ನವದೆಹಲಿ: 2021 -22 ನೇ ಸಾಲಿನ EPFO ಖಾತೆಗಳ ಠೇವಣಿಗಳ ಮೇಲಿನ ಬಡ್ಡಿದರ ಮುಂದಿನ ತಿಂಗಳು ಅಂತಿಮವಾಗಲಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆ ಮಾರ್ಚ್ 4, 5 ರಂದು ಗುವಾಹಟಿಯಲ್ಲಿ ನಡೆಯಲಿದೆ. ಕಳೆದ ಸಾಲಿನಲ್ಲಿ ಶೇಕಡ 8.5 ರಷ್ಟು ಬಡ್ಡಿ ದರ ನೀಡಲಾಗಿತ್ತು.
EPFO ನ ಹಣಕಾಸು ಹೂಡಿಕೆ ಮತ್ತು ಲೆಕ್ಕಪರಿಶೋಧನೆ ಸಮಿತಿ ಇಂದು ನಡೆಯಲಿರುವ ಸಭೆಯಲ್ಲಿ EPFO ಗಳಿಕೆಯ ಬಗ್ಗೆ ಚರ್ಚೆ ನಡೆಸಲಿದೆ. ಪ್ರಸ್ತುತ ಇರುವ ಶೇಕಡ 8.5 ಬಡ್ಡಿದರ ಕಳೆದ 8 ವರ್ಷಗಳ ಅವಧಿಯಲ್ಲಿ ಕಡಿಮೆ ಮಟ್ಟದ ಬಡ್ಡಿ ದರವಾಗಿದೆ.
ಮುಂದಿನ ತಿಂಗಳು ನಡೆಯಲಿರುವ ಸಭೆಯಲ್ಲಿ ಪಿಎಫ್ ಬಡ್ಡಿ ದರವನ್ನು ಅಂತಿಮಗೊಳಿಸಲಾಗುವುದು. 2020 -21 ನೇ ಸಾಲಿನ ಬಡ್ಡಿದರವನ್ನು EPFO ಸದಸ್ಯರಿಗೆ ವಿತರಿಸಲಾಗುತ್ತಿದೆ ಎಂದು ಹೇಳಲಾಗಿದೆ.