ಜಪಾನ್ನ ಆಟೋಮೊಬೈಲ್ ದಿಗ್ಗಜ ಹೋಂಡಾ ಭಾರತದಲ್ಲಿ ತನ್ನ ಕೆಲವೊಂದು ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ್ದು, ಜೊತೆಗೆ ಕೆಲವೊಂದು ಉಚಿತ ಅಕ್ಸೆಸರಿಗಳು, ಲಾಯಾಲ್ಟಿ ಪ್ರಯೋಜನಗಳನ್ನು ಸಹ ಘೋಷಿಸಿದೆ.
ಹೋಂಡಾದ ಜನಪ್ರಿಯ ಸೆಡಾನ್ ಆಗಿರುವ ಸಿಟಿ ಮತ್ತು ಎಸ್ಯುವಿ ಹೋಂಡಾ ಡಬ್ಲ್ಯೂಆರ್-ವಿಗಳ ಮೇಲೆ 35,596 ರೂ.ಗಳವರೆಗೂ ರಿಯಾಯಿತಿ ಕೊಡಲಾಗಿದೆ. ಫೆಬ್ರವರಿ 2022ರಲ್ಲಿ ಮಾತ್ರವೇ ಈ ಕೊಡುಗೆ ಇರಲಿದೆ ಎಂದು ಕಂಪನಿ ತಿಳಿಸಿದೆ.
‘ಗ್ರೀನ್ ಟೀ’ ಯಾರ್ಯಾರು ಸೇವಿಸಬಾರದು ಗೊತ್ತಾ…..?
ಹೋಂಡಾ ಜಾಜ಼್
ರೂ. 10,000 ವರೆಗಿನ ನಗದು ರಿಯಾಯಿತಿಗಳು ಅಥವಾ ರೂ. 12,158 ಮೌಲ್ಯದ ಉಚಿತ ಪರಿಕರಗಳ ಜೊತೆಗೆ, ಹೋಂಡಾ ಜಾಜ಼್ ಖರೀದಿಯು ನಿಮಗೆ ರೂ. 33,158 ವರೆಗಿನ ಪ್ರಯೋಜನಗಳನ್ನು ನೀಡಬಹುದು. ಗ್ರಾಹಕರು ಕಾರು ವಿನಿಮಯದ ಮೂಲಕ 5,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಚಾಲ್ತಿಯಲ್ಲಿರುವ ಹೋಂಡಾ ಗ್ರಾಹಕರು ಕಾರ್ ಎಕ್ಸ್ಚೇಂಜ್ನಲ್ಲಿ 7,000 ರೂಪಾಯಿಗಳ ಬೋನಸ್ ಮತ್ತು ಹೆಚ್ಚುವರಿ 5,000 ರೂಪಾಯಿಗಳ ಲಾಯಲ್ಟಿ ಬೋನಸ್ ಅನ್ನು ಪಡೆಯಬಹುದು. ಇದಲ್ಲದೇ, ಕಂಪನಿಯು 4,000 ರೂಪಾಯಿಯಷ್ಟು ಕಾರ್ಪೊರೇಟ್ ರಿಯಾಯಿತಿಯನ್ನು ಸಹ ನೀಡುತ್ತದೆ.
ವಿನಿಮಯ ಪ್ರಯೋಜನಗಳು ಮತ್ತು 5,000- 8,000 ರೂ. ವರೆಗಿನ ಕಾರ್ಪೊರೇಟ್ ರಿಯಾಯಿತಿಗಳ ಜೊತೆಗೆ, ಹೋಂಡಾ ಸಿಟಿಯ ಗ್ರಾಹಕರು 10,000ರೂ. ವರೆಗೆ ನಗದು ರಿಯಾಯಿತಿ ಅಥವಾ 10,500 ರೂ. ಮೌಲ್ಯದ ಉಚಿತ ಬಿಡಿಭಾಗಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಅಸ್ತಿತ್ವದಲ್ಲಿರುವ ಹೋಂಡಾ ಮಾಲೀಕರು 12,000 ರೂ.ಗಳ ವರೆಗೆ ಪ್ರಯೋಜನಗಳನ್ನು ಪಡೆಯಬಹುದು.
ಹೋಂಡಾ ಅಮೇಜ಼್
ಹೊಸ ಹೋಂಡಾ ಅಮೇಜ಼್ನಲ್ಲಿ ಕಾರ್ಪೊರೇಟ್ ಗ್ರಾಹಕರಿಗೆ 4,000 ರೂ.ವರೆಗೂ ರಿಯಾಯಿತಿ ಇದೆ ಮತ್ತು ಎಲ್ಲಾ ಈ ಕಾರಿನ ಎಲ್ಲಾ ರೂಪಾಂತರಗಳ ಖರೀದಿ ಮೇಲೆ 15,000 ರೂ.ವರೆಗೆ ಭಿನ್ನವಾದ ಪ್ರಯೋಜನಗಳು ಲಭ್ಯವಿದೆ. ಇದರೊಂದಿಗೆ, ಚಾಲ್ತಿಯಲ್ಲಿರುವ ಹೋಂಡಾ ಗ್ರಾಹಕರು 6,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 5,000 ರೂಪಾಯಿಗಳ ಲಾಯಲ್ಟಿ ಬೋನಸ್ ಅನ್ನು ಪಡೆಯಬಹುದು.
ಹೋಂಡಾ ಸಿಟಿ (ನಾಲ್ಕನೇ ತಲೆಮಾರು)
ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ಖರೀದಿಯು ನಿಮಗೆ 7,000 ರೂಪಾಯಿಗಳ ವಿನಿಮಯ ಪ್ರಯೋಜನ ಮತ್ತು ಚಾಲ್ತಿಯಲ್ಲಿರುವ ಹೋಂಡಾ ಗ್ರಾಹಕರಿಗೆ ಹೆಚ್ಚುವರಿಯಾಗಿ 5,000 ರೂ.ಗಳ ಬೋನಸ್ನೊಂದಿಗೆ ಬರುತ್ತದೆ. ಕಂಪನಿಯು 8,000 ರೂ.ಗಳಷ್ಟು ಕಾರ್ಪೊರೇಟ್ ರಿಯಾಯಿತಿಯನ್ನು ಸಹ ನೀಡುತ್ತಿದೆ.
ಹೋಂಡಾ WR-V
ಹೋಂಡಾ WR-V ಮೇಲೆ 26,000 ರೂ. ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇದರಲ್ಲಿ 10,000 ರೂ. ವಿನಿಮಯ ರಿಯಾಯಿತಿ ಮತ್ತು 4,000 ರೂ. ಕಾರ್ಪೊರೇಟ್ ರಿಯಾಯಿತಿ ಸೇರಿದೆ. ಜೊತೆಯಲ್ಲಿ, ಚಾಲ್ತಿಯಲ್ಲಿರುವ ಹೋಂಡಾ ಗ್ರಾಹಕರು ಲಾಯಲ್ಟಿ ಬೋನಸ್ ಆಗಿ 5,000 ರೂ. ಮತ್ತು ವಿನಿಮಯ ಬೋನಸ್ ಆಗಿ 7,000 ರೂ.ಗಳವರೆಗೂ ಪ್ರಯೋಜನ ಪಡೆಯಬಹುದು.