alex Certify ಆನ್ಲೈನ್ ಸಂದರ್ಶನದಲ್ಲಿ ಯುವತಿಯೊಬ್ಬಳು ಮಾಡಿದ್ದಾದ್ರೂ ಏನು..? ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಸಂದರ್ಶನದಲ್ಲಿ ಯುವತಿಯೊಬ್ಬಳು ಮಾಡಿದ್ದಾದ್ರೂ ಏನು..? ವಿಡಿಯೋ ವೈರಲ್

ಉದ್ಯೋಗದ ಸಂದರ್ಶನಕ್ಕೆ ತೆರಳುವ ಮುಂಚೆ ಎಲ್ಲರೂ ಸಾಕಷ್ಟು ತಯಾರಿ ನಡೆಸುತ್ತಾರೆ. ಕಠಿಣ ಅಭ್ಯಾಸದ ನಂತರವೂ ಕೆಲವರು ಹೀನಾಯ ಸಂದರ್ಶನ ಎದುರಿಸಿರಬಹುದು. ಕೋವಿಡ್ ಬಂದ ನಂತರ ಎಲ್ಲ ಆನ್ಲೈನ್ ಮಯವಾಗಿದ್ದು, ಇಂಟರ್ನೆಟ್ ನಲ್ಲೇ ಸಂದರ್ಶನ ನಡೆಸಲಾಗುತ್ತದೆ. ಇಂಥ ಸಂದರ್ಭದಲ್ಲಿ ಸಂದರ್ಶನಕಾರರಿಗೆ ಅಪಹಾಸ್ಯ ಮಾಡುವ ಮುಜುಗರದ ತುಣುಕನ್ನು ನೀವು ಎಂದಾದರೂ ಕಳುಹಿಸಿದ್ದೀರಾ..? ಇದೀಗ ಇಂಥದ್ದೇ ವಿಡಿಯೋವೊಂದು ಭಾರಿ ವೈರಲ್ ಆಗಿದೆ.

ಸ್ಕೈವೆಸ್ಟ್ ಏರ್‌ಲೈನ್ಸ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಉದ್ಯೋಗವನ್ನು ಪಡೆಯಲು ಪ್ರಯತ್ನಿಸುತ್ತಿದ್ದ ಚೈಲೀನ್ ಮಾರ್ಟಿನೆಜ್‌ಗೆ ಎಂಬುವವರಿಗೆ ಇದೇ ರೀತಿ ಆಗಿದೆ. ಒಂದು ಪ್ರಶ್ನೆಗೆ ಉತ್ತರಿಸುವ ಧ್ವನಿಮುದ್ರಣವನ್ನು ಕಳುಹಿಸಲು ಚೈಲೀನ್ ಅವರನ್ನು ಕೇಳಲಾಯಿತು. ಪ್ರಶ್ನೆಗೆ ಉತ್ತರಿಸುವ ಸಲುವಾಗಿ ಆಕೆ ತನ್ನ ಮೊಬೈಲ್ ಮೂಲಕ ಸ್ನೇಹಿತನಿಗೆ ಕರೆ ಮಾಡಿ ಕೇಳಿದ್ದಾಳೆ.

BIG NEWS: ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ಸಿದ್ಧತೆ

ಈ ವೇಳೆ ಕಂಪ್ಯೂಟರ್ ಮುಂದೆ ಕುಳಿತಿದ್ದ ಅವಳಿಗೆ ವಿಡಿಯೋ ರೆಕಾರ್ಡ್ ಆಗುತ್ತಿದೆ ಎಂಬುದು ತಿಳಿದಿರಲಿಲ್ಲ. ಸಂದರ್ಶನಕಾರರಿಗೆ ತನ್ನ ಉತ್ತರವನ್ನು ಹೇಳುತ್ತಿದ್ದಂತೆ ಏಕಾಏಕಿ ಶಾಕ್ ಗೆ ಒಳಗಾಗಿದ್ದಾಳೆ. ಬಳಿಕ ಕ್ಷಮೆಯಾಚಿಸಿದ ಆಕೆ, ಇದು ರೆಕಾರ್ಡಿಂಗ್ ಎಂದು ತಿಳಿದಿರಲಿಲ್ಲ. ತಾನು ಅಭ್ಯಾಸ ಮಾಡುತ್ತಿದ್ದೆ ಎಂದು ಹೇಳಿದ್ದಾಳೆ.

ಮುಂದಿನ ವಿಡಿಯೊದಲ್ಲಿ, ಚೈಲೀನ್ ತನ್ನ ಬಾಸ್ ಈಗಾಗಲೇ ವಿಡಿಯೊವನ್ನು ನೋಡಿದ್ದಾರೆ. ಹೀಗಾಗಿ ತಾನು ಬೇರೆ ಕೆಲಸ ಹುಡುಕುತ್ತಿರುವುದಾಗಿ ತಿಳಿಸಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...