alex Certify ‘ಓಮಿಕ್ರಾನ್’ ಬಳಿಕ ಮತ್ತಷ್ಟು ರೂಪಾಂತರಿಗಳು ಬರಬಹುದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಓಮಿಕ್ರಾನ್’ ಬಳಿಕ ಮತ್ತಷ್ಟು ರೂಪಾಂತರಿಗಳು ಬರಬಹುದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಮೊದಲೇ ಕೋವಿಡ್‌ನ ರೂಪಾಂತರಿಗಳಿಂದ ರೋಸಿ ಹೋಗಿರುವ ಜನರಿಗೆ, ಓಮಿಕ್ರಾನ್‌ ಬಳಿಕವೂ ಸೋಂಕಿನ ಬೇರೆ ರೂಪಾಂತರಿಗಳು ಬಂದು ಕಾಟ ಕೊಡುವ ಸಾಧ್ಯತೆ ಇಲ್ಲದೇ ಏನಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಲ್ಲಿ ಮಂಗಳವಾರ ಲೈವ್ ಸ್ಟ್ರೀಮ್ ಮಾಡಲಾದ ಪ್ರಶ್ನೋತ್ತರ ಅವಧಿಯಲ್ಲಿ, ಸಂಸ್ಥೆಯ ಕೋವಿಡ್-19 ತಾಂತ್ರಿಕ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಖೋವ್ ಮಾತನಾಡಿ, ಜಾಗತಿಕ ಆರೋಗ್ಯ ಸಂಸ್ಥೆ ಒಮಿಕ್ರಾನ್‌ನ ನಾಲ್ಕು ವಿಭಿನ್ನ ಆವೃತ್ತಿಗಳ ಮೇಲೆ ನಿಗಾ ಇಟ್ಟಿದೆ ಎಂದು ತಿಳಿಸಿದ್ದಾರೆ.

“ನಮಗೆ ಈ ವೈರಸ್ ಬಗ್ಗೆ ಸಾಕಷ್ಟು ತಿಳಿದಿದೆ, ಆದರೆ ಎಲ್ಲವೂ ತಿಳಿದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ರೂಪಾಂತರಗಳು ವೈಲ್ಡ್ ಕಾರ್ಡ್ ಆಗಿರುತ್ತವೆ. ಆದ್ದರಿಂದ ನಾವು ಈ ವೈರಸ್ ಅನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡುತ್ತಿದ್ದಂತೆಯೇ ಅದು ರೂಪಾಂತರಗೊಳ್ಳುತ್ತದೆ. ಆದರೆ ಈ ವೈರಸ್ ಚಲಿಸಲು ಸಾಕಷ್ಟು ಅವಕಾಶ ಹೊಂದಿದೆ,” ಕೆಖೋವ್‌ ತಿಳಿಸಿದ್ದಾರೆ.

“ಓಮಿಕ್ರಾನ್ ಕೋವಿಡ್‌ನ ಇತ್ತೀಚಿನ ರೂಪಾಂತರವಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ ಕಾಳಜಿ ವ್ಯಕ್ತಪಡಿಸುವ ಕೊನೆಯ ರೂಪಾಂತರವಾಗಿರುವುದಿಲ್ಲ. ಮುಂದಿನ ರೂಪಾಂತರಿ ಬರುವವರೆಗೆ ಸ್ವಲ್ಪ ಸಮಯ ಸಿಗಲಿದೆ ಎಂಬ ಭರವಸೆ ನಮ್ಮದು. ಆದರೆ ಈ ಮಟ್ಟದೊಂದಿಗೆ ಹರಡುವಿಕೆಯ ತೀವ್ರತೆ ನೋಡಿದರೆ, ಇತರ ರೂಪಾಂತರಗಳನ್ನು ಕಾಣುವ ಸಾಧ್ಯತೆ ನಿಜವಾಗಿಯೂ ಹೆಚ್ಚು” ಎಂದ ಕೆರ್ಖೋವ್‌, “ಆದ್ದರಿಂದ ನಾವು ಮತ್ತೊಮ್ಮೆ ಲಸಿಕಾಕರಣದ ವ್ಯಾಪ್ತಿಯನ್ನು ಹೆಚ್ಚಿಸಬೇಕು ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು,” ಎನ್ನುತ್ತಾರೆ.

ನವೆಂಬರ್ 26, 2021 ರಂದು ಬಿ.1.1.529 ಅನ್ನು ಗಮನವಿಡಬೇಕಾದ ರೂಪಾಂತರವಾಗಿ ಹೆಸರಿಸಿದಾಗಿನಿಂದ, ಅದರ ಹಲವಾರು ವಂಶಾವಳಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಪಾಂಗೊ ವಂಶಾವಳಿಗಳಾದ ಬಿಎ.1, ಬಿಎ.1.1, ಬಿಎ.2 ಮತ್ತು ಬಿಎ.3 ಸೇರಿವೆ, ಇವೆಲ್ಲವನ್ನೂ ಓಮಿಕ್ರಾನ್‌ನ ಕುಟುಂಬದಡಿ ವಿಶ್ವ ಆರೋಗ್ಯ ಸಂಸ್ಥೆ ಕಣ್ಣಿಟ್ಟಿದೆ.

“ಬಿಎ.2ಗಿಂತಲೂ ಬಿಎ.1 ಹೆಚ್ಚು ಹರಡುತ್ತದೆ ಆದ್ದರಿಂದ ನಾವು ಪ್ರಪಂಚದಾದ್ಯಂತ ಬಿಎ.2 ಅನ್ನು ಪತ್ತೆಹಚ್ಚುವಲ್ಲಿ ಮಗ್ನರಾಗಿದ್ದೇವೆ” ಎಂದು ವ್ಯಾನ್ ಕೆರ್ಖೋವ್ ಹೇಳಿದ್ದಾರೆ.

ಮಂಗಳವಾರ ಬಿಡುಗಡೆಯಾದ ವಿಶ್ವ ಆರೋಗ್ಯ ಸಂಸ್ಥೆಯ ಸಾಪ್ತಾಹಿಕ ಸಾಂಕ್ರಾಮಿಕ ರೋಗಶಾಸ್ತ್ರದ ವರದಿಯ ಪ್ರಕಾರ, ಓಮಿಕ್ರಾನ್ ರೂಪಾಂತರವು ಹೆಚ್ಚು ಪ್ರಾಬಲ್ಯ ಹೊಂದಿದ್ದು – ಕೋವಿಡ್‌ ಸೋಂಕಿನ ಸದರಿ ಎಲ್ಲಾ ಪ್ರಕರಣಗಳಲ್ಲಿ ಸುಮಾರು 97 ಪ್ರತಿಶತ ಪಾಲು ಹೊಂದಿದೆ.

“ಓಮಿಕ್ರಾನ್ ರೂಪಾಂತರದ ಹರಡುವಿಕೆಯು ಜಾಗತಿಕವಾಗಿ ಹೆಚ್ಚಾಗಿದೆ. ಈಗ ಬಹುತೇಕ ಎಲ್ಲಾ ದೇಶಗಳಲ್ಲಿ ಈ ರೂಪಾಂತರಿ ಪತ್ತೆಯಾಗಿದೆ. ಆದಾಗ್ಯೂ, ಓಮಿಕ್ರಾನ್ ರೂಪಾಂತರದ ಕಾರಣದಿಂದಾಗಿ ಜನವರಿ 2022ರ ಆರಂಭದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಆರಂಭಿಕ ಏರಿಕೆಯನ್ನು ವರದಿ ಮಾಡಿದ ಹಲವು ದೇಶಗಳು ಈಗ ಒಟ್ಟು ಸಂಖ್ಯೆಯಲ್ಲಿ ಇಳಿಕೆಯನ್ನು ವರದಿ ಮಾಡುತ್ತಾ ಬಂದಿವೆ,” ಎಂದು ಅದು ಹೇಳಿದೆ.

ಜಾಗತಿಕವಾಗಿ, ಜನವರಿ 31ರಿಂದ ಫೆಬ್ರವರಿ 6ರ ವಾರದಲ್ಲಿ, ಅದರ ಹಿಂದಿನ ವಾರದಲ್ಲಿ ವರದಿಯಾದ ಸಂಖ್ಯೆಗೆ ಹೋಲಿಸಿದರೆ ಕೋವಿಡ್-19ನ ಪ್ರಕರಣಗಳ ಸಂಖ್ಯೆಯು 17 ಪ್ರತಿಶತದಷ್ಟು ಕಡಿಮೆಯಾಗಿದೆ, ಆದರೆ ಸೋಂಕಿನಿಂದ ಸಾವುಗಳ ಸಂಖ್ಯೆಗಳಲ್ಲಿ ಶೇಕಡಾ 7ರಷ್ಟು ಹೆಚ್ಚಾಗಿದೆ.

ಫೆಬ್ರವರಿ 6ರ ವೇಳೆಗೆ, ಜಾಗತಿಕವಾಗಿ ಕೋವಿಡ್‌ನ 392 ಮಿಲಿಯನ್ ಪ್ರಕರಣಗಳು ಮತ್ತು 5.7 ಮಿಲಿಯನ್ ಸಾವುಗಳು ವರದಿಯಾಗಿವೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...