alex Certify ದಂಡ ತಪ್ಪಿಸಿಕೊಂಡ ಮಾಲೀಕರಿಗೆ ಬಿಗ್‌ ಶಾಕ್; RTO ಕಚೇರಿಗಳ ಮುಂದೆ ಬೀಡುಬಿಟ್ಟ ಸಂಚಾರಿ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಡ ತಪ್ಪಿಸಿಕೊಂಡ ಮಾಲೀಕರಿಗೆ ಬಿಗ್‌ ಶಾಕ್; RTO ಕಚೇರಿಗಳ ಮುಂದೆ ಬೀಡುಬಿಟ್ಟ ಸಂಚಾರಿ ಪೊಲೀಸರು

ಬೆಂಗಳೂರು ಸಂಚಾರಿ ಪೊಲೀಸ್‌ನ ಪೂರ್ವ ವಿಭಾಗವು ಕೇವಲ ಎರಡೇ ದಿನಗಳ ಒಳಗೆ ನಾಲ್ಕು ಆರ್‌.ಟಿ.ಓ. ಕಚೇರಿಗಳ ಬಳಿ ಹೊಸದಾಗಿ ನೋಂದಾಯಿಸಿದ 60 ಪ್ರಕರಣಗಳಿಂದ ದಂಡದ ರೂಪದಲ್ಲಿ 24,000 ರೂ.ಗಳನ್ನು ಸಂಗ್ರಹಿಸಿದೆ.

ಪ್ರತಿ ಆರ್‌.ಟಿ.ಓ. ಕಚೇರಿ ಬಳಿಯೂ ಸಹಾಯಕ ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಯ ಅಧಿಕಾರಿಗಳನ್ನು ನಿಯೋಜಿಸಿರುವ ಬೆಂಗಳೂರು ಸಂಚಾರಿ ಪೊಲೀಸ್, ದಂಡ ತಪ್ಪಿಸಿಕೊಂಡ ಸವಾರರಿಂದ ದಂಡ ಪೀಕಿಸುತ್ತಿದೆ. ಭಟ್ಟರಹಳ್ಳಿ (ಕೆಎ-53), ಕಸ್ತೂರಿ ನಗರ (ಕೆಎ-03), ಎಲೆಕ್ಟ್ರಾನಿಕ್ಸ್ ಸಿಟಿ (ಕೆಎ-51) ಮತ್ತು ಎಚ್‌ಎಸ್‌ಆರ್‌ ಲೇಔಟ್‌ (ಕೆಎ-01) ಆರ್‌ಟಿಓ ಕಚೇರಿಗಳಲ್ಲಿ ಹೀಗೆ ಮಾಡಲಾಗಿದೆ.

ಹೊಸ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್: RTO ಕಚೇರಿಗೆ ಹೋಗಬೇಕಿಲ್ಲ, ಆನ್ ಲೈನ್ ಮೂಲಕ ನೋಂದಣಿ

“ತಮ್ಮ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ಹಾಗೂ ಇತರೆ ದಾಖಲೆಗಳನ್ನು ಪಡೆದುಕೊಳ್ಳಲು ವಾಹನಗಳ ಮಾಲೀಕರು ಆರ್‌.ಟಿ.ಓ. ಕಚೇರಿಗಳತ್ತ ಬಂದ ವೇಳೆ ನಮ್ಮ ಅಧಿಕಾರಿಗಳು ಅವರ ನೋಂದಣಿ ಸಂಖ್ಯೆಗಳ ವಿರುದ್ಧ ಯಾವುದಾದರೂ ದಂಡಗಳ ವಸೂಲು ಮಾಡುವುದು ಬಾಕಿ ಇದೆಯಾ ನೋಡುತ್ತಾರೆ. ಹಾಗೆ ಇರುವುದು ಕಂಡು ಬಂದಲ್ಲಿ, ಮಾಲೀಕರಿಗೆ ತಮ್ಮ ದಂಡ ಕಟ್ಟುವಂತೆ ಅಧಿಕಾರಿಗಳು ಮನವೊಲಿಸುತ್ತಾರೆ,” ಎನ್ನುತ್ತಾರೆ ಕೆ ಎಂ ಶಾಂತರಾಜು, ಡಿಸಿಪಿ (ಸಂಚಾರ, ಪೂರ್ವ).

ಸಾರಿಗೆ ಇಲಾಖೆಯೊಂದಿಗೆ ಸಹಯೋಗದಲ್ಲಿ ಹೀಗೆ ಆರ್‌ಟಿಓ ಕಚೇರಿಗಳ ಮುಂದೆ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದೇ ಕೆಲಸ ಮಾಡಲು ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರೂ ಸಹ ಸಜ್ಜಾಗುತ್ತಿದ್ದು, ದಂಡಗಳ ವಸೂಲಾತಿಗೆ ಸನ್ನದ್ಧವಾಗುತ್ತಿದ್ದಾರೆ ಎನ್ನುತ್ತಾರೆ ಕುಲ್ದೀಪ್ ಕುಮಾರ್‌ ಜೈನ್, ಡಿಸಿಪಿ (ಸಂಚಾರ, ಪಶ್ಚಿಮ).

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...