alex Certify ಕೋವಿಡ್​ 19 ಸೋಂಕಿತರಲ್ಲಿ ಹೆಚ್ಚಾಗ್ತಿದೆ ಹೃದ್ರೋಗ ಸಮಸ್ಯೆ: ಅಧ್ಯಯನದಲ್ಲಿ ಶಾಕಿಂಗ್ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ 19 ಸೋಂಕಿತರಲ್ಲಿ ಹೆಚ್ಚಾಗ್ತಿದೆ ಹೃದ್ರೋಗ ಸಮಸ್ಯೆ: ಅಧ್ಯಯನದಲ್ಲಿ ಶಾಕಿಂಗ್ ಸಂಗತಿ ಬಹಿರಂಗ

ನೇಚರ್​ನಲ್ಲಿ ಇತ್ತೀಚಿಗೆ ಪ್ರಕಟವಾದ ಅಧ್ಯಯನದಲ್ಲಿ ತೀವ್ರವಾದ ಕೋವಿಡ್​ ಸೋಂಕಿಗೆ ಒಳಗಾದ 1000 ಮಂದಿಯಲ್ಲಿ 300ಕ್ಕೂ ಹೆಚ್ಚು ಜನರು ಹೃದಯ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಿವಿಧ ಸಂಶೋಧನೆಗಳನ್ನು ಅಧ್ಯಯನ ಮಾಡಿದ ಹಿರಿಯ ಹೃದ್ರೋಗ ತಜ್ಞರು ಕೊರೊನಾ ಸೋಂಕಿಗೆ ಒಳಗಾದ ಬಹುತೇಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಿದೆ. ಮೂರನೇ ಅಲೆಯ ಬಳಿಕವೂ ಈ ಹೃದ್ರೋಗ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಆದರೆ ಕಳೆದ ವರ್ಷಗಳಿಗೆಲ್ಲ ಹೋಲಿಕೆ ಮಾಡಿದರೆ ಈ ವರ್ಷದಲ್ಲಿ ಈ ಸಮಸ್ಯೆಯು ಗಮನಾರ್ಹವಾಗಿ ಕಡಿಮೆಯಾಗಿದೆ.

ಈ ತಂಡದಲ್ಲಿದ್ದ 55 ವರ್ಷದ ಹೃದ್ರೋಗ ತಜ್ಞ ಕೂಡ ಕೋವಿಡ್​ ಸೋಂಕಿಗೆ ಒಳಗಾದ ವಾರಗಳ ಬಳಿಕ ಹೃದಯ ರೋಗಿಯಾಗಿದ್ದಾರೆ. ಮಣಿಪಾಲ ಆಸ್ಪತ್ರೆಯ ಡಾ. ಕೆ.ಪಿ. ಶ್ರೀಹರಿ ದಾಸ್​​ ಜನವರಿ 14ರಂದು ಸೌಮ್ಯ ಲಕ್ಷಣಗಳ ಸಮೇತ ಕೋವಿಡ್​ ಸೋಂಕಿಗೆ ಒಳಗಾಗಿದ್ದರು. ಕೋವಿಡ್​ ಸೋಂಕಿನಿಂದ ಶೀಘ್ರವೇ ಚೇತರಿಸಿಕೊಂಡ ಅವರು ಬಳಿಕ ಹೃದಯದ ಸಮಸ್ಯೆಯಿಂದ ಬಳಲಿದ್ದಾರೆ ಎನ್ನಲಾಗಿದೆ.

ನನ್ನ ಹೃದಯ ಬಡಿತವು ತುಂಬಾ ಹೆಚ್ಚಾಗಿತ್ತು. ಕೋವಿಡ್​ ಸೋಂಕಿನ ಬಳಿಕ ನನಗೆ ಹೃದಯ ಸಮಸ್ಯೆ ಇರುವುದು ಪತ್ತೆಯಾಯ್ತು. ಕೊರೊನಾ ಸೋಂಕು ನನ್ನ ಶ್ವಾಸಕೋಶದ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರಿಲ್ಲ ಎಂದು ದಾಸ್​ ಹೇಳಿದ್ದಾರೆ.

ಅಪೊಲೋ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಅಭಿಜಿತ್​ ವಿಲಾಸ್​ ಕುಲಕರ್ಣಿ ನೀಡುವ ಮಾಹಿತಿಯ ಪ್ರಕಾರ, ಕೋವಿಡ್​ ಸೋಂಕಿನ ಬಳಿಕ ಸಾಮಾನ್ಯವಾಗಿ ಮಧ್ಯಮ ಹಾಗೂ ಗಂಭೀರ ಪ್ರಮಾಣದ ಲಕ್ಷಣಗಳನ್ನು ಹೊಂದಿದ್ದವರಲ್ಲಿ ಹೈಪೋಕ್ಸೆಮಿಯಾ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ವೈರಲ್ ಸೋಂಕಿನಿಂದ ಶ್ವಾಸಕೋಶದ ಅಂಗಾಂಶದ ಉರಿಯೂತ ಹೈಪೋಕ್ಸೆಮಿಯಾ ಉಂಟಾಗುತ್ತದೆ.
ಆದರೆ ಕೊರೊನಾ ಮೂರನೇ ಅಲೆಯಲ್ಲಿ ಆಮ್ಲಜನಕ ಸ್ಯಾಚುರೇಷನ್​ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗಿನ ಕುಸಿತ ಕಂಡು ಬಂದಿದೆ. ಮೂರನೇ ಅಲೆಯಲ್ಲಿ ಐಸಿಯುವಿಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಡಾ. ಕುಲಕರ್ಣಿ ಹೇಳಿದ್ದಾರೆ.

ಆದರೆ ಕೋವಿಡ್​ 19 ಸೋಂಕು ಹೊಸ ಹೃದಯದ ಸಮಸ್ಯೆಯ ಪ್ರಕರಣಗಳಿಗೆ ಕಾರಣವಾಗುತ್ತಿದೆಯೇ ಅಥವಾ ಈಗಾಗಲೇ ಹೃದ್ರೋಗ ಸಮಸ್ಯೆ ಹೊಂದಿರುವವರಲ್ಲಿ ಹೆಚ್ಚಿನ ಸಮಸ್ಯೆ ತಂದೊಡ್ಡುತ್ತಿದೆಯೇ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...