ಭಾರೀ ವಂಚನೆಯ ಮತ್ತೊಂದು ಪ್ರಕರಣದಲ್ಲಿ, ವೈದ್ಯಕೀಯ ಸಿಬ್ಬಂದಿಯ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಂದ ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ತಮಿಳುನಾಡಿನ ಆವಾಡಿಯಲ್ಲಿ ಜರುಗಿದೆ.
ವೈದ್ಯನ ಸೋಗಿನಲ್ಲಿದ್ದ ಆಪಾದಿತ, ರೋಗಿಯನ್ನು ಡ್ರಿಪ್ ಹಾಕಿ ಮಲಗಿಸಿ ಆಕೆಯ ಬಳಿ ಇದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ರಿಹಾನ್ ತಿರುವೊಟ್ಟಿಯೂರಿನ ನಿವಾಸಿಯಾದ ಪ್ರಭು ಹೆಸರಿನ ಆಪಾದಿತನೊಬ್ಬನನ್ನು ತಮಿಳುನಾಡು ಪೊಲೀಸರು ಫೆಬ್ರವರಿ 7ರಂದು ಬಂಧಿಸಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಏ. 16 ರಿಂದ ವಾರ್ಷಿಕ ಪರೀಕ್ಷೆಗೆ ಅಂತಿಮ ವೇಳಾಪಟ್ಟಿ ಪ್ರಕಟ
ಇಲ್ಲಿನ ಮುತ್ತಾಪುದುಪೆಟ್‌ನ ಎಂಇಎಸ್ ರಸ್ತೆಯಲ್ಲಿ ಕ್ಲಿನಿಕ್ ಒಂದನ್ನು ತೆರೆಯಲು ಜಾಗ ಕೇಳಿಕೊಂಡು ಬಂದ ಪ್ರಭುನನ್ನು ನಂಬಿದ ಮನೆ ಯಜಮಾನಿ ಆತನಿಗೆ ಜಾಗ ಕೊಟ್ಟಿದ್ದಾರೆ. ತನ್ನ ಬಳಿ ಹಾಗೇ ಒಂದು ಮೆಡಿಕಲ್ ಚೆಕಪ್‌ಗಾಗಿ ಬಂದ ಪ್ರಿಯಾಗೆ (29) ಆಕೆ ದುರ್ಬಲರಾಗಿದ್ದು, ಡ್ರಿಪ್ಸ್ ತೆಗೆದುಕೊಳ್ಳಬೇಕೆಂದು ಹೇಳಿದ ಪ್ರಭು, ಆ ವೇಳೆ ಆಕೆ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ತೆಗೆದಿಡಲು ಸೂಚಿಸಿದ್ದಾನೆ.
ಡ್ರಿಪ್ಸ್ ಹಾಕಿ 30 ನಿಮಿಷಗಳ ಬಳಿಕ ಕಣ್ಣು ಬಿಟ್ಟು ನೋಡಿದ ಪ್ರಿಯಾಗೆ ಆ ಕೋಣೆಯಲ್ಲಿ ಯಾರೊಬ್ಬರೂ ಇಲ್ಲದ್ದು ಅರಿವಾಗಿ ತನ್ನ ಸರ ಕಳುವಾಗಿರುವುದು ಗೊತ್ತಾಗಿದೆ. ಅಷ್ಟೊತ್ತಿಗಾಗಲೇ ವೈದ್ಯ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದ. ಕೂಡಲೇ ಈ ವಿಚಾರವನ್ನು ಆ ಜಾಗದ ಯಜಮಾನಿ ವೇಣಿಗೆ ತಿಳಿಸಿದ ಪ್ರಿಯಾ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯನಿಮಿತ್ತರಾದ ಪೊಲೀಸರು ಸೋಮವಾರ ಪ್ರಭುನನ್ನು ಬಂಧಿಸಿದ್ದಾರೆ.