ಭಾರತದ ಭೂಪ್ರದೇಶದಲ್ಲಿ ಶಂಕಿತ ಮರದ ಪೆಟ್ಟಿಗೆಗಳನ್ನು ಇರಿಸಿದ ಪಾಕಿಸ್ತಾನದ ಡ್ರೋನ್ಗಳು..! 09-02-2022 3:45PM IST / No Comments / Posted In: India, Featured News, Live News ಪಂಜಾಬ್ನಲ್ಲಿ ಭಾರತ – ಪಾಕ್ ಅಂತಾರಾಷ್ಟ್ರೀಯ ಗಡಿಯ ಸಮೀಪ ಎರಡು ಮರದ ಪೆಟ್ಟಿಗೆಗಳನ್ನು ಗಡಿ ಭದ್ರತಾ ಪಡೆ ವಶಪಡಿಸಿಕೊಂಡಿದೆ. ಮರದ ಪೆಟ್ಟಿಗೆಗಳಲ್ಲಿ ಸ್ಪೋಟಕಗಳು ಅಥವಾ ಮಾದಕವಸ್ತುಗಳು ಇರಬಹುದು ಎಂದು ಶಂಕಿಸಲಾಗಿದೆ. ಈ ಮರದ ಪೆಟ್ಟಿಗೆಗಳನ್ನು ಭಾರತದ ಭೂಪ್ರದೇಶದ ಒಳಗೆ ಡ್ರೋನ್ಗಳ ಸಹಾಯದಿಂದ ಇರಿಸಲಾಗಿದೆ. ಬಿಎಸ್ಎಫ್ನ ಪಂಜಗರಾಯ್ ಬಾರ್ಡರ್ ಔಟ್ಪೋಸ್ಟ್ ಬಳಿ ಮಾನವರಹಿತ ಫ್ಲೈಯಿಂಗ್ ವಾಹನಗಳ ಚಲನೆಯನ್ನು ಯೋಧರು ಗುರುತಿಸಿದ್ದಾರೆ ಎಂದು ಬಿಎಸ್ಎಫ್ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಪ್ರಭಾಕರ ಜೋಷಿ ಹೇಳಿದರು. ಮಧ್ಯಾಹ್ನ 12:50ರ ಸುಮಾರಿಗೆ ಎರಡು ಬಾರಿ ಡ್ರೋನ್ ಚಲನೆಯನ್ನು ನೋಡಲಾಯಿತು. ಇದಾದ ನಂತರ ಪಾಕಿಸ್ತಾನದ ಕಡೆಗೆ ಹಿಂತಿರುಗಿದ ಡ್ರೋನ್ಗಳ ಮೇಲೆ ಬಿಎಸ್ಎಫ್ ಯೋಧರು ಗುಂಡು ಹಾರಿಸಿದರು ಎಂದು ಜೋಷಿ ಮಾಹಿತಿ ನೀಡಿದರು. ಬಳಿಕ ಸಾಕಷ್ಟು ಹುಡುಕಾಟದ ನಂತರ ಬಿಎಸ್ಎಫ್ ಯೋಧರು ಎರಡು ಮರದ ಪೆಟ್ಟಿಗೆಗಳನ್ನು ಪತ್ತೆ ಮಾಡಿದ್ದಾರೆ. Punjab | Today at about 12:50 am, troops in Panjgrain heard buzzing of suspected flying object coming from Pakistan side to India. Troops fired upon the drone. During search in village Ghaggar & Singhoke, 2 packets of yellow colour with suspected contraband recovered so far: BSF pic.twitter.com/sir6M1oJzZ — ANI (@ANI) February 9, 2022