alex Certify ವಿಡಿಯೋ: ಊಟದ ಸರತಿಯಲ್ಲೂ ಶ್ರೀವಲ್ಲಿ ಸ್ಟೆಪ್ ಹಾಕಿದ ಯುವಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಊಟದ ಸರತಿಯಲ್ಲೂ ಶ್ರೀವಲ್ಲಿ ಸ್ಟೆಪ್ ಹಾಕಿದ ಯುವಕರು

ಅಲ್ಲು ಅರ್ಜುನ್‌ನ ’ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿನ ಹುಕ್ ಸ್ಟೆಪ್ ಅದ್ಯಾವ ಮಟ್ಟಿಗೆ ಜನರಲ್ಲಿ ಕ್ರೇಜ಼್ ಸೃಷ್ಟಿಸಿದೆ ಎಂದು ಹೇಳುವುದೇ ಬೇಡ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆಯಲ್ಲೂ ಆಟಗಾರರು ಮೈದಾನದಲ್ಲಿ ಈ ಸ್ಟೆಪ್ ಹಾಕುವ ಮಟ್ಟಿಗೆ ಟ್ರೆಂಡ್ ಆಗಿಬಿಟ್ಟಿದೆ.

ಇನ್‌ಸ್ಟಾಗ್ರಾಂನಲ್ಲಿ ರಾಜ಼ಿ ಶೇಯ್ಖ್ ಹೆಸರಿನ ವ್ಯಕ್ತಿಯೊಬ್ಬರು ಶೇರ್‌ ಮಾಡಿರುವ ಈ ವಿಡಿಯೋದಲ್ಲಿ, ರಾಜ಼ಿ ಅವರು ಶ್ರೀವಲ್ಲಿ ಸ್ಟೆಪ್ ಅನ್ನು ಜ಼ೈದ್ ದರ್ಬಾರ್‌ ಮತ್ತು ನೂರಿನ್ ಶಾ ಜೊತೆಗೆ ಹಾಕುತ್ತಿರುವುದನ್ನು ನೋಡಬಹುದಾಗಿದೆ.

ಕೊರಿಯನ್ನರಂತೆ ಕಾಣಲು ಜನನಾಂಗ ವಿರೂಪ ಸರ್ಜರಿಗೆ ಮುಂದಾದ ಬ್ರಿಟನ್‌ ಯುವಕ…!

ಬಫೆ ಮುಂದೆ ತಟ್ಟೆಗಳನ್ನು ಕೈಯಲ್ಲಿ ಹಿಡಿದುಕೊಂಡೇ ಈ ಮೂವರು ಹೀಗೆ ಸ್ಟೆಪ್ ಹಾಕಿದ್ದಾರೆ. ಊಟಕ್ಕೆ ಸಾಲಿನಲ್ಲಿ ನಿಂತಾಗಲೇ ಹೀಗೆ ಶ್ರೀವಲ್ಲಿ ಸ್ಟೆಪ್ ಹಾಕಿಕೊಂಡು ಮುಂದೆ ಸಾಗಿದ್ದಾರೆ ಈ ಮಂದಿ.

ಆನ್ಲೈನ್‌ನಲ್ಲಿ ಶೇರ್‌ ಆಗುತ್ತಲೇ ಈ ವಿಡಿಯೋಗೆ 2.6 ದಶಲಕ್ಷ ವೀಕ್ಷಣೆಗಳು ಸಿಕ್ಕಿವೆ. ಈ ವಿಡಿಯೋ ನೋಡಿ ಎಂಜಾಯ್ ಮಾಡಿದ ನೆಟ್ಟಿಗರು ಕಾಮೆಂಟ್‌ ಸೆಕ್ಷನ್‌ನಲ್ಲಿ ಭಾರೀ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ.

https://youtu.be/beVUwbHmeRQ

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...