alex Certify ಮಹಿಳೆಯರ ಶರ್ಟ್​ನಲ್ಲಿ ಗುಂಡಿ ಎಡ ಹಾಗೂ ಪುರುಷರ ಶರ್ಟ್​ನಲ್ಲಿ ಬಲಭಾಗದಲ್ಲಿರಲು ಕಾರಣವೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಶರ್ಟ್​ನಲ್ಲಿ ಗುಂಡಿ ಎಡ ಹಾಗೂ ಪುರುಷರ ಶರ್ಟ್​ನಲ್ಲಿ ಬಲಭಾಗದಲ್ಲಿರಲು ಕಾರಣವೇನು ಗೊತ್ತಾ..?

ನೀವು ಮಹಿಳೆಯರ ಶರ್ಟ್​ಗಳನ್ನು ನೋಡಿದರೆ ಅದರಲ್ಲಿ ಗುಂಡಿಗಳು ಸಾಮಾನ್ಯವಾಗಿ ಎಡಭಾಗದಲ್ಲಿ ಇರುತ್ತದೆ. ಆದರೆ ಪುರುಷರ ಶರ್ಟ್​ನಲ್ಲಿ ಬಲಭಾಗದಲ್ಲಿ ಗುಂಡಿ ಇರುವುದನ್ನು ನೀವು ಗಮನಿಸಿರುತ್ತೀರಿ. ಆದರೆ ಯಾಕೆ ಹೀಗೆ ಪುರುಷರು ಬಲಭಾಗದಲ್ಲಿ ಹಾಗೂ ಮಹಿಳೆಯರ ಶರ್ಟ್​ ಈ ರೀತಿ ವಿಭಿನ್ನ ಭಾಗದಲ್ಲಿ ಇರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ..?ಹಾಗಾದರೆ ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ :

ಅಂದಹಾಗೆ ಈ ಪ್ರಶ್ನೆಗೆ ಸೂಕ್ತವಾದ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಇದರ ಸುತ್ತ ಸಾಕಷ್ಟು ಸಿದ್ಧಾಂತಗಳು ಹರಿದಾಡುತ್ತಿರುತ್ತದೆ.
ಆಯುಧಗಳನ್ನು ತಲುಪಲು ಪುರುಷರಿಗೆ ಸುಲಭವಾಗುತ್ತದೆ : ಅನೇಕ ಇತಿಹಾಸಕಾರರು ಹೇಳುವಂತೆ ಪುರುಷರಿಗೆ ಆಯುಧಗಳನ್ನು ಹಿಡಿದುಕೊಳ್ಳಲು ಸುಲಭವಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಬಲಭಾಗದಲ್ಲಿ ಗುಂಡಿಗಳನ್ನು ಇಟ್ಟರೆ ಪುರುಷರಿಗೆ ಶರ್ಟ್​ನ್ನು ಹಾಕಿಕೊಳ್ಳಲು ಸುಲಭವಾಗುತ್ತದೆ.

ಮಹಿಳೆಯರು ವಸ್ತ್ರ ಧರಿಸಲು ದಾಸಿಯರ ಸಹಾಯ ಪಡೆಯುತ್ತಿದ್ದರು : ಮೇಲ್ವರ್ಗದ ಮಹಿಳೆಯರು ಸಾಮಾನ್ಯವಾಗಿ ತಮ್ಮ ಶರ್ಟ್​ನ್ನು ತಾವು ಧರಿಸುತ್ತಿರಲಿಲ್ಲ. ಶ್ರೀಮಂತ ಮಹಿಳೆಯರು ಶರ್ಟ್​ ಧರಿಸುವಾಗ ದಾಸಿಯರ ಸಹಾಯವನ್ನು ಪಡೆಯುತ್ತಿದ್ದರು. ಹೀಗಾಗಿ ದಾಸಿಯರಿಗೆ ಶರ್ಟ್​ ಹಾಕುವುದು ಸಹಾಯವಾಗಲಿ ಎಂದು ಎಡಬದಿಯಲ್ಲಿ ಶರ್ಟ್​ ಗುಂಡಿಗಳನ್ನು ಇಡಲಾಗುತ್ತದೆ.

ಸ್ತನ್ಯಪಾನಕ್ಕೆ ಅನುಕೂಲಕರ : ಮಹಿಳೆಯರು ಎಡಗೈನಲ್ಲಿ ಶಿಶುಗಳನ್ನು ಹಿಡಿದಿರುತ್ತಾರೆ. ಹೀಗಾಗಿ ಅವರಿಗೆ ಸ್ತನ್ಯಪಾನ ಮಾಡಲು ಬಲಗೈ ಬಳಕೆ ಮಾಡುವುದರಿಂದ ಎಡ ಭಾಗದಲ್ಲಿ ಗುಂಡಿಯನ್ನು ಇಡಲಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...