ನವದೆಹಲಿ: ಹಳೆಯ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳ ಆಗಿ ಪರಿವರ್ತಿಸಲು ದೆಹಲಿ ಸರ್ಕಾರ ಅವಕಾಶ ಕಲ್ಪಿಸಿದೆ.
ಹಳೆಯ ಕಾರ್ ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಮಾರ್ಪಡಿಸಲು ಎಲೆಕ್ಟ್ರಿಕ್ ಕಿಟ್ ಗಳನ್ನು ಮಾರಾಟ ಮಾಡುವ 10 ಉತ್ಪಾದಕರನ್ನು ಗುರುತಿಸಿ ಮಾರ್ಗದರ್ಶಿ ಬಿಡುಗಡೆ ಮಾಡಲಾಗಿದೆ. ದೆಹಲಿ ಸಾರಿಗೆ ಇಲಾಖೆಯಿಂದ ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳ ಮಾರ್ಪಡಿಸಲು ಮತ್ತು ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.
ಎಲೆಕ್ಟ್ರಿಕ್ ವಾಹನಗಳಾಗಿ ಮಾರ್ಪಾಡುಗೊಂಡ ಹಳೆಯ ವಾಹನಗಳಿಗೆ ಪ್ರತಿವರ್ಷಕ್ಕೆ ವಾಹನದ ಫಿಟ್ನೆಸ್ ತಪಾಸಣೆಗೆ ಒಳಪಡಿಸಬೇಕಿದೆ ಎಂದು ಹೇಳಲಾಗಿದೆ.