ರಿಲಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿತ್ತು. ಇದಾದ್ಮೇಲೆ ರಿಲಾಯನ್ಸ್ ಜಿಯೋ ಮೊಬೈಲ್ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗ್ತಿದೆ. ಇದೀಗ ಕಂಪನಿ ಮತ್ತೊಂದು ಕ್ಷೇತ್ರಕ್ಕೆ ಲಗ್ಗೆಯಿಡ್ತಿದೆ. ಲ್ಯಾಪ್ ಟಾಪ್ ಕ್ಷೇತ್ರದಲ್ಲಿ ತಲ್ಲಣ ಮೂಡಿಸಲು ಸಿದ್ಧತೆ ನಡೆದಿದೆ. ಶೀಘ್ರದಲ್ಲಿಯೇ ಕಂಪನಿ ಲ್ಯಾಪ್ಟಾಪ್ ಬಿಡುಗಡೆ ಮಾಡಲಿದೆ ಎನ್ನಲಾಗ್ತಿದೆ. ಜಿಯೋ ಇದಕ್ಕೆ ಜಿಯೋಬುಕ್ ಎಂದು ನಾಮಕರಣ ಮಾಡಿದೆ.
ಕಡಿಮೆ ಬೆಲೆಗೆ ಜಿಯೋ ಲ್ಯಾಪ್ ಟಾಪ್ ಲಭ್ಯವಾಗಲಿದೆ ಎಂದು ಮೂಲಗಳು ಹೇಳಿವೆ. ಆದ್ರೆ ಬೆಲೆ ಎಷ್ಟು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಜಿಯೋ ಬುಕ್ ಇಂಟೆಲ್ನ x86 ಪ್ರೊಸೆಸರ್ ಹೊಂದಿರುವುದಿಲ್ಲ ಎನ್ನಲಾಗಿದೆ. ಇದು ARM ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದೆ. ವಿಂಡೋಸ್ 10ನ ARM ಆವೃತ್ತಿ ಹೊಂದಿರಲಿದೆ.
ಆಮ್ಡೋರ್ ಡಿಜಿಟಲ್ ಟೆಕ್ನಾಲಜಿ ಕಂಪನಿ ಲಿಮಿಟೆಡ್ ಈ ಲ್ಯಾಪ್ ಟಾಪ್ ಸಿದ್ಧಪಡಿಸಲಿದೆ. ಜಿಯೋ ಬ್ರಾಂಡ್ ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇದು ಬಿಡುಗಡೆಯಾಗಲಿದೆ ಎಂದು ಮೂಲಗಳು ಹೇಳಿವೆ. ಜಿಯೋ ಬುಕ್ 2ಜಿಬಿ ರ್ಯಾಮ್ ಮತ್ತು ಮೀಡಿಯಾಟೆಕ್ ಎಂಟಿ8788 ಚಿಪ್ಸೆಟ್ನಿಂದ ನಡೆಯಲಿದೆ ಎನ್ನಲಾಗ್ತಿದೆ. ಜಿಯೋ ಬುಕ್ ಲ್ಯಾಪ್ ಟಾಪ್ ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿಯನ್ನು ಹೊರ ಹಾಕಿಲ್ಲ.