Certify ಅಂಚೆ ಕಛೇರಿಯ ಈ ಪಿಪಿಎಫ್ ಸ್ಕೀಂನಲ್ಲಿ ಸಿಗಲಿದೆ ಶೇ.7.1 ರಷ್ಟು ಬಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಚೆ ಕಛೇರಿಯ ಈ ಪಿಪಿಎಫ್ ಸ್ಕೀಂನಲ್ಲಿ ಸಿಗಲಿದೆ ಶೇ.7.1 ರಷ್ಟು ಬಡ್ಡಿ

ಸುದೀರ್ಘಾವಧಿ ಹೂಡಿಕೆಯತ್ತ ಗಮನ ಇಟ್ಟಿರುವ ಮಂದಿಗೆ ಭಾರತೀಯ ಅಂಚೆಯ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಸ್ಕೀಂ ಒಂದು ಆಕರ್ಷಕ ಅವಕಾಶವಾಗಿವೆ. ವಾರ್ಷಿಕ 7.1% ಬಡ್ಡಿದರ ಕೊಡುವ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಭಾರತೀಯ ಅಂಚೆಯ ಜಾಲತಾಣ indiapost.gov.inಗೆ ಭೇಟಿ ನೀಡಬಹುದು.

BIG NEWS: ಮಕ್ಕಳ ವಿಚಾರದಲ್ಲಿ ಸಂವೇದನಾಶೀಲರಾಗಿರಬೇಕು; ಅನಗತ್ಯ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿ; ಸಿಎಂ ತಾಕೀತು

ಹೂಡಿಕೆಯ ಕನಿಷ್ಠ ಹಾಗೂ ಗರಿಷ್ಠ ಮಿತಿ

ಆಸಕ್ತ ಹೂಡಿಕೆದಾರರು ವಿತ್ತೀಯ ವರ್ಷವೊಂದರಲ್ಲಿ ಕನಿಷ್ಠ 500 ರೂ.ಗಳಿಂದ ಗರಿಷ್ಠ 1,50,000 ರೂ.ಗಳವರೆಗೂ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಭಾರತೀಯ ಪ್ರಜೆಯಾಗಿರುವ ಯಾವುದೇ ವಯಸ್ಕರು ಪಿಪಿಎಫ್‌ ಖಾತೆ ತೆರೆಯಬಹುದು. ಅಪ್ರಾಪ್ತ ವಯಸ್ಸಿನ ವ್ಯಕ್ತಿಯಾಗಿದ್ದಲ್ಲಿ, ಅಥವಾ ಮಾನಸಿಕವಾಗಿ ಸಬಲರಾಗಿರದಿದ್ದಲ್ಲಿ, ಅವರ ಪರವಾಗಿ ಪೋಷಕರಿಗೆ ಈ ಖಾತೆ ತೆರೆಯಲು ಅವಕಾಶವಿದೆ.

ಮೆಚ್ಯೂರಿಟಿ ಬಳಿಕ ಏನೆಲ್ಲಾ ಮಾಡಬಹುದು ?

ಆದಾಯ ತೆರಿಗೆ ಕಾಯಿದೆಯ 80ಸಿಸಿ ಸೆಕ್ಷನ್ ಪ್ರಕಾರ ಈ ಪಿಪಿಎಫ್ ಖಾತೆಯ ಮೇಲೆ ತೆರಿಗೆ ವಿನಾಯಿತಿಯ ಲಾಭವಿದೆ. ಈ ಖಾತೆಯ ಮೇಲೆ ಸಂಪಾದನೆಯಾಗುವ ಬಡ್ಡಿ ಮತ್ತು ಮೆಚ್ಯೂರಿಟಿ ಆದಾಯವೂ ತೆರಿಗೆ ಮುಕ್ತವಾಗಿದೆ.

ಖಾತೆಯ ಮೆಚ್ಯೂರಿಟಿ ಅವಧಿ ಬಳಿಕ ಹೂಡಿಕೆದಾರರಿಗೆ ಈ ಅವಕಾಶಗಳಿವೆ:

1. ಮೆಚ್ಯೂರಿಟಿ ಪೇಮೆಂಟ್‌ ಅನ್ನು ಸಂಬಂಧಿಸಿದ ಅಂಚೆ ಕಚೇರಿಯಲ್ಲಿ ಪಾಸ್‌ಬುಕ್ ಜೊತೆಗೆ ಖಾತೆ ಮುಚ್ಚಲು ಅರ್ಜಿ ಸಲ್ಲಿಸಿ ಪಡೆಯಬಹುದು.

2. ಮೆಚ್ಯೂರಿಟಿ ಮೌಲ್ಯವನ್ನು ಹೂಡಿಕೆದಾರರು ಮುಂದಿನ ಹೂಡಿಕೆ ಇಲ್ಲದೇ ತಮ್ಮ ಖಾತೆಯಲ್ಲಿ ಹಾಗೇ ಇಟ್ಟುಕೊಳ್ಳಬಹುದು. ಪಿಪಿಎಫ್ ಬಡ್ಡಿದರ ಅನ್ವಯವಾಗಲಿದ್ದು, ಪೇಮೆಂಟ್‌ ಅನ್ನು ಯಾವುದೇ ಸಮಯದಲ್ಲಿ ಅಥವಾ ವಿತ್ತೀಯ ವರ್ಷವೊಂದರಲ್ಲಿ ಒಮ್ಮೆ ಹಿಂಪಡೆಯಬಹುದು.

3. ಸಂಬಂಧ ಪಟ್ಟ ಅಂಚೆ ಕಚೇರಿಯಲ್ಲಿ ವಿಸ್ತರಣಾ ವಿನಂತಿ ಮುಂದಿಡುವ ಮೂಲಕ ತಮ್ಮ ಪಿಪಿಎಫ್ ಖಾತೆಯ ವಾಯಿದೆಯನ್ನು ಇನ್ನೂ ಐದು ವರ್ಷಗಳ ಬ್ಲಾಕ್‌ಗೆ ವಿಸ್ತರಿಸಬಹುದು (ಮೆಚ್ಯೂರಿಟಿಯಾಗಿ ಒಂದು ವರ್ಷದ ಒಳಗೆ).

ಹಿಂಪಡೆತ

ಹಿಂಪಡೆತದ ಪ್ರಕರಣಗಳಲ್ಲಿ, ಆಸಕ್ತರು ಈ ಕೆಳಕಂಡ ಅಂಶಗಳನ್ನು ತಿಳಿದಿರುವುದು ಉತ್ತಮ:

1. ಖಾತೆ ತೆರೆದ ವರ್ಷವನ್ನು ಹೊರತುಪಡಿಸಿ ಐದು ವರ್ಷಗಳ ನಂತರ ಹಣಕಾಸು ಅವಧಿಯಲ್ಲಿ ಚಂದಾದಾರರು ಒಮ್ಮೆ ಹಿಂಪಡೆಯಬಹುದು.

2. 4ನೇ ವರ್ಷದ ಕೊನೆಯಲ್ಲಿ ಅಥವಾ ಹಿಂದಿನ ವರ್ಷದ ಕೊನೆಯಲ್ಲಿ, ಖಾತೆಯ ಬ್ಯಾಲೆನ್ಸ್‌ನ ಶೇಕಡಾ 50ರಷ್ಟು ತೆಗೆದುಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...