ಒಂದು ಕಾಲೇಜಿನಿಂದ ಶುರುವಾದ ಹಿಜಾಬ್ ಗಲಾಟೆ, ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವಷ್ಟು ದೊಡ್ಡದಾಗಿ ಬೆಳೆದಿದೆ. ಧರ್ಮ ಹೋರಾಟ ಈಗ ರಾಜಕೀಯ ಹೋರಾಟವಾಗಿ ಬದಲಾಗಿದೆ. ಆಡಳಿತರೂಢ ಹಾಗೂ ಪ್ರತಿಪಕ್ಷದ ನಡುವಿನ ಗಲಾಟೆಗೆ ಕಾರಣವಾಗಿದೆ. ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.
ಇಂದು ಕಾಂಗ್ರೆಸ್ ನಾಯಕರನ್ನ ತರಾಟೆಗೆ ತೆಗೆದುಕೊಂಡಿರುವ ಸಚಿವ ಸುನಿಲ್ ಕುಮಾರ್, ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಸರ್ಕಾರ ತಮ್ಮ ಪರಿಮಿತಿಯಲ್ಲಿ ಉತ್ತಮ ನಿರ್ಧಾರ ಕೈಗೊಂಡಿದೆ. ಸಮವಸ್ತ್ರ ಆದೇಶ ಸಹ ಹೊರಡಿಸಿದೆ. ಈ ಆದೇಶವನ್ನು ಮಕ್ಕಳು ಪಾಲನೆ ಮಾಡಬೇಕು. ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ, ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ. ಕೋರ್ಟ್ ಯಾವುದೇ ತೀರ್ಪು ನೀಡಿದ್ರು ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಪ್ರತ್ಯೇಕವಾಗಿ ಇರಬೇಕು ಎನ್ನವರ ಜೊತೆ ಇದೆ ಅವ್ರಿಗೆ ಬೆಂಬಲ ನೀಡುತ್ತಿದೆ. ಕಾಲೇಜು ಮಕ್ಕಳಲ್ಲಿ ಸಮಾನತೆ ಇರಬೇಕು, ಸಮಾನತೆ ಇರುವುದಿಲ್ಲ ಅಂದ್ರೆ ಇವ್ರು ದೇಶಕ್ಕೆ ಮಾರಕವಾಗಿ ಬಿಡುತ್ತಾರೆ. ಅಂತವರ ಬೆನ್ನಿಗೆ ನಿಂತಿರುವ, ಕಾಂಗ್ರೆಸ್ ಏನಾದ್ರೂ ಅಧಿಕಾರಕ್ಕೆ ಬಂದ್ರೆ ಹಿಂದೂಗಳಿಗೆ ಹಿಜಾಬ್ ಹಾಕಿಸಿಬಿಡ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯದ ಜನರ ದಿಕ್ಕನ್ನೇ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ಗೆ ದೇಶ ವಿರೋಧಿಗಳ ಬೆಂಬಲವಿದೆ. ಸರ್ಕಾರಿ ಶಾಲೆಗಳ ಅಷ್ಟು ಇಷ್ಟು ಶುಲ್ಕ ಕಟ್ಟಲಿಕ್ಕೆ ಆಗದವರು ಕೋರ್ಟ್ಗೆ ಹೋಗ್ತಾರೆ ಅಂದ್ರೆ ಇದರ ಹಿಂದೆ ಏನೋ ಕೈವಾಡ ಇದೆ. PFI ಇನ್ನೊಂದು ಮುಖವಾಡ ಅಂದ್ರೆ ಅದು ಕಾಂಗ್ರೆಸ್ ಎಂದು ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.