ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಅದ್ಭುತ ಪೋಟೋ ಹಂಚಿಕೊಂಡ ಕೇಂದ್ರ ಸಚಿವರು 09-02-2022 7:06AM IST / No Comments / Posted In: India, Featured News, Live News ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಚೆನಾಬ್ ಸೇತುವೆಯ ಕಮಾನು ಚಿತ್ರವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿದ್ದಾರೆ. ಮೋಡಗಳ ಮೇಲಿನ ವಿಶ್ವದ ಅತಿ ಎತ್ತರದ ಕಮಾನು ಚೆನಾಬ್ ಸೇತುವೆ ಎಂಬ ಶೀರ್ಷಿಕೆಯೊಂದಿಗೆ ಸಚಿವರು ಕೂ ಆ್ಯಪ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರವು ಮೋಡಗಳ ಮೇಲೆ ಕಮಾನಿನ ಸೇತುವೆಯನ್ನು ಹೊಂದಿದ್ದು, ಹಿಂದೆ ಎತ್ತರವಾಗಿ ನಿಂತಿರುವ ಪರ್ವತಗಳನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಚೆಬಾನ್ ಸೇತುವೆಯು 1315 ಮೀಟರ್ ಉದ್ದವಿದೆ. ಹಾಗೂ ಕಾಶ್ಮೀರ ಕಣಿವೆಗೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಚೆನಾಬ್ ಸೇತುವೆಯು ನದಿಯ ತಳ ಮಟ್ಟದಿಂದ 359 ಮೀಟರ್‌ಗಳಷ್ಟು ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದು ಫ್ರಾನ್ಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಕೂ ಆಪ್‌ನಲ್ಲಿ ಇನ್ನೂ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಕೋನಗಳಿರುವ ಸೇತುವೆಯ ಕಮಾನುವಿನ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನು ಎಂಜಿನಿಯರಿಂಗ್ ಅದ್ಭುತ ಎಂದು ಅವರು ಬಣ್ಣಿಸಿದ್ದಾರೆ. ಈ ಸೇತುವೆಯು ಕಾಶ್ಮೀರ ಕಣಿವೆಗೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ ಯೋಜನೆಯ ಭಾಗವಾಗಿ ಚೆನಾಬ್ ರೈಲು ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಅದ್ಭುತ ಫೋಟೋ ಕಂಡ ನೆಟ್ಟಿಗರು ವ್ಹಾವ್ ಎಂದು ಉದ್ಘರಿಸಿದ್ದಾರೆ.