ಚೆನ್ನೈ: ತಮಿಳುನಾಡು ರಾಜ್ಯದ ಬಿಜೆಪಿ ಪ್ರಧಾನ ಕಚೇರಿ ಮೇಲೆ ಅಪರಿಚಿತರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ.
ತಡರಾತ್ರಿ 1.30 ರ ಸುಮಾರಿಗೆ ಬಿಜೆಪಿ ಪ್ರಧಾನ ಕಚೇರಿ ಕಮಲಾಲಯಂ ಮೇಲೆ ದಾಳಿ ನಡೆಸಲಾಗಿದ್ದು ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಅಧಿಕೃತ ಕಚೇರಿಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಕಮಲಾಲಯಂ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ.
15 ವರ್ಷಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದ್ದು, ಅದರಲ್ಲಿ ಡಿಎಂಕೆ ಪಾತ್ರವಿದ್ದು, ಈಗಿನ ಘಟನೆಯನ್ನು ಖಂಡಿಸುತ್ತೇವೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇಂತಹ ಕೃತ್ಯಗಳಿಗೆ ಬಿಜೆಪಿ ಕಾರ್ಯಕರ್ತರು ಹೆದರುವುದಿಲ್ಲ ಎಂದು ತಮಿಳುನಾಡು ಬಿಜೆಪಿ ನಾಯಕ ಕರಾಟೆ ತ್ಯಾಗರಾಜನ್ ಹೇಳಿದ್ದಾರೆ.