alex Certify ಕಚ್ಚಾ ಬಾದಾಮ್‌ಗೆ ಸ್ಟೆಪ್ ಹಾಕಿದ ಶ್ರೀವಲ್ಲಿ ನೃತ್ಯದ ಕೊರಿಯೋಗ್ರಾಫರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಚ್ಚಾ ಬಾದಾಮ್‌ಗೆ ಸ್ಟೆಪ್ ಹಾಕಿದ ಶ್ರೀವಲ್ಲಿ ನೃತ್ಯದ ಕೊರಿಯೋಗ್ರಾಫರ್‌

ಅಂತರ್ಜಾಲದಲ್ಲಿ ಸದ್ಯಕ್ಕೆ ಭಾರೀ ಟ್ರೆಂಡ್ ಆಗುತ್ತಿರುವ ಎರಡು ಹಾಡುಗಳೆಂದರೆ ಪುಷ್ಪ ಚಿತ್ರದ ಶ್ರೀವಲ್ಲಿ ಮತ್ತು ಊ ಅಂಟಾವಾ.. ಹಾಗೂ ಬೆಂಗಾಲೀ ಹಾಡು ’ಕಚ್ಚಾ ಬಾದಾಮ್’.

ಅದರಲ್ಲೂ ಶ್ರೀವಲ್ಲಿಯ ಹುಕ್ ಸ್ಟೆಪ್‌ಗಳೆಂದರೆ ನೆಟ್ಟಿಗರಿಗೆ ತಾವೂ ಒಂದು ಕೈ ನೋಡೋಣ ಎನ್ನುವಂತೆ ಮಾಡಿಬಿಟ್ಟಿದೆ. ಈ ಹಾಡಿಗೆ ನೃತ್ಯ ಕಂಪೋಸ್ ಮಾಡಿರುವ ಕೊರಿಯೋಗ್ರಾಫರ್‌ ಗಣೇಶ್ ಆಚಾರ್ಯ ಇದೀಗ ಕಚ್ಚಾ ಬಾದಾಮ್ ಹಾಡಿಗೆ ತಮ್ಮದೊಂದು ಟಚ್ ಕೊಟ್ಟಿದ್ದಾರೆ.

ʼಸಾಕು ಪ್ರಾಣಿʼಯನ್ನು ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದೀರಾ…?

“ಚಾಲ್ತಿಯಲ್ಲಿರುವ ಟ್ರೆಂಡ್‌ಗಳೊಂದಿಗೆ ನನ್ನದೇ ಸ್ಟೈಲ್‌ನಲ್ಲಿ ಮ್ಯಾಚ್ ಮಾಡಲು ನೋಡುತ್ತಿದ್ದೇನೆ!!’ ಎಂದು ಕ್ಯಾಪ್ಷನ್ ಹಾಕಿರುವ ಗಣೇಶ್, ತಮ್ಮ ವಿದ್ಯಾರ್ಥಿಗಳೊಂದಿಗೆ ಕಚ್ಚಾ ಬಾದಾಮ್ ಹಾಡಿಗೆ ಕುಣಿಯುತ್ತಿರುವ ತಮ್ಮ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

ಈ ಕ್ಲಿಪ್‌ಗೆ ಅದಾಗಲೇ 6.25 ಲಕ್ಷ ಲೈಕ್‌ಗಳು ಬಂದಿದ್ದು, ಲೆಕ್ಕವಿಲ್ಲದಷ್ಟು ಪ್ರತಿಕ್ರಿಯೆಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...